ETV Bharat / city

ವಿದ್ಯುತ್​​ ಬಿಲ್​​ ಪಾವತಿಗೆ ವಿನಾಯಿತಿ ಕೋರಿ ಅರ್ಜಿ ಹಾಕಿದ್ದವರಿಗೆ ಶಾಕ್​ ಕೊಟ್ಟ ಹೈಕೋರ್ಟ್​!

author img

By

Published : Apr 10, 2020, 9:00 PM IST

ರಾಜ್ಯದಲ್ಲಿ‌ ಲಾಕ್​​ಡೌನ್ ಜಾರಿಯಾಗಿರುವುದರಿಂದ ಗ್ರಾಹಕರು ವಿದ್ಯುತ್ ಶುಲ್ಕ ಪಾವತಿ ಮಾಡುವುದನ್ನು ಮೂರು ತಿಂಗಳ ಕಾಲ ತಾತ್ಕಾಲಿಕವಾಗಿ‌ ಮುಂದೂಡಲು ಕೋರಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಹೈಕೋರ್ಟ್ ಬರೋಬ್ಬರಿ 50 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ. ಅರ್ಜಿಯಲ್ಲಿ ಲೋಪ ಇರುವುದನ್ನು ಗಮನಿಸಿದ ಪೀಠ ಈ ಆದೇಶ ನೀಡಿದೆ.

current-bill-counsaction-to-govt-high-court-fine
ವಿದ್ಯುತ್‌ ಬಿಲ್ ವಿನಾಯಿತಿ ಕೇಳಿದ್ದವರಿಗೆ ಕರೆಂಟ್ ಶಾಕ್‌ ಕೊಟ್ಟ ಹೈಕೋರ್ಟ್‌

ಬೆಂಗಳೂರು: ರಾಜ್ಯದಲ್ಲಿ‌ ಲಾಕ್​​ಡೌನ್ ಜಾರಿಯಾಗಿರುವುದರಿಂದ ಗ್ರಾಹಕರು ವಿದ್ಯುತ್ ಶುಲ್ಕ ಪಾವತಿ ಮಾಡುವುದನ್ನು ಮೂರು ತಿಂಗಳ ಕಾಲ ತಾತ್ಕಾಲಿಕವಾಗಿ‌ ಮುಂದೂಡಲು ಕೋರಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಹೈಕೋರ್ಟ್ ಬರೋಬ್ಬರಿ 50 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.

ಬಾಂಕ್‌ಗಳು ಗ್ರಾಹಕರಿಗೆ ಸಾಲದ ಇಎಂಐ ಪಾವತಿಸಲು ಮೂರು ತಿಂಗಳು ಮುಂದೂಡಿರುವಂತೆಯೇ ವಿದ್ಯುತ್ ಬಿಲ್ ಪಾವತಿಸುವುದನ್ನೂ ಮುಂದೂಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಬೆಂಗಳೂರಿನ ಪಿ.ಸಿ.ರಾವ್ ಹಾಗೂ‌ ಕೆ.ಗಣೇಶ್ ನಾಯಕ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿಯಲ್ಲಿ ಲೋಪ ಇರುವುದನ್ನು ಗಮನಿಸಿದ ಪೀಠ, ಅರ್ಜಿ ವಜಾಗೊಳಿಸಿತಲ್ಲದೆ 50 ಸಾವಿರ ದಂಡ ವಿಧಿಸಿ, ಈ ಮೊತ್ತವನ್ನು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಪಾವತಿಸುವಂತೆ ಸೂಚಿಸಿತು.

ಹಾಗಿದ್ದೂ ಅರ್ಜಿಯಲ್ಲಿನ ಕೋರಿಕೆ ಕುರಿತು ಸಹಮತ ವ್ಯಕ್ತಪಡಿಸಿರುವ ಪೀಠ, ಸರ್ಕಾರ ವಿದ್ಯುತ್ ಶುಲ್ಕ ಪಾವತಿ ಮಾಡುವುದನ್ನು ಮುಂದೂಡಲು ನ್ಯಾಯಾಲಯದ ಆದೇಶ ಅಡ್ಡ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ‌ಲಾಕ್​​ಡೌನ್ ಹಿನ್ನೆಲೆಯಲ್ಲಿ ಗ್ರಾಹಕರು ವಿದ್ಯುತ್‌ ಶುಲ್ಕ‌ ಪಾವತಿ ಮಾಡಲು ಕಷ್ಟವಾಗುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ.

ಆದರೆ, ಡಿಜಿಟಲ್ ರೂಪದಲ್ಲಿ ಶುಲ್ಕ ಪಾವತಿಸಲು ಅವಕಾಶ ಇದೆ. ಮುಖ್ಯವಾಗಿ ಶುಲ್ಕ ಪಾವತಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಸರ್ಕಾ‌ರ ಎಲ್ಲೂ ಹೇಳಿಲ್ಲ. ಹೀಗಾಗಿ ಅರ್ಜಿಯನ್ನು ವಿಚಾರಣೆ ನಡೆಸುವುದು ನಿಷ್ಪ್ರಯೋಜಕ.‌‌ ಇಂತಹ ಅರ್ಜಿ ದಾಖಲಿಸುವುದು ಕಾನೂನಿನ ದುರ್ಬಳಕೆಯಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಲೋಪವೇನು?
ಅರ್ಜಿದಾರರು, ವಿದ್ಯುತ್ ಶುಲ್ಕ ಪಾವತಿಸುವುದನ್ನು ಮೂರು ತಿಂಗಳ‌ ಕಾಲ‌ ಮುಂದೂಡಲು ಕೋರಿ ಏಪ್ರಿಲ್ 8ರಂದು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಲಿಖಿತ ಮನವಿ ಸಲ್ಲಿಸಿದ್ದರು.‌ ಅರ್ಜಿ ಸಂಬಂಧ ಸರ್ಕಾರಕ್ಕೆ ನಿರ್ಣಯ ಕೈಗೊಳ್ಳಲು ಒಂದು ದಿನವೂ ಅವಕಾಶ ನೀಡದ ಅರ್ಜಿದಾರರು ಅದೇ ದಿನ ಮಧ್ಯಾಹ್ನ 1.30ಕ್ಕೆ ‌ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ‌ ದಾಖಲಿಸಿದ್ದರು. ಸರ್ಕಾರ ಮತ್ತು ಸಂಬಂಧಿತ ಪ್ರಾಧಿಕಾರಕ್ಕೆ ಕಾಲಾವಕಾಶ ನೀಡದ ಹಿನ್ನೆಲೆಯಲ್ಲಿ ಅರ್ಜಿದಾರರ ಉದ್ದೇಶ ಸಾರ್ವಜನಿಕ ಹಿತಾಸಕ್ತಿ ಹೊಂದಿಲ್ಲ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿ ದಂಡ ವಿಧಿಸಿ ಆದೇಶಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.