ETV Bharat / city

ರಾಜ್ಯದಲ್ಲಿ ಮತ್ತೆ ಕೋವಿಡ್‌ ಅಬ್ಬರ ಶುರು ; ಇಂದು 832 ಮಂದಿಗೆ ಸೋಂಕು - ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ

ಒಮಿಕ್ರಾನ್‌ ಭೀತಿಯ ನಡುವೆಯೇ ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಹೊಸದಾಗಿ 832 ಪ್ರಕರಣ ದಾಖಲಾಗಿದ್ದು, 8 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ..

Covid cases rising in Karnataka; today 832 new cases and 8 died
ರಾಜ್ಯದಲ್ಲಿ ಮತ್ತೆ ಕೋವಿಡ್‌ ಅಬ್ಬರ ಶುರು; ಇಂದು 832 ಮಂದಿಗೆ ಕೊರೊನಾ, ಸೋಂಕಿತರ ಸಾವು
author img

By

Published : Dec 31, 2021, 7:25 PM IST

Updated : Dec 31, 2021, 9:55 PM IST

ಬೆಂಗಳೂರು : ರಾಜ್ಯದಲ್ಲಿ ಮತ್ತೊಮ್ಮೆ ಕೋವಿಡ್‌ ಸ್ಫೋಟಗೊಂಡಿದೆ. ಕಳೆದ 24 ಗಂಟೆಗಳಲ್ಲಿ ಒಂದೇ ದಿನ 832 ಹೊಸ ಪ್ರಕರಣ ದಾಖಲಾಗಿವೆ. ಇಂದು 1,17,917 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 335 ಮಂದಿಗೆ ಸೋಂಕು ದೃಢಪಟ್ಟಿದೆ‌. ಈ ಮೂಲಕ ಸೋಂಕಿತರ ಸಂಖ್ಯೆ 30,07,337ಕ್ಕೆ ಏರಿಕೆ ಆಗಿದೆ‌.

ಇನ್ನು 335 ಮಂದಿ ಗುಣಮುಖರಾಗಿದ್ದು, ಈವರೆಗೆ 29,60,261 ಡಿಸ್ಜಾರ್ಜ್ ಆಗಿದ್ದಾರೆ. ಇತ್ತ ಸಾವಿನ ಸಂಖ್ಯೆಯು ಏರಿಕೆ ಆಗಿದೆ. ಇಂದು 8 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 38,335ಕ್ಕೆ ಏರಿದೆ. ಸದ್ಯ ಸಕ್ರಿಯ ಪ್ರಕರಣಗಳು 8,712ಕ್ಕೆ ತಲುಪಿದೆ.

ಸೋಂಕಿತರ ಪ್ರಮಾಣ ಶೇ‌.0.70ರಷ್ಟಿದೆ. ಸಾವಿನ ಪ್ರಮಾಣ ಶೇ. 0.96 ರಷ್ಟು ಇದೆ. ವಿಮಾನ ನಿಲ್ದಾಣದಲ್ಲಿ 1,368 ಪ್ರಯಾಣಿಕರು ಆಗಮಿಸಿದ್ದು, ಇವರನ್ನು ತಪಾಸಣೆಗೆ ಒಳಪಡಿಸಲಾಗಿದೆ. 77 ಜನರು ಹೈ ರಿಸ್ಕ್ ದೇಶಗಳಿಂದ ಆಗಮಿಸಿದ್ದಾರೆ.

ರಾಜಧಾನಿಯಲ್ಲಿ ಮೂರನೇ ಅಲೆ ಮುನ್ಸೂಚನೆ
ರಾಜಧಾನಿ ಬೆಂಗಳೂರಿನಲ್ಲಿಂದು 656 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 12,63,618ಕ್ಕೆ ಏರಿದೆ. 211 ಜನರು ಡಿಸ್ಜಾರ್ಜ್ ಆಗಿದ್ದಾರೆ. ನಗರದಲ್ಲಿ ಒಟ್ಟು 12,39,931 ಗುಣಮುಖರಾಗಿದ್ದಾರೆ. ಐವರು ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 16,400ಕ್ಕೆ ಬಂದು ನಿಂತಿದೆ. ಸದ್ಯ ಸಕ್ರಿಯ ಪ್ರಕರಣಗಳು 7,286 ಇವೆ.

ಕೊರೊನಾ ರೂಪಾಂತರಿ ಮಾಹಿತಿ
ಆಲ್ಫಾ- 155
ಬೇಟಾ-08
ಡೆಲ್ಟಾ- 2569
ಡೆಲ್ಟಾ ಸಬ್ ಲೈನ್ ಏಜ್- 949
ಕಪ್ಪಾ-160
ಈಟಾ-01
ಒಮಿಕ್ರಾನ್- 43

ಇದನ್ನೂ ಓದಿ: ರಾಜ್ಯದಲ್ಲಿ ಒಮಿಕ್ರಾನ್​ ಅಬ್ಬರ.. ಮೂವರು ಮಕ್ಕಳು ಸೇರಿ 23 ಹೊಸ ಸೋಂಕಿತರು ಪತ್ತೆ..

Last Updated : Dec 31, 2021, 9:55 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.