ETV Bharat / city

ಹಲವು ಇಲಾಖೆಗಳಿಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ... ಅಧಿಕಾರಿಗಳಿಗೆ ತರಾಟೆ!

ನಾಗರೀಕ ಸೇವಾ ಇಲಾಖೆಗಳಲ್ಲಿ ಸರಿಯಾಗಿ ಪ್ರಮಾಣ ಪತ್ರಗಳನ್ನು ನೀಡದೆ ಕಾಲಹರಣ ಸೇರಿದಂತೆ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಇಲಾಖೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ತಪ್ಪಿತಸ್ಥರಿಗೆ ಮೈಚಳಿ ಬಿಡಿಸಿ, ಸೂಕ್ತ ಕ್ರಮ ಕೈಗೊಂಡರು.

ಜಿಲ್ಲಾಧಿಕಾರಿ ದಿಢೀರ್ ಭೇಟಿ
author img

By

Published : Jun 19, 2019, 3:43 AM IST

ಬೆಂಗಳೂರು: ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್, ಬೆಂಗಳೂರು ಪೂರ್ವ ತಾಲೂಕಿನ ಕೆಆರ್ ಪುರಂ ತಹಸೀಲ್ದಾರ್ ಕಚೇರಿ, ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ದಿಢೀರ್​ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಭೇಟಿ ಸಂದರ್ಭದಲ್ಲಿ ತಹಸೀಲ್ದಾರ್ ರಾಮ್ ಲಕ್ಷ್ಮಣ್ ಸೇರಿದಂತೆ ಅಧಿಕಾರಿಗಳು ಗೈರಾಗಿದ್ದು ಕಂಡು ಬಂದಿದ್ದು, ಅಂತಹ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಸೂಕ್ತ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು. ಅಲ್ಲದೇ ಮೇಲಾಧಿಕಾರಿಗಳ ಗಮನಕ್ಕೆ ತರದೆ ನಾಲ್ಕು ದಿನ ರಜೆ ಮೇಲಿದ್ದ ಗ್ರೇಡ್-2 ತಹಸೀಲ್ದಾರ್ ಶಾರದಮ್ಮನನ್ನು ಅಮಾನತು ಮಾಡಿದರು.

ಹಲವು ಇಲಾಖೆಗಳಿಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

ನಂತರ ಕೆಆರ್ ಪುರಂನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಅವರು ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯುತ್ತಿದೆಯೋ ಇಲ್ಲವೋ ಎಂದು ವಿಚಾರಿಸಿದರು. ಆಸ್ಪತ್ರೆ ಭೇಟಿ ವೇಳೆ ಔಷಧಾಲಯದಲ್ಲಿ ಅವಧಿ ಮೀರಿದ ಮಾತ್ರೆಗಳನ್ನು ಸೀಜ್ ಮಾಡಿ, ಫಾರ್ಮಸಿಸ್ಟ್​​ಗಳಾದ ಶಕೀಲಾ, ವನಜಾಕ್ಷಿ ಹಾಗೂ ಪ್ರಿಯದರ್ಶಿನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಆಸ್ಪತ್ರೆಯಲ್ಲಿನ ಅವಧಿ ಮೀರಿದ ಔಷಧಿಗಳ ದಾಸ್ತಾನಿನ ಬಗ್ಗೆ ಪ್ರತಿಕ್ರಿಯೆ ನೀಡಿದ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಚಂದ್ರಶೇಖರ್, ಫಾರ್ಮಸಿಸ್ಟ್​ಗಳ ಬೇಜವಾಬ್ದಾರಿಯಿಂದ ಘಟನೆ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಂತರ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಅಲ್ಲಿ ಊಟದಲ್ಲಿನ ಶುಚಿತ್ವವನ್ನು ಪರಿಶೀಲಿಸಿದರು.

ನಾಗರೀಕ ಸೇವಾ ಇಲಾಖೆಗಳಲ್ಲಿ ಸರಿಯಾಗಿ ಪ್ರಮಾಣಪತ್ರಗಳನ್ನು ನೀಡದೆ ಕಾಲಹರಣ ಸೇರಿದಂತೆ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಸುಮಾರು ದಿನಗಳಿಂದ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ತಪ್ಪಿತಸ್ಥರಿಗೆ ಮೈಚಳಿ ಬಿಡಿಸಿ, ಸೂಕ್ತ ಕ್ರಮ ಕೈಗೊಂಡರು.

Intro:ನಾಗರೀಕ ಸೇವೆಯ ಹಲವು ಇಲಾಖೆಗಳಿಗೆ ಜಿಲ್ಲಾಧಿಕಾರಿ ದಿಡೀರ್ ಭೇಟಿ.ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ‌ ಡಿಸಿ.

ಹಲವು ಸಾರ್ವಜನಿಕ ಇಲಾಖೆ ಕಚೇರಿಗಳ ಮೇಲೆ ದೂರು ಬಂದ ಹಿನ್ನೆಲೆಯಲ್ಲಿ ಇಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ ದಿಢೀರನೇ ಭೇಟಿ ನೀಡಿ ಪರಿಶೀಲನೇ ನಡೆಸಿದರು.

ಬೆಂಗಳೂರು ಪೂರ್ವ ತಾಲೂಕಿನ ಕೆಆರ್ ಪುರಂ ತಹಸಿಲ್ದಾರ್ ಕಚೇರಿ, ಸಾರ್ವಜನಿಕರ ಸರ್ಕಾರಿ ಆಸ್ಪತ್ರೆ, ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿನೀಯರ ವಸತಿ ನಿಲಯಕ್ಕೆ ದಿಢೀರನೆ ಭೇಟಿ ನೀಡಿದ ಜಿಲ್ಲಾಧಿಕಾರಿ ವಿಜಯ್ ಶಂಕರ್ ಪರಿಶೀಲನೆ ನಡೆಸಿದರು. ಹನ್ನೊಂದು ಗಂಟೆಯಾದರೂ ತಹಸಿಲ್ದಾರ್ ಕಚೇರಿಯಲ್ಲಿ ತಹಸಿಲ್ದಾರ್ ರಾಮ್ ಲಕ್ಷ್ಮಣ್ ಸೇರಿ ಗೈರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು. ಮೇಲಾಧಿಕಾರಿಗಳ ಗಮನಕ್ಕೆ ತರದೆ ನಾಲ್ಕು ದಿನಗಳು ರಜೆ ಮೇಲೆಯಿದ್ದ ಗ್ರೇಡ್-2 ತಹಸಿಲ್ದಾರ್ ಶಾರಧಮ್ಮನನ್ನು ಅಮಾನತು ಮಾಡಲಾಯಿತು.

Body:ತಾಲೂಕು ಕಚೇರಿ ಬೇಟಿ ನಂತರ ಕೆಆರ್ ಪುರಂನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಅವರು ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯುತ್ತದೆ ಇಲ್ಲವೋ ಎಂದು ವಿಚಾರಿಸಿದರು. ಆಸ್ಪತ್ರೆ ಭೇಟಿ ವೇಳೆ ಔಷಧಲಯದಲ್ಲಿ ಅವಧಿ ಮೀರಿದ ಮಾತ್ರೆಗಳನ್ನು ಸೀಜ್ ಮಾಡಿ, ಫಾರ್ಮಸಿಸ್ಟ್ ಗಳಾದ ಶಕೀಲ, ವನಜಾಕ್ಷೀ, ಹಾಗೂ ಪ್ರೀಯದರ್ಶಿನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅಲ್ಲಿಂದ ತೆರಳಿದ ನಂತರ ಹಿಂದುಳಿದ ವರ್ಗಗಳ ವಿದ್ಯಾರ್ಥಿನೀಯರ ವಸತಿ ನಿಲಯಕ್ಕೆ ಭೇಟಿ ನೀಡಿ ಊಟದಲ್ಲಿ ಶುಚಿತ್ವವನ್ನು ಪರಿಶೀಲಿಸಿದರು. ಆಸ್ಪತ್ರೆಯಲ್ಲಿನ ಅವಧಿ ಮೀರಿದ ಔಷಧಿಗಳ ದಾಸ್ತಾನಿನ ಬಗ್ಗೆ ಪ್ರತಿಕ್ರಿಯೆ ನೀಡಿದ ತಾಲೂಕು ಆಡಳಿತ ವೈದ್ಯಾದಿಕಾರಿ ಡಾ.ಚಂದ್ರಶೇಖರ್ ಫಾರ್ಮಸಿಸ್ಟ್ ಗಳ ಬೇಜವಾಬ್ದಾರಿಯಿಂದ ಘಟನೆ ನಡೆದಿದ್ದು, ತಪ್ಪಿಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

Conclusion:ಸುಮಾರು ದಿನಗಳಿಂದ ಸಾರ್ವಜನಿಕರಿಂದ ನಾಗರೀಕ ಸೇವೆ ಇಲಾಖೆಗಳಲ್ಲಿ ಸರಿಯಾಗಿ ಪ್ರಮಾಣ ಪತ್ರಗಳನ್ನು ನೀಡದೇ ಕಾಲಹರಣ ಸೇರಿಂದಂತೆ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ತಪ್ಪಿತಸ್ಥರಿಗೆ ಮೈಚಳಿ ಬಿಡಿಸಿದ್ದಲ್ಲದೇ ಸೂಕ್ತ ಕ್ರಮ ಕೈಗೊಂಡರು.

ಧರ್ಮರಾಜು ಎಂ ಕೆಆರ್ ಪುರ.

ಬೈಟ್: ವಿಜಯ್ ಶಂಕರ್, ಬೆಂ,ನಗರ ಜಿಲ್ಲಾಧಿಕಾರಿ

ಚಂದ್ರಶೇಖರ್, ತಾಲೂಕು ಆರೋಗ್ಯಡಳಿತ ಅಧಿಕಾರಿ,
ETV Bharat Logo

Copyright © 2024 Ushodaya Enterprises Pvt. Ltd., All Rights Reserved.