ETV Bharat / city

ಪುನೀತ್ ಬೇಗ ಚೇತರಿಸಿಕೊಳ್ಳಲೆಂದು ಹಾರೈಸುತ್ತೇನೆ: ಪಿ.ಸಿ. ಮೋಹನ್ - Puneet Raj Kumar

ಪುನೀತ್ ರಾಜ್ ಕುಮಾರ್ ಒಳ್ಳೆಯ ನಟ, ಅವರು ಬೇಗ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಸಂಸದ ಪಿ.ಸಿ. ಮೋಹನ್ ದೊಡ್ಡಬಳ್ಳಾಪುರದಲ್ಲಿ ಹೇಳಿದರು.

mohan
ಪಿ.ಸಿ. ಮೋಹನ್
author img

By

Published : Oct 29, 2021, 2:18 PM IST

ದೊಡ್ಡಬಳ್ಳಾಪುರ: ನಟ ಪುನೀತ್ ರಾಜ್ ಕುಮಾರ್ ಇಂದು ಬೆಳಗ್ಗೆ ಜಿಮ್​ನಲ್ಲಿ ಕಸರತ್ತು ಮಾಡುತ್ತಿವಾಗ ಲಘು ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪವರ್ ಸ್ಟಾರ್ ಆದಷ್ಟು ಬೇಗ ಚೇತರಿಸಿಕೊಳ್ಳಲೆಂದು ಹಾರೈಸುತ್ತೇನೆ ಎಂದು ಸಂಸದ ಪಿ.ಸಿ.ಮೋಹನ್ ಹೇಳಿದರು.

ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಪುನೀತ್ ರಾಜ್​ಕುಮಾರ್ ಕನ್ನಡ ಚಿತ್ರರಂಗದ ಮೇರುನಟ ರಾಜಕುಮಾರ್ ಅವರ ಪುತ್ರ, ಅವರ ಕುಟುಂಬವನ್ನ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶವೇ ಗುರುತಿಸುತ್ತಿದೆ. ಪುನೀತ್ ರಾಜ್ ಕುಮಾರ್ ಒಳ್ಳೆಯ ನಟ, ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ನಾನು ದೊಡ್ಡಬಳ್ಳಾಪುರಕ್ಕೆ ಬಂದಾಗ ಪುನೀತ್ ಅವರಿಗೆ ಲಘು ಹೃದಯಾಘಾತವಾಗಿ ವಿಕ್ರಂ ಆಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿಯಿತು. ಅವರು ಬೇಗ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡುವೆ ಎಂದರು.

ದೊಡ್ಡಬಳ್ಳಾಪುರದಲ್ಲಿ ಮಾತನಾಡಿದ ಪಿ.ಸಿ. ಮೋಹನ್

ಪುನೀತ್ ಶೀಘ್ರವೇ ಗುಣಮುಖರಾಗಿ ಮತ್ತೆ ಎಂದಿನಂತೆ ಉತ್ತಮ ಚಿತ್ರಗಳಲ್ಲಿ ನಟಿಸಲಿ, ಅವರ ಅಭಿಮಾನಗಳು ಸಹ ಬೇಗ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.