ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಭೀತಿ ಹೆಚ್ಚಾಗುತ್ತಿದ್ದು, ಭಾರತದಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಸಾವಿರದ ಗಡಿ ದಾಟಿವೆ.
ಕೊರೊನಾ ವೈರಸ್ನಿಂದಾಗಿ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಇದರ ಎಫೆಕ್ಟ್ ಕೇವಲ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರು, ವಲಸಿಗರು, ಮಧ್ಯಮ ವರ್ಗಕ್ಕೆ ಮಾತ್ರ ತಟ್ಟದೆ, ವಿದೇಶಿಯರಿಗೂ ತಟ್ಟಿದೆ.
ಕೊರೊನಾ ನಿಯಂತ್ರಣಕ್ಕಾಗಿ ಹೋಟೆಲ್ಗಳನ್ನು ಬಂದ್ ಮಾಡಲಾಗಿದ್ದು, ಇದರಿಂದಾಗಿ ಊಟವಿಲ್ಲದೆ ವಿದೇಶಿಯರು ಪರದಾಟ ನಡೆಸಿದ್ದಾರೆ. ಭಾರತಕ್ಕೆ ಪ್ರವಾಸ ಹಾಗೂ ಇನ್ನಿತರೆ ಕೆಲಸಕ್ಕಾಗಿ ಬಂದಿರುವ ವಿದೇಶಿಯರಿಗೆ ಒಂದೆಡೆ ಸ್ವದೇಶಕ್ಕೆ ತೆರಳಲು ವಿಮಾನಗಳಿಲ್ಲದೆ, ಇನ್ನೊಂದೆಡೆ ತಂಗಿರುವ ಹೋಟೆಲ್ಗಳಲ್ಲಿ ಸರಿಯಾದ ವ್ಯವಸ್ಥೆಯೂ ಇಲ್ಲದೆ ನಮ್ಮ ಪಾಡು ಯಾರಿಗೂ ಬೇಡಪ್ಪಾ ಅಂತಿದ್ದಾರೆ.
ಸದ್ಯಕ್ಕೆ ಏಪ್ರಿಲ್ 14 ರ ವರೆಗೆ ಭಾರತ ಲಾಕ್ಡೌನ್ ಆಗಿದ್ದು, ಯಾವುದೇ ವಿಮಾನಗಳ ಹಾರಾಟವಿಲ್ಲದಿರುವುದರಿಂದ ವಿದೇಶಿgರು ಇಲ್ಲೇ ಲಾಕ್ ಆಗಬೇಕಿದೆ.