ETV Bharat / city

ಇಮ್ರಾನ್ ಪಾಷಾ ಸೇರಿ 22 ಆರೋಪಿಗಳಿಗೆ ಕೊರೊನಾ ಟೆಸ್ಟ್: ಒಂದೆರಡು ದಿನಗಳಲ್ಲಿ ರಿಪೋರ್ಟ್​​ - ಪಾದಾರಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ

ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ಸೇರಿ 22 ಆರೋಪಿಗಳಿಗೆ ಕೋವಿಡ್​ ಟೆಸ್ಟ್​ ನಡೆಸಲಾಗಿದ್ದು, ಇನ್ನೆರಡು ದಿನಗಳಲ್ಲಿ ವರದಿ ಬರಲಿದೆ.

Imran Pasha
ಇಮ್ರಾನ್ ಪಾಷಾ
author img

By

Published : Jun 9, 2020, 2:14 PM IST

Updated : Jun 9, 2020, 2:42 PM IST

ಬೆಂಗಳೂರು: ಕೊರೊನಾ ಪಾಸಿಟಿವ್ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಪಾದರಾಯನಪುರ ಕಾರ್ಪೋರೇಟರ್ ಇಮ್ರಾನ್ ಪಾಷಾ ಬಿಡುಗಡೆಯಾಗಿದ್ದರು. ಈ ವೇಳೆ, ಕೋವಿಡ್ ಭೀತಿ ಮರೆತು, ಸಾಮಾಜಿಕ ಅಂತರವಿಲ್ಲದೇ ಗುಂಪುಗೂಡಿ ಪಾಷಾ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿ ಕಾನೂನು ಉಲ್ಲಂಘನೆ ಮಾಡಿದ್ದರು.

ಇದಕ್ಕೆ ಕಾರ್ಪೋರೇಟರ್ ಕೂಡ ಸಾಥ್ ನೀಡಿದ್ದು, ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಗೂ ಜೆ.ಜೆ.ನಗರ ಪೊಲೀಸರು ತೆರಳಿ ಇಮ್ರಾನ್ ಪಾಷಾ ಸೇರಿ 22 ಮಂದಿಯನ್ನ ಬಂಧಿಸಿದ್ದರು. ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಈ ವೇಳೆ, ನ್ಯಾಯಾಧೀಶರು ಮತ್ತೆ ಮೂರು ದಿನಗಳ ಕಾಲ ಆರೋಪಿಗಳನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.

ಹೀಗಾಗಿ ಆರೋಪಿಗಳನ್ನು ಖಾಸಗಿ ಹೋಟೆಲ್​​ನಲ್ಲಿ ಕ್ವಾರಂಟೈನ್‌ ಮಾಡಿದ್ದು, ಎಲ್ಲರಿಗೂ ಕೋವಿಡ್​ ಟೆಸ್ಟ್​ ನಡೆಸಲಾಗಿದೆ. ಇನ್ನೆರಡು ದಿನಗಳಲ್ಲಿ ವರದಿ ಬರಲಿದೆ. ಒಂದು ವೇಳೆ ವರದಿ ಪಾಸಿಟಿವ್ ಬಂದರೆ ಅವರನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಲಾಗುವುದು, ನೆಗೆಟಿವ್ ಬಂದ್ರೆ ಜೈಲು ಪಾಲಾಗುವುದು ಖಚಿತವಾಗಿದೆ.

Last Updated : Jun 9, 2020, 2:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.