ಬೆಂಗಳೂರು: ಬಿಬಿಎಂಪಿಯು ನಿರ್ಗತಿಕರಿಗೆ, ನಿರಾಶ್ರಿತರಿಗೆ ವಸತಿ-ಊಟದ ವ್ಯವಸ್ಥೆ ಕಲ್ಪಿಸಿದ್ದರೂ ಸಹ ಇನ್ನೂ ಅನೇಕ ಭಿಕ್ಷುಕರು ಬೀದಿಗಳಲ್ಲೇ ಇದ್ದು, ಆಹಾರಕ್ಕಾಗಿ ಪರದಾಡುತ್ತಿದ್ದಾರೆ.
ಕೋವಿಡ್-19 ಹಿನ್ನೆಲೆ ಲಾಕ್ಡೌನ್ ಜಾರಿಗೊಳಿಸಿದ್ದು, ತುತ್ತು ಅನ್ನ ಸಿಗದೆ ಭಿಕ್ಷುಕರ ಬದುಕು ಇನ್ನಷ್ಟು ದುಸ್ತರವಾಗಿದೆ. ಹಲವು ದಿನಗಳಿಂದ ಹಸಿದ ಹೊಟ್ಟೆಯಲ್ಲೇ ನಿದ್ದೆ ಮಾಡಬೇಕಾದ ಸ್ಥಿತಿ ಎದುರಾಗಿದೆ.
ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ ಅಂಗಡಿಗಳ ಮುಂದೆ, ರಸ್ತೆಗಳಲ್ಲಿ ಭಿಕ್ಷುಕರು ಮಲಗುತ್ತಿದ್ದಾರೆ. ಇವರಿಗೂ ಸಹ ಪಾಲಿಕೆಯ ಅಧಿಕಾರಿಗಳು ಆಶ್ರಯ, ಆಹಾರ ಕಲ್ಪಿಸಬೇಕಿದೆ.