ಬೆಂಗಳೂರು: ಮತೀಯವಾದಿ ಶಕ್ತಿಗಳು ಮತ್ತೊಂದು ದೇಶ ವಿಭಜನೆಯ ಸಂಚು ರೂಪಿಸುತ್ತಿವೆಯೇನೋ ಎಂಬ ಅನುಮಾನವಿದೆ. ಜನಪ್ರತಿನಿಧಿಗಳ ರೂಪದಲ್ಲೂ ದೇಶದ್ರೋಹಿಗಳಿದ್ದಾರೆ ಎಂಬುದು ಗೊತ್ತಾಗುತ್ತಿದೆ ಎಂದು ಸಿ ಟಿ ರವಿ ಹೇಳಿದರು.
ಶಿವಮೊಗ್ಗದ ಘಟನೆಯನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಮುಸಾಲ್ಮಾನರ ಏರಿಯಾ ಎಂದರೆ ಪಾಕಿಸ್ತಾನವೇ? ಇಂದು ಸಾವರ್ಕರ್ ವಿರೋಧಿಸುವವರು ನಾಳೆ ಗಾಂಧಿ, ಅಂಬೇಡ್ಕರ್ರನ್ನೂ ವಿರೋಧಿಸುತ್ತಾರೆ. ಭಯ ಹುಟ್ಟಿಸಬೇಕು ಅಂತಲೇ ಈ ರೀತಿ ಮಾಡ್ತಿದ್ದಾರೆ. ಮುಸ್ಲಿಮರು ಗುಂಡಾಗಳ ರೀತಿ ವರ್ತಿಸ್ತಾರೆ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಸ್ವಾತಂತ್ರ್ಯ ಭಾರತ ನಂತರವೂ ಅವರನ್ನು ಅದೇ ರೀತಿ ಮುಂದುವರಿಯೋಕೆ ಬಿಟ್ಟರೆ ಕಷ್ಟ. ಅಲ್ಲೆ ಡ್ರಾ ಅಲ್ಲೇ ಬಹುಮಾನ ಕೊಡಬೇಕು ಎಂದರು.
ಇದನ್ನೂ ಓದಿ: ಆ ಆಡಿಯೋ ನನ್ನದೇ, ಗೊತ್ತಿಲ್ಲದೇ ಕಾಲ್ ರೆಕಾರ್ಡ್ ಮಾಡೋದು ಅಪರಾಧ: ಸಚಿವ ಮಾಧುಸ್ವಾಮಿ