ETV Bharat / city

ಡ್ರಗ್ಸ್​ ಮಾರಾಟ ಮಾಡಿದ್ರೆ ಕ್ರಿಮಿನಲ್ ಕೇಸ್ : ಭಾಸ್ಕರ್​ ರಾವ್​ ಎಚ್ಚರಿಕೆ - ಬೆಂಗಳೂರು ಅಪರಾಧ ಸುದ್ದಿ

"ಶಾಲಾ ಕಾಲೇಜುಗಳ ಬಳಿ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಕ್ಯಾಂಟೀನ್ ಹಾಗೂ ಶಾಲಾ ಆವರಣದ ಬಳಿ ಗಾಂಜಾ, ಕೊಕೇನ್​ಗಳ ಮಾರಾಟವಾಗುತ್ತಿದೆ ಎಂಬ ಮಾಹಿತಿ ನಮಗೆ ಬಂದಿದೆ. ನಾನು ಶಾಲಾ - ಕಾಲೇಜುಗಳ ಮುಖ್ಯಸ್ಥರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಒಂದು ವೇಳೆ, ಇದು ನಮ್ಮ ಗಮನಕ್ಕೆ ಬಂದರೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ" ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್ ಎಚ್ಚರಿಕೆ ನೀಡಿದ್ದಾರೆ.

Bhaskar Rao
ಭಾಸ್ಕರ್​ ರಾವ್​
author img

By

Published : Jun 26, 2020, 12:23 PM IST

ಬೆಂಗಳೂರು: ಇಂದು ಅಂತಾರಾಷ್ಟ್ರೀಯ ಡ್ರಗ್ ದಿನಾಚರಣೆ. ಈ ದಿನದಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್​ ರಾವ್​, ಈಟಿವಿ ಭಾರತದ ಜೊತೆ ಮಾತನಾಡಿದ್ದು, ಡ್ರಗ್ಸ್ ಮಾರಾಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.

ಡ್ರಗ್ಸ್​ ಪೊಲೀಸ್ ಇಲಾಖೆಗೆ ಸೇರಿದ್ದು ಮಾತ್ರವಲ್ಲ, ಪೊಲೀಸರು ಕೇಸ್ ಪತ್ತೆ ಮಾಡುತ್ತಾರೆ. ನಮ್ಮ ಜೊತೆ ವಿದ್ಯಾರ್ಥಿಗಳು, ಯುವಕರು, ಹೋಟೆಲ್​​​​, ಉದ್ಯಮಿಗಳು, ರೆಸ್ಟೋರೆಂಟ್ ಮಾಲೀಕರು ಸೇರಿದಂತೆ ಎಲ್ಲರೂ ಕೈ ಜೋಡಿಸಬೇಕು. ಬೆಂಗಳೂರು ನಗರದಲ್ಲಿ ಯುವಕ - ಯುವತಿಯರು ಹೆಚ್ಚಾಗಿ ಡ್ರಗ್ಸ್​ ಚಟಕ್ಕೆ ಬಲಿಯಾಗುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಿಂದ ನಗರಕ್ಕೆ ಜನ ಬರುತ್ತಿದ್ದಾರೆ. ಹೀಗಾಗಿ ಪೊಲೀಸರು ಮಾತ್ರ ಕೆಲಸ ಮಾಡಿದರೆ ಸಾಲದು. ನಗರದ ‌ಜನತೆ ಕೂಡ ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ಭಾಸ್ಕರ್​ ರಾವ್ ತಿಳಿಸಿದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್​ ರಾವ್

ಮತ್ತೊಂದೆಡೆ ಶಾಲಾ ಕಾಲೇಜುಗಳ ಬಳಿ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಕ್ಯಾಂಟೀನ್ ಹಾಗೂ ಶಾಲಾ ಆವರಣದ ಬಳಿ ಗಾಂಜಾ, ಕೊಕೇನ್​ಗಳ ಮಾರಾಟವಾಗುತ್ತಿದೆ ಎಂಬ ಮಾಹಿತಿ ನಮಗೆ ಬಂದಿದೆ. ನಾನು ಶಾಲಾ - ಕಾಲೇಜುಗಳ ಮುಖ್ಯಸ್ಥರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಒಂದು ವೇಳೆ, ಇದು ಪೊಲೀಸರ ಗಮನಕ್ಕೆ ಬಂದರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.

ಕೊರೊನಾ ವಾರಿಯರ್​ಗಳಾಗಿರುವ ಪೊಲೀಸರು ಗುಣಮುಖರಾಗಿ ಹೊರ ಬರ್ತಿದ್ದಾರೆ. ಹೀಗಾಗಿ ನನಗೆ ಖುಷಿಯಾಗಿದೆ. ಮುಂದಿನ ದಿನದಲ್ಲಿ ಪೊಲೀಸರು ಮಾಡುವ ಕೆಲಸ ಬಹಳಷ್ಟಿದೆ ಎಂದು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.