ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಸ್ತಬ್ದವಾಗಿದೆ. ಆದರೆ, ಒಂದಷ್ಟು ಜನರಿಗೆ ನಾಳಿನ ಯುಗಾದಿ ಹಬ್ಬದ್ದೇ ಚಿಂತೆಯಾಗಿದೆ.
ನಾಳೆಯಿಂದ ಎಲ್ಲಿ ಅಗತ್ಯ ವಸ್ತುಗಳು ಸಿಗುವುದಿಲ್ಲವೋ ಎಂಬ ಭಯದಿಂದ ಸೂಪರ್ ಮಾರ್ಕೆಟ್ಗಳ ಕಡೆ ಜನ ಮುಗಿ ಬೀಳುತ್ತಿದ್ದಾರೆ. ಅಗತ್ಯ ವಸ್ತುಗಳ ಕೊರತೆ ಕಾಣುವುದಿಲ್ಲ ಎಂದು ಸರ್ಕಾರ ಜನರಿಗೆ ಪರಿಪರಿಯಾಗಿ ಮನವಿ ಮಾಡಿದರೂ, ಅದಕ್ಕೆ ಕಿವಿಗೊಡುತ್ತಿಲ್ಲ.
ಇದರ ಗಂಭೀರತೆ ಅರಿತ ಸೂಪರ್ ಮಾರ್ಕೆಟ್ಗಳು ಗ್ರಾಹಕರು ಒಬ್ಬರಿಂದ ಒಬ್ಬರು ಅಂತರ ಕಾಯ್ದುಕೊಳ್ಳಲು ಉಪಾಯ ಮಾಡಿವೆ. ಇಸ್ರೋ ಲೇಔಟ್ನ ಸ್ಟಾರ್ ಸೂಪರ್ ಮಾರ್ಕೆಟ್ನಲ್ಲಿ ಗ್ರಾಹಕರು ಮೂರು ಅಡಿ ಅಂತರ ಕಾಯ್ದುಕೊಳ್ಳಲು ಪ್ರತಿ ಗ್ರಾಹಕರೂ ನಿಂತುಕೊಳ್ಳಲು ವೃತ್ತ ಹಾಕಲಾಗಿದೆ.
ಹಾಪ್ಕಾಮ್ಸ್ ಹಾಗೂ ತರಕಾರಿ ಹಣ್ಣು ಮಳಿಗೆಗಳು ಸಹ ಅದೇ ರೀತಿ ಮಾಡಿವೆ. ಜನರು ಸಾಲಗಿ ನಿಂತು ಒಬ್ಬರಿಗೊಬ್ಬರು ಅಂತರ ಕಾಯ್ದುಕೊಂಡು ಅಗತ್ಯ ವಸ್ತುಗಳನ್ನ ಖರೀದಿಸಿದರು.