ETV Bharat / city

ಅರ್ಚಕರು ಮನುಷ್ಯರಲ್ವಾ, ಲಸಿಕೆ ಕೊಟ್ಟರೆ ತಪ್ಪೇನು: ಡಿಸಿಎಂ ಸಮರ್ಥನೆ

ಸ್ಲಂನಲ್ಲಿ ಹೆಚ್ಚಿನ ಜನಕ್ಕೆ ಲಸಿಕೆ ಕೊಟ್ಟಿದ್ದೇವೆ. ಕಾಂಗ್ರೆಸ್​ನವರು ಎಷ್ಟು ಜನ ಸ್ಲಂಗೆ ಹೋಗಿದ್ದಾರೆ? ಬೆರಳು ತೋರಿಸೋದು ಬೇಡ. ಅರ್ಚಕರಿಗೆ ಲಸಿಕೆ ಕೊಡಬಾರದು ಅಂತ ಕಾಂಗ್ರೆಸ್​ನವರು ಹೇಳುತ್ತಿದ್ದಾರಾ? ಅರ್ಚಕರು ಮನುಷ್ಯರಲ್ವಾ? ಟಾರ್ಗೆಟ್ ಮಾಡಿ ಕಾಂಗ್ರೆಸ್ ನಾಯಕರು ಮಾತಾಡಬಾರದು ಎಂದು ಜಾತಿ ಹೆಸರು ಪ್ರಸ್ತಾಪಕ್ಕೆ ಡಿಸಿಎಂ ಅಶ್ವತ್ಥ್​ ನಾರಾಯಣ್​ ಕಿಡಿಕಾರಿದರು.

dcm ashwath narayan
ಡಿಸಿಎಂ ಅಶ್ವತ್ಥ್​ ನಾರಾಯಣ್​
author img

By

Published : Jun 2, 2021, 5:40 PM IST

ಬೆಂಗಳೂರು: ಅರ್ಚಕರು ಮನುಷ್ಯರಲ್ವಾ? ಟಾರ್ಗೆಟ್ ಮಾಡಿ ಕಾಂಗ್ರೆಸ್ ಮಾತಾಡಬಾರದು. ಅರ್ಚಕರು ಹೆಚ್ಚಿನ ಜನರ ಸಂಪರ್ಕಕ್ಕೆ ಬರುತ್ತಾರೆ. ಹಾಗಾಗಿ ಇವರ ಸುರಕ್ಷತೆಗೆ ಲಸಿಕೆ ಕೊಟ್ಟಿದೀವಿ. ಇದರಲ್ಲಿ ತಪ್ಪೇನಿದೆ ಎಂದು ಅರ್ಚಕರಿಗೆ ಪ್ರತ್ಯೇಕವಾಗಿ ಲಸಿಕೆ ಕೊಡಿಸಿದ ಕ್ರಮವನ್ನು ಡಿಸಿಎಂ ಅಶ್ವತ್ಥ ನಾರಾಯಣ್ ಸಮರ್ಥಿಸಿಕೊಂಡಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ನವರು ಜಾತಿ ಆಧಾರಿತ ವೋಲೈಕೆ ಮಾಡುತ್ತಾರೆಯೇ ಹೊರತು ನಾವಲ್ಲ. ಮಲ್ಲೇಶ್ವರದ ಏಳೂ ಸ್ಲಂಗಳಲ್ಲಿ ಮನೆಮನೆಗಳಿಂದ ಕರೆದು ಲಸಿಕೆ ಹಾಕುತ್ತಿದ್ದೇವೆ. ವಿಶೇಷವಾಗಿ ಬೀದಿ ವ್ಯಾಪಾರಿಗಳು, ಚಾಲಕರು, ಕಟ್ಟಡ ಕಾರ್ಮಿಕರು, ಅಂಗವಿಕಲರು, ಮನೆ ಕೆಲಸದವರಿಗೆ ಆದ್ಯತೆ ಮೇರೆಗೆ ಲಸಿಕೆ ಹಾಕುತ್ತಿದ್ದೇವೆ. ನಾವು ಜಾತಿ ಕೇಳಿ ಲಸಿಕೆ ಹಾಕುತ್ತಿಲ್ಲ. ಸ್ಲಂಗಳಲ್ಲಿ ಮನೆ ಬಾಗಿಲಿಗೆ ಹೋಗಿ ಲಸಿಕೆ ಹಾಕುತ್ತಿದ್ದೇವೆ. ನಿರಾಧಾರಾವಾಗಿ ಕಾಂಗ್ರೆಸ್ ಆರೋಪ ಮಾಡೋದು ಸರಿಯಲ್ಲ. ಇಷ್ಟು ಕೀಳು ಮಟ್ಟದಲ್ಲಿ ಯೋಚನೆ ಮಾಡೋರು ಕಾಂಗ್ರೆಸ್​ನವರು ಎಂದು ಕೈ ನಾಯಕರಿಗೆ ತಿರುಗೇಟು ನೀಡಿದರು.

ಮಲ್ಲೇಶ್ವರದಲ್ಲಿ ಜಾತಿ ಆಧಾರಿತ ಲಸಿಕೆ ಹಾಕಲಾಗುತ್ತಿದೆ ಎಂದು ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ. ನಮ್ಮ ಸರ್ಕಾರದಲ್ಲಿ ಜಾತಿ ಆಧಾರಿತ ಅನ್ನೋದು ಯಾವುದೂ ಇಲ್ಲ. ಲಸಿಕೆ ಕಾರ್ಯಕ್ರಮ ಯಶಸ್ವಿ ಆಗಬಾರದು ಅನ್ನೋದು ಕಾಂಗ್ರೆಸ್ ನಿಲುವು. ಕೆಲವರನ್ನು ಗೊಂದಲ ಮೂಡಿಸಲು ಕಳಿಸಿದ್ದಾರೆ. ನನ್ನ ಕ್ಷೇತ್ರದಲ್ಲಿ 9 ಸಾವಿರ ಜನಕ್ಕೆ ಲಸಿಕೆ ಹಾಕಲಾಗಿದೆ. ಕಾಂಗ್ರೆಸ್ ಶಾಸಕರು ಸ್ಲಂನಲ್ಲಿ ಹೋಗಿ ಲಸಿಕೆ ಹಾಕಿದ್ದಾರಾ? ನಾವು ಸದುದ್ದೇಶದಿಂದ ರಾಜಕಾರಣ ಮಾಡುತ್ತೇವೆ. ಜಾತಿ ಆಧಾರಿತ ಹೇಳಿಕೆ ಕೊಡೋ ಕಾಂಗ್ರೆಸ್​ನವರಿಗೆ ನಾಚಿಕೆ ಆಗಬೇಕು. ವಿಧಾನ ಪರಿಷತ್​ ಸದಸ್ಯ ಬಿ ಕೆ ಹರಿಪ್ರಸಾದ್ ತಮ್ಮ ಅನುಭವಕ್ಕಾದರೂ ಬೆಲೆ ಕೊಟ್ಟು ಮಾತಾಡಲಿ ಎಂದರು.

ಸ್ಲಂನಲ್ಲಿ ಹೆಚ್ಚಿನ ಜನಕ್ಕೆ ಲಸಿಕೆ ಕೊಟ್ಟಿದ್ದೇವೆ. ಕಾಂಗ್ರೆಸ್​ನವರು ಎಷ್ಟು ಜನ ಸ್ಲಂಗೆ ಹೋಗಿದ್ದಾರೆ? ಬೆರಳು ತೋರಿಸೋದು ಬೇಡ. ಅರ್ಚಕರಿಗೆ ಲಸಿಕೆ ಕೊಡಬಾರದು ಅಂತ ಕಾಂಗ್ರೆಸ್​ನವರು ಹೇಳುತ್ತಿದ್ದಾರಾ? ಅರ್ಚಕರು ಮನುಷ್ಯರಲ್ವಾ? ಟಾರ್ಗೆಟ್ ಮಾಡಿ ಕಾಂಗ್ರೆಸ್ ಮಾತಾಡಬಾರದು ಎಂದು ಜಾತಿ ಹೆಸರು ಪ್ರಸ್ತಾಪಕ್ಕೆ ಕಿಡಿಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.