ಬೆಂಗಳೂರು: ಕೊರೊನಾ ವೈರಸ್. ಮೊದಮೊದಲು ಬೇರೆ ಬೇರೆ ದೇಶಗಳಲ್ಲಿ ಕಾಣಿಸಿಕೊಂಡಾಗ ನಮ್ಮ ದೇಶ ಸುರಕ್ಷಿತ ಎಂದೇ ಭಾವಿಸಿದ್ದೆವು. ಆದರೆ, ದಿನಗಳು ಕಳೆದಂತೆ ದೊಡ್ಡನಗರಗಳಲ್ಲಿ ಕಾಣಿಸಿಕೊಂಡ ಕೊರೊನಾ ನಂತರ ಹಳ್ಳಿಗಳಿಗೂ ಆವರಿಸಿಕೊಂಡು ಬಿಟ್ಟಿತು. ಇದೀಗ ಸೋಂಕಿತರ ಜೊತೆಗೆ ಬಲಿಯಾದವರ ಸಂಖ್ಯೆಯು ಏರುತ್ತಲೇ ಇದೆ.
ಸೋಂಕಿತರ ಸಾವಿನ ಸಂಖ್ಯೆಯಲ್ಲಿ ದೇಶಕ್ಕೆ ಕರ್ನಾಟಕ 8ನೇ ಸ್ಥಾನ ಪಡೆದಿದೆ. ಸೋಂಕಿತರ ಮರಣ ದರ ಶೇ.1.74 ರಷ್ಟಿದೆ. ಬರೋಬ್ಬರಿ 3,51,481 ಮಂದಿಗೆ ಸೋಂಕು ತಗುಲಿದೆ. ಕರ್ನಾಟಕದಲ್ಲಿ ಮಾರ್ಚ್ 8ರಂದು ವಿದೇಶದಿಂದ ಬೆಂಗಳೂರಿಗೆ ಬಂದ ಪ್ರಯಾಣಿಕರೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಬಳಿಕ ಗಾಳಿಯಂತೆ ವೇಗವಾಗಿ ಎಲ್ಲ ವಯೋಮಾನದವರನ್ನು ತನ್ನತ್ತ ಸೆಳೆದುಕೊಳ್ಳುತ್ತಲೇ ಹೋಗುತ್ತಿದೆ. ರಾಜ್ಯದಲ್ಲಿ ಮರಣ ಮೃದಂಗದ ಪರಿ ಹೀಗಿದೆ ನೋಡಿ.
ಕೋವಿಡ್ ಮರಣ ಮೃದಂಗ
ತಿಂಗಳು | ಸಾವು | ಸೋಂಕಿತರ ಸಂಖ್ಯೆ |
ಮಾರ್ಚ್ | 03 | 101 |
ಏಪ್ರಿಲ್ | 18 | 464 |
ಮೇ | 30 | 2656 |
ಜೂನ್ | 195 | 12,021 |
ಜುಲೈ | 2,068 | 1,08,873 |
ಆಗಸ್ಟ್ | 3,388 | 218,308 (31 ರವರೆಗೆ) |
ಸೀಮಿತ ವಯೋಮಿತಿಗೆ ಹೆಚ್ಚು ಕೋವಿಡ್ ವೈರಸ್ ಕಾಡಲಿದೆ ಎಂಬ ವಾಕ್ಯವೇ ಬದಲಾಗಿದೆ. ಕೊರೊನಾ ಮಾರಕವಲ್ಲದೇ ಇದ್ದರೂ ಅದು ಹರಡುವ ಪರಿಗೆ ಎಲ್ಲರೂ ಭೀತಿಗೆ ಒಳಗಾಗಬೇಕಾಯಿತು. ಇದಕ್ಕೆ ಸಾಕ್ಷಿ ಎಂಬಂತೆ ಕೊರೊನಾ ವಿರುದ್ಧ ಹೋರಾಡುವ ವೈದ್ಯರೇ ಕೊರೊನಾ ತೀವ್ರತೆಗೆ ಹೆದರಿ ಹಿಂದೆ ಸರಿದಿದ್ದರು. ಯಾವ ಯಾವ ವಯೋಮಾನದವರನ್ನು ಹೆಚ್ಚು ಬಾಧಿಸಿದೆ ಎಂಬುದರ ಈ ಕುರಿತು ಮಾಹಿತಿ ಈ ಕೆಳಗಿದೆ.
ವಯಸ್ಸುವಾರು ಸಾವು (ಆಗಸ್ಟ್ 28ರವರೆಗೆ)
ವರ್ಷವಾರು | ಮೃತರ ಸಂಖ್ಯೆ |
70 ವರ್ಷ | 1,138 |
61-70 | 1,471 |
51-60 | 1,432 |
41-50 | 753 |
31- 40 | 375 |
21-30 | 132 |
11-20 | 25 |
10ವರ್ಷದೊಳಗೆ | 11 |
ಕೊರೊನಾ ವೈರಸ್ ಮಾರಕ ಯಾರಿಗೆ ಎಂಬುದನ್ನು ಮೊದಲ ಪತ್ತೆ ಹಚ್ಚಬೇಕಿದೆ ಅಂತಾರೆ ಕೋವಿಡ್ ಟಾಸ್ಕ್ ಪೋರ್ಸ್ ಸದಸ್ಯ ಡಾ.ಗಿರಿಧರ್ ಬಾಬು. ಭಾರತದಲ್ಲಿ ಕೋವಿಡ್ನಿಂದಾಗುವ ಮರಣ ಪ್ರಮಾಣ ಇತರೆ ದೇಶಕ್ಕೆ ಹೋಲಿಸಿದರೆ ಕಡಿಮೆಯೇ ಇದೆ. 200 ಜನರಲ್ಲಿ ಒಬ್ಬರಿಗೆ ಸಾವು ಸಂಭವಿಸುತ್ತಿದೆ. ಕೋವಿಡ್ ಮಾರಕ ರೋಗ ಅಲ್ಲದೇ ಇದ್ದರೂ ಶರವೇಗದಲ್ಲಿ ಹರಡುವ ಕಾರಣದಿಂದಾಗಿ ಯಾರಿಗೆ ಇದು ಮಾರಕ ಎಂಬುದನ್ನು ತಿಳಿದುಬಂದಿಲ್ಲ. ಅದನ್ನೇ ಮೊದಲು ತಡೆಗಟ್ಟುವ ಕೆಲಸ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಭಯವೂ ಬೇಡ-ನಿರ್ಲಕ್ಷ್ಯವೂ ಬೇಡ
- ತಡವಾಗಿ ಆಸ್ಪತ್ರೆಗೆ ಆಗಮಿಸುವುದು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣ
- ಸೋಂಕು ಲಕ್ಷಣ ಕಾಣಿಸಿಕೊಂಡಾಗ ನಿರ್ಲಕ್ಷ್ಯ ಮಾಡುತ್ತಿರುವುದು
- ಅಂತಿಮ ಹಂತದಲ್ಲಿ ಆಸ್ಪತ್ರೆಗೆ ಬರುವುದು
- ಸಣ್ಣ ಪ್ರಮಾಣದಲ್ಲೇ ಸೋಂಕು ಕಾಣಿಸಿಕೊಂಡರೆ ಆಸ್ಪತ್ರೆಗೆ ದಾಖಲಾಗಿ