ಬೆಂಗಳೂರು: ಕಾರಾಗೃಹಗಳಲ್ಲಿ ಕೈದಿಗಳ ದಟ್ಟಣೆ ಕಡಿಮೆಗೊಳಿಸುವ ಮೂಲಕ ಕೊರೊನಾ ಸೋಂಕು ತಡೆಗಟ್ಟಲು ನಿಟ್ಟಿನಲ್ಲಿ ಏಳು ವಷ೯ಕ್ಕಿಂತ ಕಡಿಮೆ ಶಿಕ್ಷಾರ್ಹ ಪ್ರಕರಣಗಳಲ್ಲಿ ಬಂಧಿತರಾಗಿರುವ 228 ವಿಚಾರಣಾಧೀನ ಕೈದಿಗಳಿಗೆ ಗುರುವಾರ ಮಧ್ಯಂತರ ಜಾಮೀನು ನೀಡಲಾಗಿದೆ.
ಬಳ್ಳಾರಿಯಲ್ಲಿ 18, ಬೆಳಗಾವಿ 64, ಚಿಕ್ಕಬಳ್ಳಾಪುರ 25, ದಕ್ಷಿಣ ಕನ್ನಡ 13, ಗದಗ 5, ಹಾಸನ 20, ಹಾವೇರಿ 23, ಕಲಬುರಗಿ 23, ಕೋಲಾರ 13, ಕೊಪ್ಪಳ 14, ರಾಯಚೂರು 2, ರಾಮನಗರ 20, ಶಿವಮೊಗ್ಗ 18, ತುಮಕೂರು 7, ಉಡುಪಿ 7, ಕಾರವಾರ 10, ಯಾದಗಿರಿಯಲ್ಲಿ 2 ವಿಚಾರಣಾಧೀನ ಕೈದಿಗಳಿಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಇದೇ ವೇಳೆ ಗರಿಷ್ಠ ಏಳು ವಷ೯ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿ ಶಿಕ್ಷೆ ಅನುಭವಿಸುತ್ತಿರುವ 228 ಸಜಾ ಬಂಧಿಗಳಿಗೆ ತಾತ್ಕಾಲಿಕ ಪೆರೋಲ್ ನೀಡಲು ಶಿಫಾರಸು ಮಾಡಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ 28, ಬೆಳಗಾವಿ 18, ದಕ್ಷಿಣ ಕನ್ನಡ 4, ಧಾರವಾಡ 13, ಹಾಸನ 2, ಕಲಬುರಗಿ 36, ಕೊಡಗು 1, ಮಂಡ್ಯ 2, ಮೈಸೂರು 101, ಶಿವಮೊಗ್ಗ 7, ಉಡುಪಿ 1, ವಿಜಯಪುರ 14 ಶಿಕ್ಷಾಧೀನ ಅಪರಾಧಿಗಳಿಗೆ ತಾತ್ಕಾಲಿಕ ಪೆರೋಲ್ ನೀಡಲು ಶಿಫಾರಸು ಮಾಡಲಾಗಿದೆ. ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಕನಾ೯ಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾಯ೯ದಶಿ೯ ಜಿ. ಬಸವರಾಜು ಮಾಹಿತಿ ನೀಡಿದ್ದಾರೆ.