ಬೆಂಗಳೂರು: ನಗರದ ಹೆಬ್ಬಾಳ ಬಳಿಯ ಮಾನ್ಯತಾ ಟೆಕ್ ಪಾರ್ಕ್ನಲ್ಲಿರುವ ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರಿಗೆ ಕೊರೊನಾ ವೈರಸ್ ಬಂದಿರಬಹುದು ಎಂದು ಶಂಕಿಸಲಾಗಿದೆ.
ವೈರಸ್ ಶಂಕಿತ ಉದ್ಯೋಗಿಯನ್ನು 48 ಗಂಟೆಗಳ ಕಾಲ ವೈದ್ಯರಿಂದ ತಪಾಸಣೆ ನಡೆಸಿ, ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಮಾನ್ಯತಾ ಟೆಕ್ ಪಾರ್ಕ್ನ ಯಾವುದೇ ಸಂಸ್ಥೆಗಳಿಗೆ ರಜೆ ಘೋಷಣೆ ಮಾಡಿಲ್ಲ, ಪರಿಸ್ಥಿತಿಗೆ ಅನುಗುಣವಾಗಿ ಮುಂದಿನ ಕ್ರಮ ಕೈಗೊಳ್ಳಲು ಸಂಸ್ಥೆ ನಿರ್ಧಾರ ಮಾಡಿದೆ.
ಬಹುರಾಷ್ಟ್ರೀಯ ಸಂಸ್ಥೆಗಳ ಕಚೇರಿಯಲ್ಲಿ ಹೆಚ್ಚಾದ ಸಾನಿಟೈಸರ್ ಹಾಗೂ ನಿಯಂತ್ರಣ ಕ್ರಮ:
ಲಂಡನ್ ಮೂಲದ ನಗರದ ಡೇಲಾಯ್ಟ್ ಸಂಸ್ಥೆಯಲ್ಲಿ ಕೊರೊನಾ ವೈರಸ್ ಭೀತಿಯಿಂದ ನಗರದ ಎಲ್ಲಾ ಕಚೇರಿಯಲ್ಲಿ ಸಾನಿಟೈಸರ್ ಹಾಗೂ ಸ್ವಚ್ಛತಾ ಕಾರ್ಯ ಹೆಚ್ಚಿಸಿದೆ. ಅಷ್ಟೇ ಅಲ್ಲದೆ ಇನ್ನು ಹಲವಾರು ಬಹುರಾಷ್ಟ್ರೀಯ ಸಂಸ್ಥೆಗಳಲ್ಲೂ ಕೊರೊನಾ ವೈರಸ್ ಬಗ್ಗೆ ಇದೇ ರೀತಿ ಜಾಗೃತಿ ಮೂಡಿಸಲಾಗುತ್ತಿದೆ. ಯಾವುದೇ ವೈರಸ್ ಶಂಕೆ ಸಂಸ್ಥೆಯ ಸಿಬ್ಬಂದಿಗೆ ಕಾಣಿಸದ ಕಾರಣ ರಜೆ ನೀಡಲು ಸಂಸ್ಥೆ ಮುಂದಾಗಿಲ್ಲ. ಸಂಸ್ಥೆಯ ಉದ್ಯೋಗಿಗಳಿಗೆ ನಿರಂತರವಾಗಿ ಇಮೇಲ್ ಹಾಗೂ ಮಾನವ ಸಂಪನ್ಮೂಲ ಅಧಿಕಾರಿಗಳಿಂದ ವೈರಸ್ ತಡೆಯುವ ಬಗ್ಗೆ ತಿಳಿ ಹೇಳಲಾಗುತ್ತಿದೆ.