ETV Bharat / city

ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ಅಂಗೀಕಾರ.. ಹಳೆ ಕಾಯ್ದೆಗಿಂತ ಹೊಸ ವಿಧೇಯಕ ಎಷ್ಟು ಕಠಿಣ? - Karnataka Prevention of Slaughter and Preservation of Cattle

ಹಸು, ಕರು, ದನ, ಎಮ್ಮೆಗಳ ಹತ್ಯೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. 13 ವರ್ಷದ ಒಳಗಿನ ಕೋಣಗಳನ್ನು ಹತ್ಯೆ ಮಾಡುವಂತಿಲ್ಲ. ಮೊದಲ ಸಲ ಗೋಹತ್ಯೆ ಮಾಡಿದ್ರೆ 3 ರಿಂದ 7 ವರ್ಷಕ್ಕೆ ಶಿಕ್ಷೆ ವಿಧಿಸಲಾಗುತ್ತದೆ. ಅದರ ಜೊತೆಗೆ ₹50 ಸಾವಿರದಿಂದ ₹5 ಲಕ್ಷಕ್ಕೆ ದಂಡ ವಿಧಿಸಲಾಗುತ್ತದೆ..

cow slaughter
ಗೋಹತ್ಯೆ ನಿಷೇಧ
author img

By

Published : Dec 9, 2020, 10:19 PM IST

ಬೆಂಗಳೂರು : ಕಾಂಗ್ರೆಸ್ ಹಾಗೂ ಜೆಡಿಎಸ್ ವಿರೋಧದ ನಡುವೆಯೇ ವಿಧಾನಸಭೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020ಗೆ ಅಂಗೀಕಾರ ನೀಡಲಾಯಿತು. ಆ ಮೂಲಕ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ತನ್ನ ಭರವಸೆ ಈಡೇರಿಸಿದೆ.

ಈ ಹಿಂದೆ 2010ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕರ್ನಾಟಕ ಗೋಹತ್ಯೆ ತಡೆ ಮತ್ತು ಸಂರಕ್ಷಣೆ ಮಸೂದೆ-2010 ತರಲು ಉದ್ದೇಶಿದ್ದರು. ಅದರಲ್ಲಿ ಗೋವುಗಳ ಜತೆಗೆ ಎತ್ತು, ಎಮ್ಮೆ, ಎಮ್ಮೆ ಕರುವಿನ ವಧೆಯನ್ನೂ ಸೇರಿಸಲಾಗಿತ್ತು. ಗೋಹತ್ಯೆ ಹಾಗೂ ಕಳ್ಳ ಸಾಗಣೆ ಮಾಡುವವರಿಗೆ 7 ವರ್ಷ ಶಿಕ್ಷೆ ಹಾಗೂ 1 ಲಕ್ಷ ದಂಡ ಸೇರಿಸಲಾಗಿತ್ತು.

ಒಂದು ತಾಲೂಕಿನಿಂದ ಇನ್ನೊಂದು ತಾಲೂಕಿಗೆ ಗೋವು ಕೊಂಡೊಯ್ಯಲು ಪೊಲೀಸರ ಅನುಮತಿ ಕಡ್ಡಾಯವಾಗಿತ್ತು. ಈಗ ಅದಕ್ಕಿಂತಲೂ ಕಠಿಣ ನಿಯಮಗಳನ್ನು ಸೇರಿಸಿ ವಿಧೇಯಕ ಮಂಡಿಸಿ‌, ಅಂಗೀಕಾರ ಪಡೆಯಿತು. 2010ರಲ್ಲಿ ಯಡಿಯೂರಪ್ಪ ಅವರು ಈ ವಿವಾದಿತ ಗೋಹತ್ಯೆ ನಿಷೇಧ ಮಸೂದೆಯನ್ನು ಮಂಡಿಸಿದ್ದರು.

ಎರಡೂ ಸದನಗಳಲ್ಲಿ ಮಸೂದೆ ಅಂಗೀಕೃತವಾಗಿತ್ತು. ಆದರೆ, ಬಳಿಕ ಅಂದಿನ ರಾಜ್ಯಪಾಲ ಭಾರದ್ವಾಜ್ ತಮ್ಮ ಅನುಮೋದನೆ ನೀಡಿರಲಿಲ್ಲ. ಅತ್ತ ಅಂದಿನ ಕೇಂದ್ರ ಗೃಹ ಸಚಿವಾಲಯ ಸಹ ಕೆಲ ಆಕ್ಷೇಪಣೆ ವ್ಯಕ್ತಪಡಿಸಿ ತಿದ್ದುಪಡಿಗೆ ಸೂಚನೆ ನೀಡಿತ್ತು. ಇದಾದ ಬಳಿಕ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 1964ರ ಕಾಯ್ದೆಯನ್ನೇ ಮುಂದುವರಿಸುವ ನಿರ್ಧಾರಕ್ಕೆ ಬಂದಿತ್ತು.

ಇದನ್ನೂ ಓದಿ...ಪ್ರತಿಪಕ್ಷಗಳ ಪ್ರತಿಭಟನೆ ನಡುವೆಯೇ ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ವಿಧೇಯಕ ಅಂಗೀಕಾರ!

ಇದೀಗ ಬಿಜೆಪಿ ತಮ್ಮ‌ ಬಹುಕಾಲದ ಅಜೆಂಡಾ ಗೋಹತ್ಯೆ ನಿಷೇಧ ವಿಧೇಯಕವನ್ನು ಶತಾಯಗತಾಯ ಜಾರಿಗೊಳಿಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ ವಿವಾದಿತ ಗೋಹತ್ಯೆ ನಿಷೇಧ ವಿಧೇಯಕವನ್ನು ಮಂಡಿಸಿದರು. ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್‌ ಸದಸ್ಯರ ಪ್ರತಿಭಟನೆಯ ಮಧ್ಯೆಯೇ ವಿಧೇಯಕಕ್ಕೆ ಅಂಗೀಕಾರ ಪಡೆಯಲಾಯಿತು.

ಇಂದು ಬೆಳಗ್ಗೆವರೆಗೆ ಕಲಾಪ‌ ಅಜೆಂಡಾದಲ್ಲೇ‌ ಇಲ್ಲದಿದ್ದ ವಿವಾದಿತ ವಿಧೇಯಕವನ್ನು ಬಿಜೆಪಿ‌ ಸರ್ಕಾರ ಮಧ್ಯಾಹ್ನ ಏಕಾಏಕಿ ಮಂಡಿಸಿತು.‌ ಆ‌ ಮೂಲಕ ಪ್ರತಿಪಕ್ಷಗಳಿಗೆ ಅಚ್ಚರಿ ನೀಡಿದರು. ವಿವಾದಿತ ವಿಧೇಯಕಕ್ಕೆ ಪ್ರತಿಪಕ್ಷಗಳ ತೀವ್ರ ವಿರೋಧ ವ್ಯಕ್ತವಾಗುವುದನ್ನು ಅರಿತಿದ್ದ ಸರ್ಕಾರ‌ ಸುಳಿವು ಸಿಗದಂತೆ ಏಕಾಏಕಿ ಮಸೂದೆ ಮಂಡಿಸುವ ಮೂಲಕ ಕಾಂಗ್ರೆಸ್​​ಗೆ ಕೌಂಟರ್ ಚೆಕ್ ನೀಡಿತು.

ರಾಜ್ಯದಲ್ಲಿ ಸದ್ಯ 1964ರ ಗೋಹತ್ಯೆ ನಿಷೇಧ ಹಾಗೂ ಗೋವು ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದೆ. ಈ ಕಾಯ್ದೆ ಕಠಿಣ ಕಾನೂನು ಹೊಂದಿಲ್ಲದ ಕಾರಣ ಬಿಜೆಪಿ ಹೊಸ ಕಾಯ್ದೆ ಜಾರಿಗೆ ತರಲು ನಿರ್ಧರಿಸಿದೆ. ಹಾಲಿ ಇರುವ ಕಾಯ್ದೆ ಪ್ರಕಾರ ಕಾನೂನುಬಾಹಿರವಾಗಿ ಗೋಹತ್ಯೆ ಮಾಡಿದ್ರೆ 6 ತಿಂಗಳು ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ 12 ವರ್ಷದೊಳಗಿನ ಗೋವು ಅಥವಾ ಬೇರೆ ಜಾನುವಾರು ಹತ್ಯೆಗೆ ನಿಷೇಧ ವಿಧಿಸಲಾಗಿದೆ. ಇನ್ನು ಹಸುಗಳನ್ನು ಕಸಾಯಿಖಾನೆಗೆ ತರುವುದಕ್ಕೆ ಅನುಮತಿ ಕಡ್ಡಾಯವಾಗಿದೆ.

ಹಾಲಿ ಕಾಯ್ದೆಯಲ್ಲಿ ಕಠಿಣ ಅಂಶಗಳು ಇಲ್ಲದಿರುವುದರಿಂದ ಹಾಗೂ ಶಿಕ್ಷೆ ಪ್ರಮಾಣ ಕಡಿಮೆ ಇರುವುದರಿಂದ ಆರೋಪಿಗಳು ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿದೆ. ಹಾಲಿ ಕಾಯ್ದೆಯಿಂದ ಗೋಹತ್ಯೆಗೆ ಕಡಿವಾಣ ಬಿದ್ದಿಲ್ಲ. ಅಕ್ರಮ ಗೋಹತ್ಯೆ, ಮಾರಾಟ, ಸಾಗಾಟ ನಿರಂತರವಾಗಿ ಸಾಗಿದೆ ಎಂಬುದು ಬಿಜೆಪಿ ಸರ್ಕಾರದ ವಾದ. ಈ ಹಿನ್ನೆಲೆ ಕಾಯ್ದೆಗೆ ಇನ್ನಷ್ಟು ಬಲ‌ ನೀಡಿದೆ.

ಹೊಸ ಗೋಹತ್ಯೆ ನಿಷೇಧ ವಿಧೇಯಕ ಇನ್ನಷ್ಟು ಕಠಿಣ : ವಿಧಾನಸಭೆಯಲ್ಲಿ ಅಂಗೀಕೃತವಾದ ಗೋ ಹತ್ಯೆ ನಿಷೇಧ ವಿಧೇಯಕದಲ್ಲಿ ಹಲವು ಕಠಿಣ ಅಂಶಗಳನ್ನು‌ ಸೇರಿಸಲಾಗಿದೆ. ಜೈಲು ಶಿಕ್ಷೆ, ದಂಡದ ಪ್ರಮಾಣವನ್ನು ಗಣನೀಯವಾಗಿ ಏರಿಕೆ‌ ಮಾಡಲಾಗಿದೆ.

ನೂತನ ತಿದ್ದುಪಡಿ ಗೋಹತ್ಯೆ ನಿಷೇಧ ಕಾಯ್ದೆ ಅನ್ವಯ ಸಬ್ ಇನ್ಸ್​​​ಪೆಕ್ಟರ್ ಮೇಲಿನ ಅಧಿಕಾರಿ ಗೋಹತ್ಯೆ ನಡೆಯುವ ಅಥವಾ ಅಂತಹ ಉದ್ದೇಶಕ್ಕೆ ಜಾನುವಾರುಗಳ ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದರೆ, ಅಂತಹ ಪ್ರದೇಶವನ್ನು ಸೀಜ್ ಮಾಡಿ, ಜಾನುವಾರುಗಳನ್ನು ವಶಪಡಿಸಿಕೊಳ್ಳಲು ಅಧಿಕಾರ ನೀಡಲಾಗಿದೆ.

ಹಸು, ಕರು, ದನ, ಎಮ್ಮೆಗಳ ಹತ್ಯೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. 13 ವರ್ಷದ ಒಳಗಿನ ಕೋಣಗಳನ್ನು ಹತ್ಯೆ ಮಾಡುವಂತಿಲ್ಲ. ಮೊದಲ ಸಲ ಗೋಹತ್ಯೆ ಮಾಡಿದ್ರೆ 3 ರಿಂದ 7 ವರ್ಷಕ್ಕೆ ಶಿಕ್ಷೆ ವಿಧಿಸಲಾಗುತ್ತದೆ. ಅದರ ಜೊತೆಗೆ ₹50 ಸಾವಿರದಿಂದ ₹5 ಲಕ್ಷಕ್ಕೆ ದಂಡ ವಿಧಿಸಲಾಗುತ್ತದೆ.

ಗೋಹತ್ಯೆ ಪುನರಾವರ್ತನೆಯಾದರೆ ₹1 ಲಕ್ಷದಿಂದ ₹10 ಲಕ್ಷ ದಂಡದ ಜೊತೆಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಗೋಹತ್ಯೆ ಮಾಡುವವರಿಗೆ ನಿರ್ದಿಷ್ಟ ಅವಧಿವರೆಗೆ ಜಾಮೀನು ನೀಡುವಂತಿಲ್ಲ. ಹೊಸ ಬಿಲ್​​ನಲ್ಲಿ ಜಾನುವಾರುಗಳ ವಧೆ ಅಥವಾ ವಧೆ ಮಾಡಲು ಸಹಕರಿಸುವುದು ಅಪರಾಧವಾಗಿದೆ. ಹತ್ಯೆ ಮಾಡುವ ಉದ್ದೇಶದಿಂದ ಜಾನುವಾರುಗಳ ಸಾಗಾಟ ಮತ್ತು ಸಾಗಾಟಕ್ಕೆ ಸಹಕಾರ ನೀಡುವುದು ಅಪರಾಧವಾಗಿದೆ.

  • ಕೃಷಿ ಹಾಗೂ ಪಶು ಸಂಗೋಪನೆ ಉದ್ದೇಶದಿಂದ ಜಾನುವಾರುಗಳ ಸಾಗಾಟಕ್ಕೆ ಮಾತ್ರ ಅನುಮತಿ
  • ಜಾನುವಾರುಗಳ ಹತ್ಯೆ ಉದ್ದೇಶದಿಂದ ರಾಜ್ಯ ಮತ್ತು ಅಂತಾರಾಜ್ಯಕ್ಕೆ ಸಾಗಾಟ ಮಾಡುವಂತಿಲ್ಲ
  • ಕೃಷಿ ಮತ್ತು ಪಶು ಸಂಗೋಪನೆ ಉದ್ದೇಶದಿಂದ ಅಂತಾರಾಜ್ಯ ಸಾಗಾಟ ಮಾಡಲು ಸಂಬಂಧಿಸಿದ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು
  • ಕೃಷಿ ಚಟುವಟಿಕೆಗೆ ಗೋವುಗಳ ಸಾಗಾಣಿಕೆಗೆ ಅನುಮತಿ ಮತ್ತು ನಿರ್ದಿಷ್ಟ ಶುಲ್ಕ ನಿಗದಿ ಮಾಡಲಾಗುವುದು
  • ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಮಾರಾಟ ಮಾಡುವುದು, ಖರೀದಿಸುವುದು ಅಥವಾ ಖರೀದಿಸದಂತೆ ಪ್ರೇರೇಪಿಸುವುದು ನಿರ್ಬಂಧ
  • ಕಾಯಿಲೆ ಇದೆ ಎಂದು ಪಶು ವೈದ್ಯಾಧಿಕಾರಿ ದೃಢೀಕರಿಸಿದರೆ ಮಾತ್ರ ಅದನ್ನು ಹತ್ಯೆಗೆ ಅವಕಾಶ ಕಲ್ಪಿಸಲಾಗಿದೆ
  • ಯಾರಿಗಾದರೂ ಹಸು ಸಾಕಲು ಸಾಧ್ಯವಿಲ್ಲವಾದ್ರೆ, ಅಂತಹ ಜಾನುವಾರುಗಳನ್ನು ಪೋಷಿಸಲು ಗೋಶಾಲೆ ತೆರೆಯಲು ನಿರ್ಧಾರ
  • ಪ್ರಕರಣಗಳ ತ್ವರಿತ ವಿಲೇವಾರಿಗೆ ವಿಶೇಷ ನ್ಯಾಯಾಲಯ ಸ್ಥಾಪನೆ
  • ಗೋಹತ್ಯೆ ತಡೆಯಲು ಸ್ಥಳೀಯ ಪೊಲೀಸ್ ಠಾಣೆಗಳಿಗೆ ಅಧಿಕಾರ ನೀಡಲಾಗಿದೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.