ಬೆಂಗಳೂರು: ಇಂದು ರಾಜ್ಯದಲ್ಲಿ ಕೊರೊನಾ ಸೋಂಕು 584 ಮಂದಿಗೆ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,31,252ಕ್ಕೆ ಏರಿದೆ. ನಾಲ್ವರು ಕೋವಿಡ್ಗೆ ಮೃತರಾಗಿದ್ದು, ಸಾವಿನ ಸಂಖ್ಯೆ 12,162ಕ್ಕೆ ತಲುಪಿದೆ.
19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ. 676 ಸೋಂಕಿತರು ಇಂದು ಗುಣಮುಖರಾಗಿದ್ದು, ಈವರೆಗೂ 9,10,377 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 181 ಜನರು ಚಿಕಿತ್ಸೆ ಪಡೆಯುತ್ತಿದ್ದು, ರಾಜ್ಯದಲ್ಲಿ 8,694 ಸಕ್ರಿಯ ಪ್ರಕರಣಗಳಿವೆ.
ಇದನ್ನೂ ಓದಿ...ಬೆಂಗಳೂರು; ವ್ಯಾಕ್ಸಿನೇಷನ್ ಡ್ರೈವ್ ಪೂರ್ಣ.. ಆರಂಭದಲ್ಲಿ ಕಾಡಿದ ಆ್ಯಪ್
ಕಳೆದ 7 ದಿನಗಳಲ್ಲಿ 18,968 ಮಂದಿ ಹೋಂ ಕ್ವಾರೆಂಟೈನ್ಗೆ ಒಳಗಾಗಿದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 56,374, ದ್ವಿತೀಯ ಸಂಪರ್ಕದಲ್ಲಿ 63,468 ಜನರಿದ್ದಾರೆ. ಈವರೆಗೂ ಯುಕೆಯಿಂದ ಬಂದ 47 ಮಂದಿಗೆ ಪಾಸಿಟಿವ್ ಬಂದಿದೆ. ಅವರ ಸಂಪರ್ಕದಲ್ಲಿದ್ದ 26 ಮಂದಿಗೂ ದೃಢವಾಗಿದೆ. ಇನ್ನು ಯುಕೆಯಿಂದ ಬಂದವರಲ್ಲಿ 14 ಜನಕ್ಕೆ ರೂಪಾಂತರ ಕೊರೊನಾ ದೃಢಪಟ್ಟಿದೆ.
ಬೆಂಗಳೂರಿನಲ್ಲಿ 282 ಮಂದಿಗೆ ಸೋಂಕು ದೃಢಪಟ್ಟಿದ್ದು, ಈವರೆಗೂ 3,94,495 ಕೊರೊನಾ ತಗುಲಿದೆ. ಇಂದು 292 ಮಂದಿ ಗುಣಮುಖರಾಗಿದ್ದು, ಒಟ್ಟು 3,84,437 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಬ್ಬರು ಸೋಂಕಿತರು ಮೃತ ಪಟ್ಟಿದ್ದು, 4,359 ಜನ ಈವರೆಗೂ ಮೃತರಾಗಿದ್ದಾರೆ. 5,698 ಸಕ್ರಿಯ ಪ್ರಕರಣಗಳಿವೆ.