ETV Bharat / city

ಕೇವಲ 9 ದಿನಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆಗೆ ಬಿಲ್​​ ಎಷ್ಟು ಗೊತ್ತಾ? - ಬೆಂಗಳೂರಿನಲ್ಲಿ ಕೊರೊನಾ

ಕೊರೊನಾ ಸೋಂಕಿಗೆ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ದರ ವಿಧಿಸಿದರೆ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಸರ್ಕಾರ ಹೇಳುತ್ತಿದ್ದರೂ ಕೆಲವು ಆಸ್ಪತ್ರೆಗಳಲ್ಲಿ ಹೆಚ್ಚು ದರ ವಿಧಿಸುತ್ತಿರುವ ಆರೋಪ ಕೇಳಿ ಬಂದಿದೆ.

Columbia Asia
ಕೊಲಂಬಿಯಾ ಏಷಿಯಾ ಆಸ್ಪತ್ರೆ
author img

By

Published : Jul 16, 2020, 12:11 PM IST

ಬೆಂಗಳೂರು: ಕೊರೊನಾ ಸೋಂಕಿಗೆ ತುತ್ತಾಗಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಲು 9 ಲಕ್ಷ ಬಿಲ್‌ ಆಗುವುದಾಗಿ ಹೇಳಿ ರೋಗಿಯನ್ನು ಖಾಸಗಿ ಆಸ್ಪತ್ರೆಯ ಸಿಬ್ಬಂದಿ ವಾಪಸ್‌ ಕಳಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಸುಮಾರು 67 ವರ್ಷದ ಕೋರಮಂಗಲ ನಿವಾಸಿಯೊಬ್ಬರು ಕೊರೊನಾ ಸೋಂಕಿಗೆ ತುತ್ತಾಗಿ ಬಳಲುತ್ತಿದ್ದರು. ಅವರನ್ನು ತಕ್ಷಣ ಸಂಬಂಧಿಕರು ಚಿಕಿತ್ಸೆಗಾಗಿ ಸೇಂಟ್ ಜಾನ್ಸ್‌ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ವೆಂಟಿಲೇಟರ್, ಬೆಡ್ ಇಲ್ಲದ ಕಾರಣ ಮಹದೇವಪುರದ ವೈಟ್‌ ಫೀಲ್ಡ್​​​ನಲ್ಲಿರುವ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಸೇರಿಸಲು ರೋಗಿಯನ್ನು ಕರೆ ತರಲಾಗಿತ್ತು.

ಈ ವೇಳೆ ಪರಿಶೀಲಿಸಿದ ವೈದ್ಯರು, ನಮ್ಮಲ್ಲಿ 9 ದಿನ ದಿನ ಚಿಕಿತ್ಸೆ ಕೊಡಬೇಕು. ದಿನಕ್ಕೆ ಒಂದು ಲಕ್ಷ ರೂಪಾಯಿಯಂತೆ 9 ದಿನಕ್ಕೆ 9 ಲಕ್ಷ ರೂಪಾಯಿಯಾಗುತ್ತದೆ. ರೋಗಿಯನ್ನು ನಮ್ಮಲ್ಲಿ ದಾಖಲು ಮಾಡುವುದಾದರೆ ಸ್ವಲ್ಪ ಮುಂಗಡ ಹಣವನ್ನೂ ಕಟ್ಟಬೇಕೆಂದು ತಿಳಿಸಿದ್ದಾರೆ ಎನ್ನಲಾಗಿದೆ.

ಬಿಲ್​‌ ಮೊತ್ತವನ್ನು ನೋಡಿ ದಂಗಾದ ಸಂಬಂಧಿಕರು ನಮ್ಮ ಬಳಿ ಇಷ್ಟು ಹಣ ಇಲ್ಲ ಎಂದಾಗ, ಬೇರೊಂದು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ ಆಸ್ಪತ್ರೆ ಸಿಬ್ಬಂದಿ ಸೂಚನೆ ನೀಡಿದರು ಎಂದು ರೋಗಿ ಸಂಬಂಧಿ ಅಬ್ದುಲ್‌ ದೂರಿದ್ದಾರೆ. ಈಗ ರೋಗಿಯನ್ನು ಶಿವಾಜಿನಗರದ ಹೆಚ್​ಬಿಎಸ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಚಿವ ಭೈರತಿ ಬಸವರಾಜ

ಆಸ್ಪತ್ರೆ ನೀಡಿರುವ ಮೊತ್ತದ ವಿವರ ಹೀಗಿದೆ

  • ಚಿಕಿತ್ಸಾ ಕೊಠಡಿ ಬಾಡಿಗೆ 75 ಸಾವಿರ ರೂಪಾಯಿ
  • ಪ್ರೊಫೆಷನಲ್‌ ಶುಲ್ಕ 75,500 ರೂಪಾಯಿ
  • ವೆಂಟಿಲೇಟರ್‌ಗೆ 1.4 ಲಕ್ಷ ರೂಪಾಯಿ
  • ನರ್ಸಿಂಗ್‌ ಶುಲ್ಕ 58,500 ರೂಪಾಯಿ
  • ಔಷಧಗಳಿಗೆ 3 ಲಕ್ಷ ರೂಪಾಯಿ
  • ಲ್ಯಾಬೊರೇಟರಿ‌ ಶುಲ್ಕ 2 ಲಕ್ಷ ರೂಪಾಯಿ
  • ರೇಡಿಯಾಲಜಿಗೆ 35 ಸಾವಿರ ರೂಪಾಯಿ
  • ಆ್ಯಂಬುಲೆನ್ಸ್​ ಹಾಗೂ ಸರ್ಜಿಕಲ್​ ಚಿಕಿತ್ಸಾ ವೆಚ್ಚ ಪ್ರತ್ಯೇಕ

ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ದರ ವಿಧಿಸಿದರೆ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆಯೇ ಹೊರತು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಎಲ್ಲೆಡೆ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.