ETV Bharat / city

ಮೃತದೇಹಗಳ ಸರದಿ ಸಾಲು ತಡೆಯಲು ಬಯಲಲ್ಲೇ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ.. ಸಚಿವ ಅಶೋಕ್​

author img

By

Published : Apr 29, 2021, 4:20 PM IST

Updated : Apr 29, 2021, 4:33 PM IST

230 ಎಕರೆ ಜಮೀನನ್ನು ಸ್ಮಶಾನಕ್ಕೆ ನೀಡುವ ಆದೇಶ ಹೊರಡಿಸಿದ್ದೇವೆ. ಕೂಡಲೇ ಹಸ್ತಾಂತರ ಮಾಡುವ ಕೆಲಸ ಆಗಿದೆ. ಅದರ ಉಪಯೋಗವನ್ನು ಜನರು ಬಳಸಿಕೊಳ್ಳಬೇಕು, ಯಾರಾದರೂ ಅವರ ಕುಟುಂಬದವರನ್ನು ಅವರ ತೋಟ, ಜಮೀನುಗಳಲ್ಲಿ ಕೋವಿಡ್​ನಿಂದ ಮೃತರಾದವರ ಅಂತ್ಯಸಂಸ್ಕಾರಕ್ಕೆ ಮುಂದಾದರೆ ಅದಕ್ಕೂ ಅವಕಾಶ ಮಾಡಿಕೊಡಲಾಗಿದೆ ಎಂದು ಕಂದಾಯ ಸಚಿವ ಆರ್​ ಅಶೋಕ್​ ತಿಳಿಸಿದ್ದಾರೆ.

ಅಶೋಕ್
ಅಶೋಕ್

ಬೆಂಗಳೂರು: ಕೋವಿಡ್ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಇದ್ದ ಸಮಸ್ಯೆಗಳು, ತೊಡಕುಗಳು ಇನ್ನೆರಡು ದಿನಗಳಲ್ಲಿ ಪರಿಹಾರ ಆಗಲಿದೆ. ಸರದಿ ಸಾಲಿನಲ್ಲಿ ಕಾದು ಅಂತ್ಯಸಂಸ್ಕಾರ ಮಾಡುವುದಕ್ಕೆ ಕೊನೆ ಹಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಂತ್ಯಸಂಸ್ಕಾರ ಮಾಡುವ ಮೂರು ಯಂತ್ರಗಳು ದುರಸ್ತಿಗೆ ಬಂದ ಕಾರಣ ಕೋವಿಡ್ ಸೋಂಕಿತರ ಅಂತ್ಯಸಂಸ್ಕಾರಕ್ಕೆ ಸಮಸ್ಯೆಯಾಗಿತ್ತು. ಕ್ಯೂ ಜಾಸ್ತಿಯಾಗಿತ್ತು. ಈಗ ಬಯಲಲ್ಲಿ ಶವಗಳನ್ನು ಸುಡಲು ಗಿಡ್ಡೇನಹಳ್ಳಿ ಹಾಗೂ ತಾವರೆಕೆರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಎರಡೂ ಕಡೆ 70 ಶವಗಳನ್ನು ಸುಡಲು ವ್ಯವಸ್ಥೆ ಮಾಡಿದ್ದು, ನಾಳೆಗೆ ಮಾವಳ್ಳಿಪುರದಲ್ಲಿ 40 ಶವಗಳನ್ನು ಸುಡುವ ಸಾಮರ್ಥ್ಯದ ಕ್ರಿಮಿಷನ್ ಕೇಂದ್ರ ಆರಂಭಗೊಳ್ಳಲಿದೆ. ಒಟ್ಟು 110 ಶವಗಳನ್ನ ಬಯಲಲ್ಲಿ ಸುಡಲು ವ್ಯವಸ್ಥೆ ಆಗಲಿದೆ. ಇದರಿಂದಾಗಿ ಶವ ಸಂಸ್ಕಾರಕ್ಕೆ ಸರದಿ ಸಾಲು ನಿಲ್ಲುವ ಸಮಸ್ಯೆ ಅಂತ್ಯವಾಗಲಿದೆ ಎಂದರು.

ಸಚಿವ ಅಶೋಕ್​ ಅವರಿಂದ ಮಾಹಿತಿ

230 ಎಕರೆ ಜಮೀನನ್ನು ಸ್ಮಶಾನಕ್ಕೆ ನೀಡುವ ಆದೇಶ ಹೊರಡಿಸಿದ್ದೇವೆ. ಕೂಡಲೇ ಹಸ್ತಾಂತರ ಮಾಡುವ ಕೆಲಸ ಆಗಿದೆ. ಅದರ ಉಪಯೋಗವನ್ನು ಜನರು ಬಳಸಿಕೊಳ್ಳಬೇಕು, ಯಾರಾದರೂ ಅವರ ಕುಟುಂಬದವರನ್ನು ಅವರ ತೋಟ, ಜಮೀನುಗಳಲ್ಲಿ ಕೋವಿಡ್​ನಿಂದ ಮೃತರಾದವರ ಅಂತ್ಯಸಂಸ್ಕಾರಕ್ಕೆ ಮುಂದಾದರೆ ಅದಕ್ಕೂ ಅವಕಾಶ ಮಾಡಿಕೊಡಲಾಗಿದೆ. ಶವಸಂಸ್ಕಾರಕ್ಕೆ ಇದ್ದ ಅಡೆತಡೆ ನಿವಾರಣೆ ಮಾಡಲಾಗಿದೆ. ಇನ್ನೆರಡು ದಿನದಲ್ಲಿ ಅಂತ್ಯಸಂಸ್ಕಾರ ಸರಿಯಾಗಿ ಆಗಲಿದೆ, ಇರುವ ಲೋಪದೋಷ ಸರಿಯಾಗಲಿದೆ ಎಂದು ಸಚಿವರು ಭರವಸೆ ನೀಡಿದರು.

ರೆಮ್​ಡಿಸಿವಿರ್ ಬಗ್ಗೆ ಹೆಚ್ಚಿನ ಗಮನ ಹರಿಸಿ ಎಂದು ಜಿಲ್ಲಾಡಳಿತಗಳಿಗೆ ಸಿಎಂ ಸೂಚಿಸಿದ್ದಾರೆ. ಖಾಸಗಿ ಆಸ್ಪತ್ರೆಗಳು ಮನಬಂದಂತೆ ರೆಮ್​ಡಿಸಿವಿರ್ ನೀಡುತ್ತಿವೆ. ಇದು ಆಗಬಾರದು, ಯಾರಿಗೆ ಅಗತ್ಯವಿದೆಯೋ ಅವರಿಗೆ ಮಾತ್ರ ನೀಡಬೇಕು, ಆ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಸೂಚಿಸಲಾಗಿದೆ. ಅದೇ ರೀತಿ ರೆಮ್​ಡಿಸಿವಿರ್ ಔಷಧವನ್ನು ಬ್ಲಾಕ್​ನಲ್ಲಿ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಕಾಳಸಂತೆಯಲ್ಲಿ ಯಾರು ರೆಮ್ಡಿಸಿವಿರ್ ಮಾರಾಟ ಮಾಡುತ್ತಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಕಾಳಸಂತೆಯಲ್ಲಿ ಔಷಧ ಮಾರಾಟದಂತಹ ಚಟುವಟಿಕೆ ತಡೆಯಬೇಕು ಎಂದು ಸಿಎಂ ಸೂಚಿಸಿದ್ದಾರೆ ಎಂದು ಅಶೋಕ್​ ತಿಳಿಸಿದರು.

ನಮ್ಮ ಎಲ್ಲಾ ಸಚಿವರು 1ವರ್ಷದ ವೇತನವನ್ನು ಕೋವಿಡ್ ನಿಧಿಗೆ ಕೊಡುತ್ತಿದ್ದೇವೆ. ಅದೇ ರೀತಿ ಶಾಸಕರು ಒಂದು ತಿಂಗಳ ವೇತನವನ್ನು ನೀಡಲಿದ್ದಾರೆ ಎಂದು ಸಚಿವ ಅಶೋಕ್ ಮಾಹಿತಿ ನೀಡಿದರು.

Last Updated : Apr 29, 2021, 4:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.