ETV Bharat / city

ಕೊರೊನಾ ಹಾವಳಿಗೆ ಕರ್ನಾಟಕ ಲಾಕ್​ಡೌನ್​: ಮಾರ್ಚ್31 ರವರೆಗೆ ಬಿಜೆಪಿ ಕಚೇರಿ ಕ್ಲೋಸ್ - ಕರ್ನಾಟಕ ಲಾಕ್​ ಡೌನ್

ರಾಜ್ಯದಲ್ಲಿ ಕೊರೊನಾವನ್ನು ಸಂಪೂರ್ಣ ತಡೆಯುವ ಉದ್ದೇಶದಿಂದ ಸರ್ಕಾರ ರಾಜ್ಯಾದ್ಯಂತ ಲಾಕ್​ ಡೌನ್​ ಮಾಡುವುದಾಗಿ ಹೇಳಿದೆ. ಆದರೆ ಸರ್ಕಾರ ಅಧಿಕೃತವಾಗಿ ಆದೇಶದ ನೀಡುವ ಮೊದಲೇ ರಾಜ್ಯ ಬಿಜೆಪಿ ಕಚೇರಿಯನ್ನು ಮಾರ್ಚ್​​ 31ರ ವರೆಗೆ ಮುಚ್ಚಲಾಗಿದೆ.

corona-effect-karnataka-bjp-office-closed
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
author img

By

Published : Mar 23, 2020, 4:33 PM IST

ಬೆಂಗಳೂರು: ರಾಜ್ಯ ಸರ್ಕಾರದ ಅಧಿಕೃತ ಅದೇಶಕ್ಕೂ ಮೊದಲೇ ಬಿಜೆಪಿ ಕಚೇರಿಯನ್ನು ಮಾರ್ಚ್ 31 ರವರೆಗೆ ಮುಚ್ಚುತ್ತಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

corona effect karnataka bjp office closed
ರಾಜ್ಯ ಬಿಜೆಪಿ ಪ್ರಕಟಣೆ

ರಾಜ್ಯಾದ್ಯಂತ ಲಾಕ್ ಡೌನ್​​ಗೆ ರಾಜ್ಯ ಸರ್ಕಾರ ಆದೇಶ ನೀಡಿದೆ. ಹೀಗಾಗಿ ಮಾರ್ಚ್ 31ರ ವರೆಗೆ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ಪಕ್ಷದ ನಾಯಕರು, ಕಾರ್ಯಕರ್ತರು ಹಾಗು ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಮಾರ್ಚ್ 31 ರ ವರೆಗೆ ಪಕ್ಷದ ಯಾವುದೇ ಸಭೆ ಸಮಾರಂಭ ನಡೆಸಬಾರದು, ತುರ್ತು ವಿಷಯವಿದ್ದಲ್ಲಿ ದೂರವಾಣಿ ಮೂಲಕ ಸಂಪರ್ಕಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಇನ್ನೂ ಅಧಿಕೃತವಾಗಿ ರಾಜ್ಯವನ್ನು ಲಾಕ್ ಡೌನ್ ಆದೇಶ ಹೊರಡಿಸಿಲ್ಲ, ಅದಕ್ಕೂ ಮೊದಲೇ ಬಿಜೆಪಿ ರಾಜ್ಯಾಧ್ಯಕ್ಷರು ಕಚೇರಿ ಬಂದ್​ ಮಾಡುವುದಾಗಿ ಆದೇಶ ಹೊರಡಿಸಿರುವುದು ಅಚ್ಚರಿ ಮೂಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.