ETV Bharat / city

ಡ್ರಗ್ಸ್‌ ಸೇವಿಸಬೇಡ ಎಂದ ಅಪ್ಪನಿಗೆ ಮಧ್ಯೆರಾತ್ರಿ ಕೊಳ್ಳಿ ಇಟ್ಟಳಾ ಪುತ್ರಿ?! - daughter killed the father?

ಮಾದಕ ವ್ಯಸನ ಎಷ್ಟು ಕೆಟ್ಟದ್ದು ಎಂಬುದಕ್ಕೆ ನೈಜ ಉದಾಹರಣೆ ಬೆಂಗಳೂರಿನಲ್ಲಿ ನಡೆದ ಈ ಘಟನೆ. ಡ್ರಗ್ಸ್​ ಸೇವನೆಗೆ ತಂದೆ ಅಡ್ಡಿಪಡಿಸಿದ್ದಕ್ಕೆ ಮಗಳೇ ಅಪ್ಪನನ್ನು ಬೆಂಕಿ ಹಚ್ಚಿ ಕೊಲೆ ಮಾಡಿರುವ ಆರೋಪ ಪ್ರಕರಣ ಬೆಂಗಳೂರಲ್ಲಿ ನಡೆದಿದೆ.

ಅಪ್ಪನನ್ನೇ ಕೊಂದಳಾ ಮಗಳು..?
author img

By

Published : Aug 18, 2019, 4:26 PM IST

Updated : Aug 18, 2019, 5:49 PM IST

ಬೆಂಗಳೂರು: ಡ್ರಗ್ಸ್ ಸೇವನೆಗೆ ಅಡ್ಡಿಯಾದ ಅಪ್ಪನನ್ನೇ ಮಗಳು ಬೆಂಕಿ ಹಚ್ಚಿ ಕೊಲೆ ಮಾಡಿರುವ ಆರೋಪ ಪ್ರಕರಣ ನಗರದಲ್ಲಿ ನಡೆದಿದೆ.

ರಾಜಾಜಿನಗರದ ಭಾಷ್ಯಂ ಸರ್ಕಲ್​ನ 5ನೇ ಬ್ಲಾಕ್​ನ ಮನೆಯೊಂದರಲ್ಲಿ ಉದ್ಯಮಿ ಜಯಕುಮಾರ್ (41) ಎಂಬುವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಜಯಕುಮಾರ್ ಮಗಳು ಬೆಂಕಿ ತಾಗಿದ ಪರಿಣಾಮ ಖಾಸಗಿ ಆಸ್ಪತ್ರೆಗೆ ದಾಖಲಿಸಲಿಸಲಾಗಿದೆ. ಬಟ್ಟೆ ಅಂಗಡಿ ಮಾಲೀಕರಾಗಿದ್ದ ಜಯಕುಮಾರ್, ನಿನ್ನೆ ರಾತ್ರಿ ತಮ್ಮ ಮಗಳು ಡ್ರಗ್ಸ್ ಸೇವಿಸುತ್ತಿರುವುದನ್ನು ಕಂಡು ಅಡ್ಡಿಪಡಿಸಿದ್ದರು ಎನ್ನಲಾಗ್ತಿದೆ. ತಾನು ಡ್ರಗ್ಸ್ ಸೇವಿಸೋದನ್ನ ತಡೆದಿದ್ದಕ್ಕೆ ಅಪ್ಪನ ವಿರುದ್ಧವೇ ಕೋಪಗೊಂಡಿದ್ದಳೆನ್ನಲಾದ ಪುತ್ರಿಯು ಅಪ್ಪ ಜಯಕುಮಾರ್ ಮಲಗಿದ್ದಾಗ ಬೆಂಕಿ ಹಚ್ಚಿದ್ದಾಳೆ ಎಂದು ಶಂಕಿಸಲಾಗಿದೆ.

ಅಪ್ಪನನ್ನೇ ಕೊಂದಳಾ ಮಗಳು..?

ಜಯಕುಮಾರ್ ಪತ್ನಿ ಖಾಸಗಿ ಕೆಲಸದ ನಿಮಿತ್ತ ಪಾಂಡಿಚೇರಿಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ರಾಜಾಜಿನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

Intro:Body:ಡ್ರಗ್ಸ್ ಸೇವನೆಗೆ ಅಡ್ಡಿಯಾದ ಅಪ್ಪನನ್ನೇ ಸಾಯಿಸಿದ್ಲಾ ಮಗಳು ?

ಬೆಂಗಳೂರು: ಡ್ರಗ್ಸ್ ಸೇವನೆ ಅಡ್ಡಿಯಾದ ಅಪ್ಪನನ್ನೇ ಮಗಳು ಬೆಂಕಿ ಹಚ್ಚಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ರಾಜಾಜಿನಗರದ ಭಾಷ್ಯಂ ಸರ್ಕಲ್ ಏರಿಯಾ 5ನೇ ಬ್ಲಾಕ್ ನ ಮನೆಯೊಂದರಲ್ಲಿ ಉದ್ಯಮಿ ಜೈಕುಮಾರ್ (41) ಎಂಬುವರು ಮೃತಪಟ್ಟವರು.
ಘಟನೆಯಲ್ಲಿ ಜಯಕುಮಾರ್ ಮಗಳು ಉನ್ನತಿಗೂ ಬೆಂಕಿ ತಾಕಿಕೊಂಡ ಪರಿಣಾಮ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಬಟ್ಟೆ ಅಂಗಡಿ ಮಾಲೀಕನಾಗಿದ್ದ ಜಯಕುಮಾರ್ ನಿನ್ನೆ ರಾತ್ರಿ ಮಗಳು ಉನ್ನತಿ ಮನೆಯಲ್ಲಿ ಡ್ರಗ್ಸ್ ಸೇವನೆ‌ಗೆ ಜಯಕುಮಾರ್ ಅಡ್ಡಿಪಡಿಸಿದ್ದರು.‌‌‌ ಈ ವೇಳೆ ಕೋಪದಿಂದ ತನ್ನ ಅಪ್ಪ ಮಲಗಿದಾಗ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಜಯಕುಮಾರ್ ಪತ್ನಿ ಮನೆಯಲ್ಲಿ ಇರಲಿಲ್ಲ ಹೊರಗೆ ತೆರಳಿದ್ದರು. ಖಾಸಗಿ ಕೆಲಸದ ನಿಮಿತ್ತ ಪಾಂಡಿಚೇರಿಗೆ ಪತ್ನಿ ತೆರಳಿದ್ದರು. ವಿಷಯ ತಿಳಿದು ಇದೀಗ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
ಸ್ಥಳಕ್ಕೆ ರಾಜಾಜಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.

Conclusion:
Last Updated : Aug 18, 2019, 5:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.