ETV Bharat / city

ದೇವಾಲಯಗಳ ಆದಾಯಕ್ಕೂ ಕೊರೊನಾಘಾತ: ಕೋವಿಡ್-ಲಾಕ್‌ಡೌನ್​​ ಪ್ರಮುಖ ದೇವಾಲಯಗಳಿಗೆ ಭಾರಿ ನಷ್ಟ

ಕೋವಿಡ್ ಹೇರಿದ ನಿರ್ಬಂಧಗಳಿಂದ ಕಳೆದ ಎರಡು ತಿಂಗಳುಗಳಿಂದ ರಾಜ್ಯದ ದೇವಾಲಯಗಳು ಬಾಗಿಲು ಮುಚ್ಚಿವೆ. ಇದೀಗ ಅನ್‌ಲಾಕ್-3ಗೆ ಸರ್ಕಾರ ಸಿದ್ಧತೆ ನಡೆಸುತ್ತಿದ್ದು, ದೇವಾಲಯಗಳಿಗೆ ನಿರ್ಬಂಧಿತ ಅನುಮತಿ ನೀಡುವ ಸಾಧ್ಯತೆ ಇದೆ.

covid and lockdown effect on temples
ದೇವಾಲಯಗಳ ಆದಾಯಕ್ಕೂ ಕೊರೊನಾಘಾತ: ಕೋವಿಡ್-ಲಾಕ್‌ಡೌನ್​​ ಪ್ರಮುಖ ದೇವಾಲಯಗಳಿಗೆ ಭಾರಿ ನಷ್ಟ
author img

By

Published : Jul 3, 2021, 2:34 AM IST

Updated : Jul 3, 2021, 1:31 PM IST

ಬೆಂಗಳೂರು: ಲಾಕ್‌ಡೌನ್​ನಿಂದ ಬಹುತೇಕ ಆರ್ಥಿಕ ಚಟುವಟಿಕೆಗಳು ಸ್ಥಗಿತವಾಗಿವೆ. ಜನಸಾಮಾನ್ಯರಿಂದ‌ ಹಿಡಿದು ಸರ್ಕಾರದವರೆಗೆ ಲಾಕ್‌ಡೌನ್​ನಿಂದಾಗಿ ಹಣವಿಲ್ಲದೆ ತತ್ತರಿಸಿ ಹೋಗಿದೆ. ಅಷ್ಟೇ ಅಲ್ಲ ರಾಜ್ಯದ ಪ್ರಮುಖ ದೇವಾಲಯಗಳ ಹುಂಡಿಯೂ ಖಾಲಿ ಖಾಲಿಯಾಗಿವೆ.

ಕೊರೊನಾ ಮತ್ತು ಲಾಕ್‌ಡೌನ್​ನಿಂದ ಬಹುತೇಕ ಕರ್ನಾಟಕ ಸ್ತಬ್ಧವಾಗಿದೆ. ಕೋವಿಡ್ ಹೊಡೆತ, ಲಾಕ್‌ಡೌನ್ ಬರೆಗೆ ಜನರ ಜೀವನ ಮೂರಾಬಟ್ಟೆಯಾಗಿದೆ.‌ ಆದಾಯ ಮೂಲ‌ ಬರಿದಾಗಿ ಜೀವನ‌ ನಡೆಸುವುದೇ ದುಸ್ತರವಾಗಿದೆ. ಇತ್ತ ಸರ್ಕಾರದ ಬೊಕ್ಕಸವೂ ಬರಿದಾಗಿದ್ದು, ಖಜಾನೆ ಖಾಲಿಯಾಗಿದೆ.‌ ಕೋವಿಡ್ ಹಾಗೂ ಲಾಕ್​ಡೌನ್​ ಬಿಸಿ ದೇವರಿಗೂ ತಟ್ಟಿದೆ.

ಕೋವಿಡ್ ಹೇರಿದ ನಿರ್ಬಂಧಗಳಿಂದ ಕಳೆದ ಎರಡು ತಿಂಗಳುಗಳಿಂದ ರಾಜ್ಯದ ದೇವಾಲಯಗಳು ಬಾಗಿಲು ಮುಚ್ಚಿವೆ. ಇದೀಗ ಅನ್‌ಲಾಕ್-3ಗೆ ಸರ್ಕಾರ ಸಿದ್ಧತೆ ನಡೆಸುತ್ತಿದ್ದು, ದೇವಾಲಯಗಳಿಗೆ ನಿರ್ಬಂಧಿತ ಅನುಮತಿ ನೀಡುವ ಸಾಧ್ಯತೆ ಇದೆ. ಆದರೆ ಕಳೆದ ಬಾರಿಯ ಲಾಕ್‌ಡೌನ್ ಹಾಗೂ ಈ ವರ್ಷದ ಲಾಕ್‌ಡೌನ್​ನಿಂದ ದೇವಾಲಯಗಳ ಹುಂಡಿ ಭಕ್ತರಿಲ್ಲದೆ ಬಣಗುಡುತ್ತಿದೆ.

ದೇವಾಲಯ ಹುಂಡಿ ಖಾಲಿ ಖಾಲಿ:

ಲಾಕ್‌ಡೌನ್ ಹಾಗೂ ಕೋವಿಡ್ ಹಿನ್ನೆಲೆ ರಾಜ್ಯದ ದೇವಾಸ್ತಾನಗಳು ಕಳೆದ ಎರಡು ತಿಂಗಳಿಂದ ಬಾಗಿಲು ಮುಚ್ಚಿವೆ.‌ ಇದೀಗ ದೇವಸ್ಥಾನಗಳು ಮತ್ತೆ ಬಾಗಿಲು ತೆರೆಯಲು ಸಿದ್ಧವಾಗಿದೆ. ಆದರೆ ಕಳೆದ ಬಾರಿಯ ಲಾಕ್‌ಡೌನ್ ಹಾಗೂ ಈ ಬಾರಿಯ ಲಾಕ್‌ಡೌನ್​ನಿಂದ ರಾಜ್ಯದ ಪ್ರಮುಖ ದೇವಸ್ಥಾನಗಳ ಖಜಾನೆಯೂ ಖಾಲಿಯಾಗಿವೆ.‌

covid and lockdown effect on temples
ಪ್ರಮುಖ ದೇವಾಲಗಳಲ್ಲಿನ ನಷ್ಟದ ಪ್ರಮಾಣ

ಕಳೆದ ವರ್ಷದ ಲಾಕ್‌ಡೌನ್ ನಿಂದಾಗಿ ಮುಜಾರಾಯಿ ದೇವಸ್ಥಾನಗಳು ಸುಮಾರು 600 ಕೋಟಿ ರೂ. ಆದಾಯ ನಷ್ಟ ಅನುಭವಿಸಿತ್ತು. 300 ಎ ಮತ್ತು ಬಿ ಗುಂಪಿನ ದೇವಾಲಯಗಳು ಸುಮಾರು ಶೇ.35ರಷ್ಟು ವಾರ್ಷಿಕ ಆದಾಯ ನಷ್ಟ ಅನುಭವಿಸಿದೆ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಬಾರಿಯ ಲಾಕ್‌ಡೌನ್ ನಿಂದ ಪ್ರಮುಖ ದೇವಾಸ್ಥನಾಗಳ ಆದಾಯದಲ್ಲಿ ಭಾರಿ ಖೋತಾ ಆಗಿತ್ತು. ಈ ಬಾರಿಯೂ ಕೋವಿಡ್ ಹಾಗೂ ಲಾಕ್‌ಡೌನ್​ನಿಂದಾಗಿ ಪ್ರಮುಖ ದೇವಾಲಯಗಳ ಆದಾಯದಲ್ಲಿ ಗಣನೀಯ ಇಳಿಕೆಯಾಗಿದೆ‌ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮುಜರಾಯಿ ಇಲಾಖೆ ನೀಡಿರುವ ಅಂಕಿಅಂಶದ ಪ್ರಕಾರ ಕೋವಿಡ್ ಹಾಗೂ ಲಾಕ್‌ಡೌನ್ ನಿಂದ ದೇವಾಲಯಗಳಿಗೆ ಆಗುತ್ತಿರುವ ಆದಾಯ ನಷ್ಟದ ಪ್ರಮಾಣದ ಗಂಭೀರತೆ ಅರಿವಾಗುತ್ತದೆ.

ಎರಡು ತಿಂಗಳ ಅಂದಾಜು ಆದಾಯ ನಷ್ಟ

  • ಕುಕ್ಕೆ ಸುಬ್ರಮಣ್ಯ ದೇವಾಲಯ- 15.84 ಕೋಟಿ ರೂ.
  • ಕೊಲ್ಲೂರು ಮೂಕಾಂಬಿಕಾ ದೇವಾಲಯ- 7.28 ಕೋಟಿ
  • ಚಾಮುಂಡೇಶ್ವರಿ ದೇವಾಲಯ- 5.66 ಕೋಟಿ
  • ನಂಜನಗೂಡು ಶ್ರೀಕಂಠೇಶ್ವರಸ್ವಾಮಿ- 3.48 ಕೋಟಿ
  • ಮಂದಾರ್ತಿ ದುರ್ಗಾಪರಮೇಶ್ವರಿ- 1.92 ಕೋಟಿ
  • ಘಾಟಿ ಸುಬ್ರಮಣ್ಯ ಸ್ವಾಮಿ- 1.28 ಕೋಟಿ
  • ಎಡೆಯೂರು ಸಿದ್ದಲಿಂಗೇಶ್ವರ- 1.47 ಕೋಟಿ
  • ಸವದತ್ತಿ ರೇಣುಕಾಯಲ್ಲಮ್ಮ- 2.87 ಕೋಟಿ
  • ಬನಶಂಕರಿ ದೇವಸ್ಥಾನ- 1.51 ಕೋಟಿ
  • ಕೊಪ್ಪಳ ಹುಲಿಗೆಮ್ಮ ದೇವಾಲಯ- 1.39 ಕೋಟಿ

ಕಳೆದ ಬಾರಿಯ ಆದಾಯ ನಷ್ಟ ಹೇಗಿದೆ?:

ಕುಕ್ಕೆ ಸುಬ್ರಮಣ್ಯ ದೇವಾಲಯ

  • 2019-20- 98.09 ಕೋಟಿ
  • 2020-21- 71.42 ಕೋಟಿ
  • ನಷ್ಟ- 26.67 ಕೋಟಿ

ಕೊಲ್ಲೂರು ಮೂಕಾಂಬಿಕಾ ದೇವಾಲಯ

  • 2019-20- 45.65 ಕೋಟಿ
  • 2020-21- 26.52 ಕೋಟಿ
  • ನಷ್ಟ- 19.13 ಕೋಟಿ

ಚಾಮುಂಡೇಶ್ವರಿ ದೇವಾಲಯ

  • 2019-20- 34.83 ಕೋಟಿ
  • 2020-21- 14.82 ಕೋಟಿ
  • ನಷ್ಟ- 20.01 ಕೋಟಿ

ನಂಜನಗೂಡು ಶ್ರೀಕಂಠೇಶ್ವರಸ್ವಾಮಿ

  • 2019-20- 20.80 ಕೋಟಿ
  • 2020-21- 11.26 ಕೋಟಿ
  • ನಷ್ಟ- 9.54 ಕೋಟಿ

ಮಂದಾರ್ತಿ ದುರ್ಗಾಪರಮೇಶ್ವರಿ

  • 2019-20- 11.43 ಕೋಟಿ
  • 2020-21- 8.69 ಕೋಟಿ
  • ನಷ್ಟ- 2.74 ಕೋಟಿ

ಘಾಟಿ ಸುಬ್ರಮಣ್ಯ ಸ್ವಾಮಿ

  • 2019-20- 8.20 ಕೋಟಿ
  • 2020-21- 7.68 ಕೋಟಿ
  • ನಷ್ಟ- 52 ಲಕ್ಷ

ಎಡೆಯೂರು ಸಿದ್ದಲಿಂಗೇಶ್ವರ

  • 2019-20- 9.65 ಕೋಟಿ
  • 2020-21- 6.25 ಕೋಟಿ
  • ನಷ್ಟ- 3.4 ಕೋಟಿ

ಸವದತ್ತಿ ರೇಣುಕಾಯಲ್ಲಮ್ಮ

  • 2019-20- 16.77 ಕೋಟಿ
  • 2020-21- 5.76 ಕೋಟಿ
  • ನಷ್ಟ- 11.01 ಕೋಟಿ

ಬನಶಂಕರಿ ದೇವಸ್ಥಾನ

  • 2019-20- 9.04 ಕೋಟಿ
  • 2020-21- 4.91 ಕೋಟಿ
  • ನಷ್ಟ- 4.13 ಕೋಟಿ

ಕೊಪ್ಪಳ ಹುಲಿಗೆಮ್ಮ ದೇವಾಲಯ

  • 2019-20- 9.28 ಕೋಟಿ
  • 2020-21- 4.33 ಕೋಟಿ
  • ನಷ್ಟ- 4.95 ಕೋಟಿ

Last Updated : Jul 3, 2021, 1:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.