ETV Bharat / city

ಮೂರು ತಿಂಗಳು ಬೆಡ್ ರೆಸ್ಟ್​ನಲ್ಲಿದ್ದವನಿಗೆ ಕೊರೊನಾ: ಬೆಂಗಳೂರಲ್ಲಿ ಮತ್ತೊಂದು‌ ಬಲಿ

ಮಹಾನಗರದಲ್ಲಿ ಕೋವಿಡ್​​ಗೆ ಮತ್ತೊಂದು ಬಲಿಯಾಗಿದ್ದು, ರಾಜ್ಯದಲ್ಲಿ ಕೊರೊನಾ ಕಾವಿಗೆ ಬಲಿಯಾದವರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ. ನಿಯಂತ್ರಣಕ್ಕೆ ಸಿಗದ ಸೋಂಕಿನಿಂದಾಗಿ ರಾಜ್ಯದ ಜನರು ಭೀತಿಯಲ್ಲಿ ಬದುಕುವಂತಾಗಿದೆ.

corona-patient-death-in-bangalore
ಕೊರೊನಾ ಸೋಂಕು
author img

By

Published : May 23, 2020, 10:42 AM IST

ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಮಹಾಮಾರಿ ತನ್ನ ಕಬಂಧಬಾಹುಗಳನ್ನು ಚಾಚುತ್ತಲೇ ಇದೆ. ನಾಗವಾರದ ಕೆಜಿ ಹಳ್ಳಿ ನಿವಾಸಿ ಮಹಾಮಾರಿ ಕೋವಿಡ್​​​ಗೆ ಬಲಿಯಾಗಿದ್ದಾನೆ.

ರೋಗಿ-1270 32 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಮೂರು ತಿಂಗಳು ಬೆಡ್ ರೆಸ್ಟ್ ಇದ್ದ ಈತನಿಗೆ ಸೋಂಕು ತಗುಲಿರುವುದು ನಿಗೂಢವಾಗಿದೆ. ಅಲ್ಲದೆ ಟಿಬಿ, ನ್ಯೂಮೊನಿಯಾ ಕೂಡ ಇತ್ತು. ಕುಡಿತದ ಚಟಕ್ಕೆ ದಾಸನಾಗಿದ್ದ ಈ ವ್ಯಕ್ತಿ ಇಂದು ಬೆಳಗ್ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಮಹಾನಗರದಲ್ಲಿನ ಸ್ಲಂ ಪ್ರದೇಶದಲ್ಲಿ ವರದಿಯಾದ ಎರಡನೇ ಪ್ರಕರಣ ಇದಾಗಿದೆ. ರಾಜ್ಯದಲ್ಲಿ ಈವರೆಗೆ ಕೋವಿಡ್​​ಗೆ ಬಲಿಯಾದವರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.