ETV Bharat / city

ಹೈರಿಸ್ಕ್ ದೇಶದಿಂದ ಬಂದವರಿಂದಲೇ ಹೆಚ್ಚಾಯ್ತು ಕೊರೊನಾ: ಐದೇ ದಿನದಲ್ಲಿ ಬದಲಾಯ್ತು ಬೆಂಗಳೂರಿನ ಚಿತ್ರಣ - ಬೆಂಗಳೂರು ಕೋವಿಡ್​19 ಕೇಸ್​ಗಳು

ಹೊಸ ವರ್ಷದ ಮೊದಲ ದಿನವೇ ಕೊರೊನಾ ಶಾಕ್ ಕೊಟ್ಟಿದ್ದು, ಒಂದೇ ದಿನ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟಿದೆ. ಅದರಲ್ಲೂ ಹೈರಿಸ್ಕ್ ದೇಶದಿಂದ ಬಂದವರಿಂದಲೇ ಕೋವಿಡ್​ ಹೆಚ್ಚಾಯ್ತು ಎಂಬ ಅನುಮಾನ ಮೂಡಿದೆ.

COVID
COVID
author img

By

Published : Jan 2, 2022, 1:17 PM IST

ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಏರಿಕೆ ಮತ್ತೆ ಭಾರಿ ಗಂಡಾಂತರ ತರಲಿದೆಯಾ? ಎಂಬ ಆತಂಕ ಕಾಡ್ತಿದೆ.

ಕಳೆದ ವರ್ಷ ಅಕ್ಟೋಬರ್- ನವೆಂಬರ್​ನಲ್ಲೇ ಮೂರನೇ ಅಲೆ ಎಂಟ್ರಿ ಕೊಡುತ್ತೆ ಅಂತ ತಜ್ಞರು ಹೇಳಿದ್ದರು. ಆದರೆ ಲಸಿಕೀಕರಣದಿಂದ ಹೇಗೋ ತಪ್ಪಿಸಿಕೊಂಡಿದ್ದೆವು. ಇದೀಗ ಹೊಸ ವರ್ಷದ ಮೊದಲ ದಿನವೇ ಕೊರೊನಾ ಆಘಾತ ನೀಡಿದ್ದು, ಒಂದೇ ದಿನ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿದಾಟಿದೆ.

ಎರಡನೇ ಅಲೆಯಲ್ಲಿ ಭಾಗಶಃ ಹಲವು ಜಿಲ್ಲೆಗಳಲ್ಲಿ ಯಾವುದೇ ಹೊಸ ಸೋಂಕಿತರ ಪ್ರಕರಣವಾಗಲಿ, ಸಾವಿನ ವರದಿಯಾಗಿರಲಿಲ್ಲ. ಕಡಿಮೆಯಾಗಿದ್ದ ಸೋಂಕಿತರ ಸಂಖ್ಯೆ ಕಳೆದೊಂದು ವಾರದಿಂದ ಮತ್ತೆ ಏರಿಕೆಯಾಗುತ್ತಿದೆ. ಬೆಂಗಳೂರಿಗೆ ಹೈರಿಸ್ಕ್ ದೇಶದಿಂದ ಬರುತ್ತಿರುವವರೇ ಕಂಟಕವಾಗಿದ್ದು, ನಿನ್ನೆ ಒಂದೇ ದಿನ 810 ಜನರಿಗೆ ಸೋಂಕು ದೃಢಪಟ್ಟಿದೆ. ಸಕ್ರಿಯ ಕೇಸ್ ಕೂಡ ಹೆಚ್ಚಾಗಿದೆ. ಇದು ಬೆಂಗಳೂರಿಗರ ಆತಂಕಕ್ಕೆ ಕಾರಣ.

ಕಳೆದ 5 ದಿನಗಳಲ್ಲಿ ಕರ್ನಾಟಕದಲ್ಲಿ 3,494 ಸೋಂಕಿತರಿಗೆ ಪಾಸಿಟಿವ್ ದೃಢಪಟ್ಟಿದ್ದು, ಇದರಲ್ಲಿ 2,700 ಜನರು ಬೆಂಗಳೂರಿಗರಾಗಿದ್ದಾರೆ. ಒಮಿಕ್ರಾನ್ ಜೊತೆ ಜೊತೆಗೆ ಡೆಲ್ಟಾ ಡಬಲ್ ಶಾಕ್ ಕೊಟ್ಟಿದೆ. ಆರು ತಿಂಗಳಿನಿಂದ 100-200 ಬರುತ್ತಿದ್ದ ಪ್ರಕರಣಗಳ ಸಂಖ್ಯೆ ಇದೀಗ ಸಾವಿರ ಮೀರಿದೆ.

ಐದೇ ದಿನಗಳಲ್ಲಿ ಬದಲಾದ ಚಿತ್ರಣ:

ಕೇವಲ ಐದು ದಿನಗಳಲ್ಲೇ ಕೊರೊನಾ ಸೋಂಕಿತರ ಚಿತ್ರಣ ಬದಲಾಗಿದೆ‌. ಅಂಕಿಅಂಶಗಳನ್ನು ನೋಡಿದ್ರೆ ಪಾಸಿಟಿವ್ ರೇಟ್​ ಏರಿಕೆ ಆಗುತ್ತಿದ್ದು, ಆತಂಕ ಹೆಚ್ಚಿಸಿದೆ.

ಡಿ. 28 ರಿಂದ ವರದಿಯಾದ ಹೊಸ ಸೋಂಕಿತರ ಮಾಹಿತಿ ಇಲ್ಲಿದೆ ನೋಡಿ..

  • 2021 ರ ಡಿ. 28 ರಂದು ರಾಜ್ಯದಲ್ಲಿ 356 ಹೊಸ ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಇದರಲ್ಲಿ 269 ಕೇಸ್​ಗಳು ಬೆಂಗಳೂರಿನಲ್ಲಿ ವರದಿಯಾಗಿದ್ದವು.
  • 2021 ರ ಡಿ. 29 ರಂದು ರಾಜ್ಯದಲ್ಲಿ 566 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಇದರಲ್ಲಿ 400 ಕೇಸ್​ಗಳು ಬೆಂಗಳೂರಿನಲ್ಲಿ ವರದಿಯಾಗಿದ್ದವು.
  • 2021 ರ ಡಿ. 30 ರಂದು ರಾಜ್ಯದಲ್ಲಿ 700 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಇದರಲ್ಲಿ 565 ಕೇಸ್​ಗಳು ಬೆಂಗಳೂರಿನಲ್ಲಿ ವರದಿಯಾಗಿದ್ದವು.
  • ಡಿ. 31 ರಂದು ರಾಜ್ಯದಲ್ಲಿ 832 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಇದರಲ್ಲಿ 656 ಕೇಸ್​ಗಳು ಬೆಂಗಳೂರಿನಲ್ಲಿ ವರದಿಯಾಗಿದ್ದವು.
  • ಜ. 01- 2022 ರಂದು ರಾಜ್ಯದಲ್ಲಿ 1033 ಕೊರೊನಾ ಸೋಂಕಿತರು ಪತ್ತೆಯಾಗಿದ್ದರು. ಇದರಲ್ಲಿ 810 ಕೇಸ್​ಗಳು ಬೆಂಗಳೂರಿನಲ್ಲಿ ವರದಿಯಾಗಿದ್ದವು.

ಐದು ದಿನದಲ್ಲಿ ಒಟ್ಟು 3,494 ಹೊಸ ಸೋಂಕಿತರು ಪತ್ತೆಯಾಗಿದ್ದು, ಇದರಲ್ಲಿ ಬೆಂಗಳೂರಿನಲ್ಲೇ 2700 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ.

ಪ್ರಕರಣ ಹೆಚ್ಚಾದಂತೆ ಪಾಲಿಕೆ ಎಚ್ಚರ:

ಐದು ದಿನಗಳಲ್ಲಿ ಕೇಸ್ ಹೆಚ್ಚಾದಂತೆ ಪಾಲಿಕೆ ಅಲರ್ಟ್ ಆಗಿದ್ದು, ಇದೀಗ ಟೆಸ್ಟಿಂಗ್ ಸಂಖ್ಯೆ ಹೆಚ್ಚಳ ಮಾಡಲು ಮುಂದಾಗಿದೆ. ಡೆಲ್ಟಾ ಹಾಗೂ ಒಮಿಕ್ರಾನ್ ಎರಡು ಸೋಂಕು ಹರಡುವಿಕೆ ಹೆಚ್ಚಾಗುತ್ತಿದ್ದು, 60 ರಿಂದ 65 ಸಾವಿರಕ್ಕೆ ಕೋವಿಡ್ ಟೆಸ್ಟ್ ಸಂಖ್ಯೆ ಏರಿಕೆ ಮಾಡಿದೆ. ಹಾಗೆಯೇ ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳ ಮೀಸಲು ಸಂಖ್ಯೆ ಹೆಚ್ಚಳ ಮಾಡಲು ಮುಂದಾಗಿರುವುದಾಗಿ ಪಾಲಿಕೆ ಆಯುಕ್ತರು ಮಾಹಿತಿ ನೀಡಿದ್ದಾರೆ.

ಕಳೆದೊಂದು ವಾರದಿಂದ ಹೈರಿಸ್ಕ್ ದೇಶದಿಂದ ಬಂದವರೆಷ್ಟು?:

ದಿನಾಂಕ - ಹೈರಿಸ್ಕ್ ದೇಶದ ಪ್ರಯಾಣಿಕರ ಸಂಖ್ಯೆ

26-12-2021- 785

27-12-2021- 440

28-12-2021- 690

29-12-2021- ಇಲ್ಲ

30-12-2021- 1,408

31-12-2021- 77

01-01-2022- 597

2021ರ ನವೆಂಬರ್ 1ರಿಂದ ಇದುವರೆಗೂ ಹೈರಿಸ್ಕ್ ದೇಶಗಳಿಂದ ಸುಮಾರು 20,415 ಅಂತಾರಾಷ್ಟ್ರೀಯ ಪ್ರಯಾಣಿಕರು ರಾಜ್ಯಕ್ಕೆ ಆಗಮಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.