ಬೆಂಗಳೂರು: ಸೈಬರ್ ಕ್ರೈಂ ಇತ್ತೀಚಿನ ವರ್ಷಗಳ ಹೆಚ್ಚು ಚಾಲ್ತಿಯಿರುವ ಪದ. ಮೋಸ ಹೋದವರಿಗಷ್ಟೇ ಅಲ್ಲದೆ ಸರ್ಕಾರಕ್ಕೂ ತಲೆಬಿಸಿಯಾಗಿದೆ. ಇಂತಹ ಸ್ಮಾರ್ಟ್ ನೆಸ್ ಕ್ರೈಂ ಕಡಿವಾಣಕ್ಕೆ ಮೂಗುದಾರ ಹಾಕಲೇಬೇಕಾದ ಸವಾಲು ಎದುರಾಗಿದೆ. ಕಳೆದ ಐದು ತಿಂಗಳಲ್ಲಿ ನಗರದಲ್ಲಿರುವ 9 ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ 3,500ಕ್ಕಿಂತ ಹೆಚ್ಚು ಕೇಸ್ ದಾಖಲಾಗಿವೆ. ಠಾಣೆಗಳು ಕೇವಲ ಪ್ರಕರಣ ದಾಖಲಿಗಷ್ಟೇ ಸೀಮಿತವಾಗುತ್ತಿದೆ ಹೊರತು ಬೇಧಿಸುವುದಕ್ಕಾಗಲಿ ಅಥವಾ ನಿಯಂತ್ರಣ ಸಂಪೂರ್ಣವಾಗಿ ಸಾಧ್ಯವಾಗುತ್ತಿಲ್ಲ.
ಹೈಟೆಕ್ ಸಿಟಿ, ಡೈನಾಮಿಕ್ ಸಿಟಿ ಎಂದು ಬಿರುದಾಂಕಿತ ಹೊಂದಿರುವ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ 150 ದಿನಗಳಲ್ಲಿ 3,500ಕ್ಕೂ ಹೆಚ್ಚು ಸೈಬರ್ ಕ್ರೈಂ ಪ್ರಕರಣ ದಾಖಲಾಗಿವೆ. ಸದ್ದಿಲ್ಲದೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಖದೀಮರು ತಂತ್ರಜ್ಞಾನವನ್ನ ಸೈಬರ್ ಕ್ರೈಂ ಎಸಗಲು ದಾರಿ ಮಾಡಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಐದು ತಿಂಗಳಲ್ಲಿ 3500 ಸಾವಿರ ಪ್ರಕರಣ ದಾಖಲಾಗಿರುವುದು. ಅಂದರೆ, ಸರಾಸರಿ ನಿತ್ಯ 26 ಸೈಬರ್ ಕ್ರೈಂ ಪ್ರಕರಣ ಬೆಳಕಿಗೆ ಬರುತ್ತಿದೆ.
150 ದಿನಗಳಲ್ಲಿ 200 ಕೋಟಿ ಎಗರಿಸಿದ ಆನ್ ಲೈನ್ ಖದೀಮರು: ನಗರದಲ್ಲಿ ದಿನೇ ದಿನೆ ಸೈಬರ್ ಕ್ರೈಂ ಪ್ರಕರಣ ಅಧಿಕವಾಗುತ್ತಿರುವುದನ್ನ ಮನಗಂಡ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಚಾಲ್ತಿಯಲ್ಲಿದ್ದ ಒಂದು ಸೈಬರ್ ಕ್ರೈಂ ಪೊಲೀಸ್ ಸ್ಟೇಷನ್ ಜೊತೆಗೆ ವಿಭಾಗಕ್ಕೊಂದರಂತೆ ಸೈಬರ್, ಆರ್ಥಿಕ ಹಾಗೂ ನಾರ್ಕೊಟಿರ್ಕ್ (ಸಿಇಎನ್) ಪೊಲೀಸ್ ಠಾಣೆಗಳನ್ನು ತೆರೆಯಿತು.
ಸರ್ಕಾರದ ಉತ್ತಮ ನಡೆಯಾದರೂ ಇದೀಗ ಕೇವಲ ಪ್ರಕರಣ ದಾಖಲಿಸುವುದಕ್ಕೆ ಮಾತ್ರ ಸೀಮಿತವಾದಂತಿದೆ. ಕೆಲವೇ ಪ್ರಕರಣಗಳಲ್ಲಿ ಮಾತ್ರ ಸೈಬರ್ ಖದೀಮರನ್ನು ಮಾತ್ರ ಬಂಧಿಸಲಾಗುತ್ತಿದೆ. ವಂಚಕರು ಐದು ತಿಂಗಳಲ್ಲಿ 200 ಕೋಟಿ ರೂ.ಎಗರಿಸಿದ್ದಾರೆ. ಪ್ರತಿವರ್ಷ ದಾಖಲಾಗುವ 10ರಿಂದ 15 ಸಾವಿರಕ್ಕೂ ಹೆಚ್ಚು ಕೇಸ್ಗಳಲ್ಲಿ ಬೆರಳೆಣಿಕೆಯಷ್ಟು ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ಶೇ.10 ರಷ್ಟು ಸಹ ಚಾರ್ಜ್ ಶೀಟ್ ಸಲ್ಲಿಕೆಯಾಗುತ್ತಿಲ್ಲ.
ಶೇ.20 ರಷ್ಟು ಕೇಸ್ ಸಹ ವಿಲೇವಾರಿಯಾಗುತ್ತಿಲ್ಲ: ಪ್ರತಿವರ್ಷ ಸಿಇಎನ್ ಪೊಲೀಸ್ ಠಾಣೆಗಳಲ್ಲಿ ಸಾವಿರಾರು ಪ್ರಕರಣ ದಾಖಲಾಗುತ್ತದೆ. ಆದರೆ, ಎಲ್ಲ ಪ್ರಕರಣಗಳಲ್ಲಿ ಮುಕ್ತಿಯಾಡುವುದು ಸಾಧ್ಯವಾಗದಿದ್ದರೂ ಕನಿಷ್ಠ ಶೇ.50ಕ್ಕಿಂತ ಹೆಚ್ಚು ಕೇಸ್ ಕ್ಲೋಸ್ ಮಾಡಿದರೆ ಸಮಾಧಾನದ ಸಂಗತಿ. ಈಗಿರುವ 9 ಸಿಇಎನ್ ಪೊಲೀಸ್ ಠಾಣೆಗಳಿದ್ದರೂ ದಾಖಲಾಗುತ್ತಿರುವ ಪ್ರಕರಣಕ್ಕೆ ಹೋಲಿಸಿದರೆ ಇದು ಠಾಣೆಗಳ ಸಂಖ್ಯೆ ಏರಿಸಲೇಬೇಕಿದೆ. ಠಾಣೆಗಳ ಸಂಖ್ಯೆ ಏರಿಕೆ, ಸಿಬ್ಬಂದಿ ಕೊರತೆ, ತಾಂತ್ರಿಕ ಕೌಶಲ್ಯ ಬಗ್ಗೆ ಸಿಬ್ಬಂದಿಗೆ ತರಬೇತಿ ಹಾಗೂ ಸೂಕ್ತ ಮೂಲ ಸೌರ್ಕಯ ಇಲ್ಲದಿರುವುದು ತ್ವರಿತಗತಿಯಲ್ಲಿ ಕೇಸ್ ವಿಲೇವಾರಿಯಾಗದಿರುವುದಕ್ಕೆ ಪ್ರಮುಖ ಕಾರಣಗಳಾಗಿವೆ.
ಕಮಲ್ ಪಂತ್ ಕಮೀಷನರ್ ಆಗಿರುವಾಗ ಆರಂಭಿಸಿದ್ದ ಗೋಲ್ಡನ್ ಅವರ್ ಯೋಜನೆ ಫಲಕಾರಿಯಾಗಿದ್ದು, ಇದರಿಂದ ಖದೀಮರ ಜೋಳಿಗೆಗೆ ಸೇರುತ್ತಿದ್ದ ನೂರಾರು ಕೋಟಿ ತಡೆಯಲು ಸಾಧ್ಯವಾಗಿದೆ. ಗೋಲ್ಡನ್ ಅವರ್ ಯೋಜನೆಯಿಂದ ಲಾಭ ಪಡೆದ ದೂರುದಾರರ ಪ್ರಕರಣಗಳ ಕ್ಲಿಯರ್ ಆಗುತ್ತಿದೆ. ಆದ್ಯಾಗೂ ಶೇಕಡಾ 20ಕ್ಕಿಂತ ಪ್ರಕರಣ ವಿಲೇವಾರಿ ಮಾಡಲು ಸಾಧ್ಯವಾಗುತ್ತಿಲ್ಲ.
ಪಶ್ಚಿಮ ವಿಭಾಗದಲ್ಲಿ ಅತಿ ಹೆಚ್ಚು ಕೇಸ್: ನಗರದಲ್ಲಿ ಇದುವರೆಗೂ ಮೇ ಅಂತ್ಯಕ್ಕೆ 3,684 ಸೈಬರ್ ಕ್ರೈಂ ಪ್ರಕರಣ ದಾಖಲಾಗಿವೆ. ಪಶ್ಚಿಮ ವಿಭಾಗದಲ್ಲಿ ಅತಿ ಹೆಚ್ಚು ಕೇಸ್ 875 ದಾಖಲಾಗಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕೇವಲ 25 ಪ್ರಕರಣ ಮಾತ್ರ ದಾಖಲಾಗಿದೆ. ಈಶಾನ್ಯ ವಿಭಾಗದಲ್ಲಿ 626, ಆಗ್ನೇಯ ವಿಭಾಗದಲ್ಲಿ 366, ಕೇಂದ್ರ ವಿಭಾಗದ ಸೆನ್ ಠಾಣೆಯಲ್ಲಿ 357, ದಕ್ಷಿಣ ವಿಭಾಗದ 456, ಪೂರ್ವ ವಿಭಾಗದಲ್ಲಿ 305, ಉತ್ತರ ವಿಭಾಗದಲ್ಲಿ 333, ವೈಟ್ ಫೀಲ್ಡ್ ವಿಭಾಗದಲ್ಲಿ 341 ಪ್ರಕರಣ ದಾಖಲಾಗಿವೆ.
ಇದನ್ನೂ ಓದಿ: ಕೆಲಸ ನೀಡಿದ ಮೇಸ್ತ್ರಿಯ ಮಗಳಿಗೇ ಕಣ್ಣಾಕಿದ : ತಮಿಳುನಾಡಿಗೆ ಬಾಲಕಿ ಕರೆದೊಯ್ದಿದ್ದ ಯುವಕ ಅಂದರ್