ETV Bharat / city

ಹವಾಲ ಪ್ರಕರಣ... ನಾಳೆ ಡಿಕೆಶಿ ಹಣೆಬರಹ ನಿರ್ಧರಿಸಲಿದೆ ಹೈಕೋರ್ಟ್​ - ಮಾಜಿ ಸಚಿವ ಡಿ. ಕೆ ಶಿವಕುಮಾರ್

ಮಾಜಿ ಸಚಿವ ಡಿ. ಕೆ ಶಿವಕುಮಾರ್ ವಿರುದ್ಧ ದಾಖಲಾಗಿರುವ  ಅಕ್ರಮ ಹಣ ಪ್ರಕರಣಕ್ಕೆ  ಸಂಬಂಧಿಸಿದಂತೆ ಇಡಿ ಜಾರಿಗೊಳಿಸಿದ ಸಮನ್ಸ್​ ಅನ್ನು ರದ್ದು ಪಡಿಸಬೇಕೆಂದು  ಕೋರಿ ಸಲ್ಲಿಸಿದ್ದ  ಅರ್ಜಿಯ ಕುರಿತು ನಾಳೆ ಹೈಕೋರ್ಟ್​ ಅಂತಿಮ ತೀರ್ಪು ಪ್ರಕಟ ಮಾಡಲಿದೆ.

ಡಿಕೆಶಿ ಹವಾಲಾ ಪ್ರಕರಣ
author img

By

Published : Aug 28, 2019, 9:04 PM IST

ಬೆಂಗಳೂರು: ಮಾಜಿ ಸಚಿವ ಡಿ. ಕೆ ಶಿವಕುಮಾರ್ ವಿರುದ್ಧ ದಾಖಲಾಗಿರುವ ಅಕ್ರಮ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಜಾರಿಗೊಳಿಸಿದ ಸಮನ್ಸ್​ ಅನ್ನು ರದ್ದು ಪಡಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ನಾಳೆ ಹೈಕೋರ್ಟ್​ ಅಂತಿಮ ತೀರ್ಪು ಪ್ರಕಟ ಮಾಡಲಿದೆ.

ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ತೀರ್ಪಿಗೆ ಸಂಬಂಧ ಪಟ್ಟಂತೆ ಉಕ್ತಲೇಖನ ನೀಡುತ್ತಿದ್ದು, ನಾಳೆ ತೀರ್ಪನ್ನ ಪ್ರಕಟಿಸುವುದಾಗಿ ನ್ಯಾಯಲಯ ತಿಳಿಸಿದೆ. ದೆಹಲಿಯ ಫ್ಲಾಟ್​ವೊಂದರಲ್ಲಿ 8.59 ಕೋಟಿ ರೂ. ಹಣ ಸಿಕ್ಕ ಬಗ್ಗೆ‌ ಇಡಿ ಸಮನ್ಸ್ ಜಾರಿ ಮಾಡಿದ್ದು, ಹೈಕೋರ್ಟ್ ನಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಇದನ್ನು ಪ್ರಶ್ನಿಸಿದ್ದರು. ಜೊತೆಗೆ ಪ್ರಸಿದ್ಧ ವಕೀಲ ಕಪಿಲ್ ಸಿಬಲ್ ಡಿಕೆಶಿ ಪರ ವಾದ ಮಂಡಿಸಿದ್ದರು.

ಈ ಪ್ರಕರಣದ ಕುರಿತು ಹೈಕೋರ್ಟ್ ನಾಳೆ ಅಂತಿಮ ತೀರ್ಪು ನೀಡುವ ಸಂಭವವಿದ್ದು, ಎಲ್ಲರಲ್ಲೂ ಕಾತುರ ಮನೆಮಾಡಿದೆ.

Intro:ಡಿಕೆಶಿ ಹವಳ ಪ್ರಕರಣ
ನಾಳೆ ಹೈಕೋರ್ಟಲ್ಲಿ ಅಂತಿಮ ತೀರ್ಪು

ಆದಾಯಕ್ಕು ಮೀರಿ ಅಕ್ರಮ ಸಂಪತ್ತು ಹೊಂದಿದ ಹವಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಜಾರಿಗೊಳಿಸಿದ ಸಮನ್ಸನ್ನ ರದ್ದು ಪಡಿಸಬೇಕೆಂದು ಎಂದು ಕೋರಿ ಮಾಜಿ ಸಚಿವ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯ‌ ಮೇಲಿನ ತೀರ್ಪು ನಿಡುವ ಪ್ರಕ್ರಿಯೆಯನ್ನ ಹೈಕೋರ್ಟ್ ಆರಂಭಿಸಿದೆ.

ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ತೀರ್ಪಿಗೆ ಸಂಬಂಧ ಪಟ್ಟಂತೆ ಉಕ್ತಲೇಖನ ನೀಡುತ್ತಿದ್ದು ನಾಳೆ ತೀರ್ಪನ್ನ ಪ್ರಕಟಿಸುವುದಾಗಿ ನ್ಯಾಯಲಯದಲ್ಲಿ ತಿಳಿಸಿದ್ದಾರೆ.
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ತೀರ್ಪಿನ ಕುರಿತು
ಕಾತುರತೆ ಹೆಚ್ಚಾಗಿದ್ದು ಕುತುಹಾಲದಿಂದ ಕಾಯುತ್ತಿದ್ದಾರೆ.

ದೆಹಲಿಯ ಫ್ಲಾಟ್ ನಲ್ಲಿ 8.59ಕೋಟಿ ಹಣ ಸಿಕ್ಕ ಬಗ್ಗೆ‌ ಇಡಿ ಸಮನ್ಸ್ ಜಾರಿ ಮಾಡಿದ್ದು ಹೈಕೋರ್ಟ್ ನಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದರು.

ಪ್ರಸಿದ್ಧ ನ್ಯಾಯವಾದಿ ಕಪಿಲ್ ಸಿಬಲ್ ಡಿಕೆ ಶಿವಕುಮಾರ್ ಪರ ಹೈಕೋರ್ಟ್ನಲ್ಲಿ ವಾದ ಮಂಡಿಸಿ ತಮ್ಮ ಕಕ್ಷಿದಾರರ ವಿರುದ್ಧ
276 C, 277 ಐಟಿ ಸೆಕ್ಷನ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇದರಲ್ಲಿ ಜಾರಿ ನಿರ್ದೇಶನಾಲಯವು 276 C, 277,120 ಬಿ ಒಳಸಂಚು ಪ್ರಕರಣದ ಬಗ್ಗೆ ತನೀಕೆ ಮಾಡುತ್ತಿದೆ .120 ಬಿ ಹೊರತು ಪಡಿಸಿ ಉಳಿದ ಕೇಸ್ ಇಡಿ ವ್ಯಾಪ್ತಿಗೆ ಬರುವುದಿಲ್ಲ. 120 ಬಿ ಕೂಡ ಸ್ವತಂತ್ರ ಅಪರಾಧ ವಾಗುವುದಿಲ್ಲ ಎಂದು ವಾದಿಸಿದ್ದರು‌

ಕ್ರಿಮಿನಲ್ ಪ್ರಕರಣ ದಾಖಲಿಸುವ ಹಂತವಿನ್ನೂ ತಲುಪಿಲ್ಲ ಜಾರಿ ನಿರ್ದೇಶನಾಲಯ ಇಸಿಐಆರ್ ದಾಖಲಿಸಿದ್ದು ಸರಿಯಲ್ಲ.ಇಡಿಗೆ ಕೇಸ್ ದಾಖಲಿಸಿ ತನಿಖೆ ನಡೆಸುವ ಅಧಿಕಾರವೇ ಇಲ್ಲ.ಆದ್ದರಿಂದ ಇಡಿ ದಾಖಲಿಸಿರುವ ದೂರನ್ನ ರದ್ದು ಮಾಡಬೇಕೆಂದು ಕಪಿಲ್ ಸಿಬಲ್ ವಾದ ಮಂಡಿಸಿದ್ರು.

ಇದಕ್ಕೆ ಪ್ರತಿಯಾಗಿ ಇಡಿ ಪರ ವಾದಿಸಿದ ಹಿರಿಯ ವಕೀಲ ಪ್ರಭುಲಿಂಗ ನಾವಡಗಿಯವರು ಕ್ರಿಮಿನಲ್ ಒಳಸಂಚು ಆರೋಪದ ಮೇಲೆ ಇಡಿ ತನಿಖೆ ಮಾಡುತ್ತಿದೆ.. ಅರ್ಜಿದಾರರು ವಿರೋಧಿಸುತ್ತಿರುವ ಸೆಕ್ಷನ್ ಅಡಿಯಲ್ಲಿ ತನಿಖೆ ನಡೆಸಲು ಇಡಿಗೆ ಅವಕಾಶವಿದೆ.ಈ ಪ್ರಕರಣದಲ್ಲಿ ಆರೋಪಿಗಳಾದ ಡಿ.ಕೆ.ಶಿವಕುಮಾರ್ ಕ್ರಿಮಿನಲ್ ಒಳಸಂಚು ನಡೆಸಿರುವುದಕ್ಕೆ ಅಗತ್ಯ ಸಾಕ್ಷ್ಯಗಳಿವೆ ಎಂದು ನ್ಯಾಯಲಯದ ಗಮನಕ್ಕೆ ತಂದಿದ್ದರು.

ಹೈಕೋರ್ಟ್ ಈ ಪ್ರಕರಣದ ಬಗ್ಗೆ ನಾಳೆ ಅಂತಿಮ ತೀರ್ಪು ನೀಡುವ ಸಂಭವ ಇದೆ.

Body:KN_BNG_02_DK_7204498Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.