ಬೆಂಗಳೂರು: ರಾಖಿ ಹಬ್ಬ ಎಂದರೆ ಅಣ್ಣ ತಂಗಿಯ ಬಾಂಧವ್ಯದ ಸಂಕೇತ. ಆದರೆ ಈ ಬಾರಿ ಕೊರೊನಾ ಹಾಗೂ ಚೀನಾ ಬಿಕ್ಕಟ್ಟಿನಿಂದ ರಾಖಿ ದಾರ ಖರೀದಿಯ ಭರಾಟೆ ಎಂದಿನಂತೆ ಇರುವುದಿಲ್ಲ ಎಂದು ವರ್ತಕರು ಅಂದಾಜಿಸುತ್ತಿದ್ದಾರೆ.
ಈ ಬಾರಿ ನಿರಂತರ ಲಾಕ್ ಡೌನ್ ಇದ್ದ ಹಿನ್ನೆಲೆಯಲ್ಲಿ ಜನರ ಬಳಿ ಹಣವಿಲ್ಲ. 10 ರೂಪಾಯಿ ಮುಖಬೆಲೆಯ ರಾಖಿ ಮಾರಾಟವಾಗಬಹುದು, ಆದರೆ ದುಬಾರಿ ರಾಖಿಯ ಮಾರಾಟ ನಿರೀಕ್ಷೆಯಿಲ್ಲ ಎಂದು ಚಿಕ್ಕಪೇಟೆ ಚಿಲ್ಲರೆ ಜವಳಿ ಅಂಗಡಿಗಳ ಸಂಘದ ಉಪಾಧ್ಯಕ್ಷ ರಾಜಪುರೋಹಿತ್ ತಿಳಿಸಿದರು.
ಚೀನಾ ದೇಶದ ರಾಖಿಗಳು ಈ ಭಾರಿ ಭಾರತಕ್ಕೆ ಬಾರದ ಹಿನ್ನೆಲೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ, ಜನರಿಗೆ ಭಾರತ ಮೂಲದ ಉತ್ಪನ್ನಗಳ ಮೇಲೆ ಈಗ ಹೆಚ್ಚಿನ ವಿಶ್ವಾಸ ಬಂದಿದೆ ಎಂದು ಅಭಿಪ್ರಾಯಪಟ್ಟರು.
ಜೊತೆಗೆ ಉತ್ತರ ಭಾರತದ ಹಲವು ವಲಸೆ ಕಾರ್ಮಿಕರು ತಮ್ಮ ಸ್ವಂತ ಊರಿಗೆ ತೆರಳಿದ ಹಿನ್ನೆಲೆ ಅಲ್ಲೇ ರಾಖಿ ಹಬ್ಬವನ್ನು ಆಚರಣೆ ಮಾಡಲಿದ್ದಾರೆ. ಇಲ್ಲದಿದ್ದರೆ ಪೋಸ್ಟ್ ಅಥವಾ ಕೊರಿಯರ್ ಮೂಲಕ ರಾಖಿಗಳನ್ನ ಕಳಿಸಲಾಗುತ್ತಿತ್ತು.