ಬೆಂಗಳೂರು: ಡಿ.ಕೆ.ಶಿವಕುಮಾರ್ ಮನೆ ದೇವರೇ ಸುಳ್ಳು. ಸುಳ್ಳು ಅಂದರೆ ಡಿಕೆಶಿ, ಡಿಕೆಶಿ ಅಂದರೆ ಸುಳ್ಳು ಎಂದು ಮಾಜಿ ಡಿಸಿಎಂ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತ ಶಾಸಕರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಡಿ.ಕೆ.ಶಿವಕುಮಾರ್ ವ್ಯಾಖ್ಯಾನ ಮಾಡಿದ್ದಾರೆ. ಧಮ್ಕಿ, ನಾಟಕ. ಸುಳ್ಳು ಹೇಳುವುದೇ ಡಿಕೆಶಿಯವರ ಕೆಲಸ. ಅವರ ಮಾತನ್ನು ಯಾರೂ ಕೇಳಲ್ಲ. ಸುಪ್ರೀಂ ಕೋರ್ಟ್ ಅತೃಪ್ತರ ಪರ ತೀರ್ಪು ನೀಡಿದೆ. ಆದರೆ ಅದನ್ನು ತಮ್ಮದೇ ರೀತಿ ಡಿಕೆಶಿ ವ್ಯಾಖ್ಯಾನಿಸಿದ್ದಾರೆ. ಕಾನೂನು ಪಂಡಿತನ ರೀತಿ ಹೇಳಿದ್ದಾರೆ. ಅದನ್ನು ಯಾರೂ ನಂಬಬೇಡಿ. ಗೊಂದಲ ಹುಟ್ಟುಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಅಧಿಕಾರ ಇದ್ದಾಗ ಯಾರಿಗೂ ಸಹಾಯ ಮಾಡಲಿಲ್ಲ. ಅಧಿಕಾರ ಹೋಗುವಾಗ ಬಾರಪ್ಪ ಎಂದು ಕರೆಯುವ ಪ್ರವೃತ್ತಿ ಡಿಕೆಶಿಯದ್ದು. ಸುಪ್ರೀಂ ಕೋರ್ಟ್ ಆದೇಶ ಬರುವವರೆಗಾರೂ ಸುಳ್ಳು ಹೇಳುವುದನ್ನು ಬಿಡಬೇಕು ಎಂದರು.