ETV Bharat / city

ನ್ಯಾಯಾಲಯಗಳಿಗೆ ನ.29ರವರೆಗೆ ರಜೆ ವಿಸ್ತರಿಸಿ ಹೈಕೋರ್ಟ್ ಆದೇಶ - ಹೈಕೋರ್ಟ್ ಆದೇಶ

ಈ ಆದೇಶ ಎಸ್ಒಪಿ ಮಾರ್ಗಸೂಚಿಗಳ ಅನುಸಾರ ಸೀಮಿತ ಕಾರ್ಯಾಚರಣೆ ನಡೆಸುತ್ತಿರುವ ನ್ಯಾಯಾಲಯಗಳ ಮಧ್ಯಂತರ ಆದೇಶಗಳಿಗೆ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

high court
ಹೈಕೋರ್ಟ್
author img

By

Published : Sep 30, 2020, 12:56 AM IST

Updated : Sep 30, 2020, 1:05 AM IST

ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಸೇರಿದಂತೆ ರಾಜ್ಯದ ಎಲ್ಲ ನ್ಯಾಯಾಲಯಗಳಿಗೆ ನವೆಂಬರ್ 29 ರವರೆಗೆ ಕಾಲಮಿತಿ ನಿಯಮಗಳ ಅನ್ವಯ ರಜೆ ವಿಸ್ತರಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.

ಕೊರೊನಾ ವ್ಯಾಪಿಸಲು ಆರಂಭಿಸಿದ ಬಳಿಕ ನ್ಯಾಯಾಲಯಕ್ಕೆ ಕಕ್ಷಿದಾರರು ತೆರಳುವುದು ಕಷ್ಟಸಾಧ್ಯ ಎಂಬ ಹಿನ್ನೆಲೆಯಲ್ಲಿ ಹೈಕೋರ್ಟ್ ಕಳೆದ ಮಾರ್ಚ್ 26ರಂದು ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ಹೊರಡಿಸಿದ್ದ ಮಧ್ಯಂತರ ಆದೇಶಗಳನ್ನು ವಿಸ್ತರಿಸಿ ಆದೇಶಿಸಿತ್ತು. ಹಾಗೆಯೇ ಪ್ರಕರಣಗಳನ್ನು ದಾಖಲಿಸುವ ಅವಧಿಯನ್ನು ಕಾಲಮಿತಿ ಕಾಯ್ದೆ 1963 ರ ಸೆಕ್ಷನ್ 4 ರಂತೆ ವಿಸ್ತರಿಸಿತ್ತು‌. ಅಗತ್ಯ ಅನುಸಾರ ಈ ಆದೇಶವನ್ನು ವಿಸ್ತರಿಸಿಕೊಂಡು ಬಂದಿರುವ ಹೈಕೋರ್ಟ್, ಇದೀಗ ಮತ್ತೆ ಎರಡು ತಿಂಗಳ ಅವಧಿಗೆ ವಿಸ್ತರಿಸಿದೆ.

ಈ ಆದೇಶ ರಾಜ್ಯ ಹೈಕೋರ್ಟ್ ಪ್ರಧಾನ ಪೀಠ, ಕಲಬುರಗಿ ಮತ್ತು ಧಾರವಾಡ ಪೀಠ, ಎಲ್ಲಾ ಜಿಲ್ಲಾ ನ್ಯಾಯಾಲಯಗಳು, ವಿಚಾರಣಾ ನ್ಯಾಯಾಲಯಗಳು, ಕೌಟುಂಬಿಕ ನ್ಯಾಯಾಲಯಗಳು, ಕಾರ್ಮಿಕ ನ್ಯಾಯಾಲಯಗಳು ಹಾಗೂ ಕೈಗಾರಿಕಾ ನ್ಯಾಯಾಧೀಕರಣಗಳಿಗೆ ಅನ್ವಯಿಸಲಿದೆ.

ಹೈಕೋರ್ಟ್​ನ ಈ ಆದೇಶದಿಂದಾಗಿ ನ್ಯಾಯಾಲಯಗಳ ಮಧ್ಯಂತರ ಆದೇಶಗಳು ವಿಸ್ತರಣೆಯಾಗಿದ್ದು, ಕಕ್ಷಿದಾರರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

ಆದರೆ, ಈ ಆದೇಶ ಎಸ್ಒಪಿ ಮಾರ್ಗಸೂಚಿಗಳ ಅನುಸಾರ ಸೀಮಿತ ಕಾರ್ಯಾಚರಣೆ ನಡೆಸುತ್ತಿರುವ ನ್ಯಾಯಾಲಯಗಳ ಮಧ್ಯಂತರ ಆದೇಶಗಳಿಗೆ ಅನ್ವಯಿಸುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

Last Updated : Sep 30, 2020, 1:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.