ETV Bharat / city

ಕೋವಿಡ್ ವೈರಸ್ ಹೊಸ ತಳಿ AY 4.0 ಆತಂಕ ಸದ್ಯಕ್ಕಿಲ್ಲ: ಹಾಗಂತ ಮೈ ಮರೆಯುವಂತಿಲ್ಲ..! - ಕರ್ನಾಟಕ ಕೊರೊನಾ AY 4.0 ಪ್ರಕರಣಗಳ ಸಂಖ್ಯೆ

ಮಹಾಮಾರಿ ಕೊರೊನಾ ವೈರಸ್ ರೂಪಾಂತರಿ ತಳಿ AY 4.0 ಮತ್ತೆ ಜನರಲ್ಲಿ ಭೀತಿ ಹೆಚ್ಚಿಸಿದೆ. ಮೊದಲನೇ ಹಾಗೂ ಎರಡನೇ ಅಲೆ ಜನರಿಗೆ ತಂದಿದ್ದ ಆನಾರೋಗ್ಯ ಸಂಕಷ್ಟವನ್ನು ಮತ್ತೆ ನೆನೆಯುವಂತೆ ಮಾಡಿದೆ. ಆರೋಗ್ಯ ಇಲಾಖೆ ಹಾಗೂ ಟೆಕ್ನಿಕಲ್ ಸಮಿತಿ ಸದ್ಯಕ್ಕೆ ರೂಪಾಂತರಿಯ ಆತಂಕ ಇಲ್ಲ ಎಂದು ಅಭಯ ನೀಡಿದೆ. ಆದರೂ ಜನರು ನಿರ್ಲಕ್ಷ್ಯವಹಿಸುವಂತಿಲ್ಲ. ಎಲ್ಲರೂ ಎರಡು ಡೋಸ್ ಲಸಿಕೆ ಕಡ್ಡಾಯವಾಗಿ ಪಡೆದಿರಬೇಕು ಹಾಗೂ ಮಾಸ್ಕ್ ಬಗ್ಗೆ ಅಸಡ್ಡೆ ತೋರದೆ ಧರಿಸಬೇಕು.

corona-ay-4-dot-0-anxiety-in-karnataka
ಕೋವಿಡ್ ವೈರಸ್ ಹೊಸ ತಳಿ AY 4.0
author img

By

Published : Oct 28, 2021, 8:59 PM IST

ಬೆಂಗಳೂರು: ಕೋವಿಡ್ ವೈರಸ್ ರೂಪಾಂತರಿ ತಳಿ AY 4.0 ಮತ್ತೆ ಜನರಲ್ಲಿ ಭೀತಿ ಹೆಚ್ಚಿಸಿದೆ. ಲಾಕ್​ಡೌನ್ ಆತಂಕ ಮೂಡಿಸಿದೆ. ಮೊದಲನೇ ಹಾಗೂ ಎರಡನೇ ಅಲೆ ಜನರಿಗೆ ತಂದಿದ್ದ ಆನಾರೋಗ್ಯ ಸಂಕಷ್ಟವನ್ನು ಮತ್ತೆ ನೆನೆಯುವಂತೆ ಮಾಡಿದೆ. ಆರೋಗ್ಯ ಇಲಾಖೆ ಹಾಗೂ ಟೆಕ್ನಿಕಲ್ ಸಮಿತಿ ಸದ್ಯಕ್ಕೆ ಆತಂಕ ಇಲ್ಲ ಎಂದು ಅಭಯ ನೀಡಿದ್ದರೂ, ಜನರು ನಿರ್ಲಕ್ಷ್ಯವಹಿಸುವಂತಿಲ್ಲ. ಎಲ್ಲರೂ ಎರಡು ಡೋಸ್ ಲಸಿಕೆ ಕಡ್ಡಾಯವಾಗಿ ಪಡೆದಿರಬೇಕು. ಮಾಸ್ಕ್ ಬಗ್ಗೆ ಅಸಡ್ಡೆ ತೋರದೇ ಸರಿಯಾದ ರೀತಿಯಲ್ಲಿ ಧರಿಸಬೇಕು. ನಿತ್ಯ ಕೋವಿಡ್ ಹೊಸ ಪ್ರಕರಣಗಳು, ಹೊಸ ವೇರಿಯೆಂಟ್​ಗಳ ಬಗ್ಗೆ ಬಿಬಿಎಂಪಿ ವಾರ್ ರೂಂ ಮುಖಾಂತರ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ ಎಂದು ಮುಖ್ಯ ಆಯುಕ್ತರಾದ ಗೌರವ್ ಗುಪ್ತ ತಿಳಿಸಿದ್ದಾರೆ.

ಸದ್ಯಕ್ಕೆಇದು ಬೇರೆ ದೇಶಗಳಲ್ಲಿ ಹರಡಿರುವ ಕಾರಣ, ನಮ್ಮ ದೇಶಕ್ಕೆ ಆಗಬಹುದಾದ ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ. ನಂತರ ತಜ್ಞರ ಸಮಿತಿಯೂ ಅಧ್ಯಯನ ನಡೆಸುತ್ತಿದೆ. ಅವರು ನೀಡುವ ಸಲಹೆಯನ್ನು ಪಾಲಿಸಲಾಗುವುದು ಎಂದಿದ್ದಾರೆ.

AY 4.0 ವೈರಸ್ ಬಗ್ಗೆ ಸುದೀರ್ಘ ಚರ್ಚೆ

ಇನ್ನು ಆರೋಗ್ಯ ಇಲಾಖೆ ಆಯುಕ್ತರಾದ ರಂದೀಪ್ ಮಾತನಾಡಿ, AY 4.0 ವೈರಸ್ ಬಗ್ಗೆ ಟೆಕ್ನಿಕಲ್ ಅಡ್ವೈಸರಿ ಕಮಿಟಿ ಸಾಕಷ್ಟು ಸುದೀರ್ಘವಾಗಿ ಚರ್ಚಿಸಿದೆ. ಈವರೆಗೂ ಹೊಸ ರೂಪಾಂತರಿ ತಳಿಯ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಯುಕೆ , ರಷ್ಯಾ, ಇಸ್ರೆಲ್ ದೇಶಗಳಲ್ಲಿ ಈ ರೂಪಾಂತರಿತ ವೈರಸ್ ಹೆಚ್ಚು ಪತ್ತೆಯಾಗಿದೆ. ವೈರಸ್​​​ನ ಹರಡುವಿಕೆಯೂ ಆ ದೇಶಗಳಲ್ಲಿ ಹೆಚ್ಚು ಇದೆ. ಆದರೆ ನಮ್ಮ ದೇಶ, ರಾಜ್ಯ ಮುಖ್ಯವಾಗಿ ಬೆಂಗಳೂರಿನಲ್ಲಿ ಹರಡುವಿಕೆ ಪ್ರಮಾಣ ‌ಕಡಿಮೆ ಇದೆ ಎಂದಿದ್ದಾರೆ. ಇದಕ್ಕೆ ಕಾರಣ ನಮ್ಮ ದೇಶದಲ್ಲಿ ಎರಡನೇ ಅಲೆಯಲ್ಲಿ ಡೆಲ್ಟಾ ವೈರಸ್ ಆರ್ಭಟ ಹೆಚ್ಚಿತ್ತು, ಹೀಗಾಗಿ AY 4.0 ತೀವ್ರತೆ ಕಡಿಮೆ ಇದೆ ಎಂದು ಅಂದಾಜಿಸಲಾಗಿದೆ.

ಆದರೆ, ಈ ಹೊಸ ವೆರಿಯೆಂಟ್ ಬಗ್ಗೆ ಸಾಕಷ್ಟು ಅಧ್ಯಯನ, ತನಿಖೆ ನಡೆಯುತ್ತಿದೆ. ಗ್ರೌಂಡ್ ಲೆವೆಲ್ ಎವಿಡೆನ್ಸ್ ಪ್ರಕಾರ ಡೆಲ್ಟಾ ಗಿಂತ ವೇಗವಾಗಿ ಈ ರೂಪಾಂತರಿ ಹರಡಬಹುದಾ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಈವರೆಗೆ ಇರುವ ಕಂಟೇನ್ಮೆಂಟ್ ಝೋನ್ ಗಳಲ್ಲೂ ಈ ವೇರಿಯೆಂಟ್ ಪತ್ತೆಯಾಗಿಲ್ಲ. AY 4.2 ನಿಂದ ಮೂರನೇ ಅಲೆ ಬರುತ್ತದೆ ಎಂಬುದು ಖಚಿತತೆ ಇಲ್ಲ.

ರಾಜಧಾನಿ ಬೆಂಗಳೂರಲ್ಲಿ ಕ್ರಮ: ರಾಜ್ಯದಲ್ಲಿ ಹಾಗೂ ಬೆಂಗಳೂರು ನಗರದಲ್ಲಿ ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ಯಥಾ ಪ್ರಕಾರ ನಡೆಯುತ್ತಿದೆ. ಶೇಕಡಾ ೧೦ ರಷ್ಟು ಜಿನೋಮಿಕ್ ಸೀಕ್ವೆನ್ಸ್ ನಡೆಯುತ್ತಿದ್ದು, ತಜ್ಞರ ಸಲಹೆ ಮೇರೆಗೆ ಪರೀಕ್ಷೆ ಪ್ರಮಾಣ ಹೆಚ್ಚಳ ಮಾಡಲಾಗುವುದು. AY 4.2 ಪ್ರಕರಣಗಳು ಹೆಚ್ಚಳವಾದರೆ ತಪ್ಪದೇ ಕಠಿಣ ಕ್ರಮ ಜಾರಿಗೆ ಮುಂದಾಗಲು ಬಿಬಿಎಂಪಿ ಸಜ್ಜಾಗಿದೆ.

AY 4.2 ಪ್ರಕರಣಗಳು ಹೆಚ್ಚಳ‌ ಕಂಡರೆ ಐಸೋಲೇಷನ್, ಟೆಸ್ಟಿಂಗ್, ಕಂಟೇನ್ಮೆಂಟ್ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಸದ್ಯಕ್ಕೆ ಕೋವಿಡ್ ಪ್ರಕರಣಗಳು ಕಮ್ಮಿ ಇದೆ. ರೇಟ್ ಆಫ್ ಇನ್ಪೆಕ್ಷನ್ ಕೂಡ ಕಡಿಮೆ ಇರುವ ಕಾರಣ ನಗರದಲ್ಲಿ ಯಥಾ ಸ್ಥಿತಿ ನಿಯಮಗಳ ಪಾಲನೆ ಮಾಡಲಾಗುತ್ತಿದೆ.

ಒಟ್ಟು 3AY 4.2 ಪ್ರಕರಣಗಳು ಪತ್ತೆ

ಬೆಂಗಳೂರಿನಲ್ಲಿ ಒಟ್ಟು 3 AY 4.2 ಪ್ರಕರಣಗಳು ಪತ್ತೆಯಾಗಿದೆ. ನಂದಿನಿಲೇಔಟ್​ನಲ್ಲಿ 2 ಪ್ರಕರಣಗಳು ಪತ್ತೆಯಾಗಿದೆ. AY 4.2 ಸೋಂಕಿಗೆ ತುತ್ತಾದವರು ಈಗಾಗಲೇ ಗುಣಮುಖರಾಗಿದ್ದಾರೆ, ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದಾರೆ. ಯಾವುದೇ ಚೈನ್ ಲಿಂಕ್ ಕೂಡ ಪತ್ತೆಯಾಗಿಲ್ಲ. ರಷ್ಯಾ, ಬ್ರಿಟನ್ ನಲ್ಲಿ ಎರಡನೇ ಅಲೆಯಲ್ಲಿ ಡೆಲ್ಟಾ ವೈರಸ್ ಕಂಡು ಬಂದಿಲ್ಲ, ಹೀಗಾಗಿ ಈ ಹೊಸ ಪ್ರಭೇದ ಹೆಚ್ಚು ಸ್ಪ್ರೆಡ್ ಆಗ್ತಿದೆ.

ಆದರೆ, ಡೆಲ್ಟಾ ದಿಂದ ರೂಪಾಂತರಿ ಆಗಿ ತಳಿ ಹುಟ್ಟಿದರೆ ಆಗ ಮೂರನೇ ಅಲೆ ಸಾಧ್ಯತೆ ಇದೆ ಎಂಬುದು ಟಾಸ್ಕ್ ಫೋರ್ಸ್ ಟೀಂ ಈ ಹಿಂದೆಯೇ ಎಚ್ಚರಿಕೆ ಕೊಟ್ಟಿತ್ತು. AY 4.2 ರೂಪಾಂತರಿ ಬಗ್ಗೆ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ, ತೀವ್ರ ನಿಗಾ ವಹಿಸಲು ನಿರ್ಧರಿಸಿದೆ. AY 4.2 ಕುರಿತು ಟಾಸ್ಕ್ ಫೋರ್ಸ್ ಟೀಂ ತಜ್ಞರು ನೀಡುವ ಸಲಹೆ ಮೇರೆಗೆ, ಹಾಗೂ ರಾಜ್ಯ ಸರ್ಕಾರದ ಸೂಚನೆಯಂತೆ ನಗರದಲ್ಲಿ ನಿರ್ಬಂಧ ಹೇರಲು ನಿರ್ಧರಿಸಲಾಗಿದೆ.

ಲಸಿಕೆ ಒಂದೇ ಮಾರ್ಗ: ಈ ಕುರಿತು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ವೈರಸ್ ಮ್ಯೂಂಟೆಟ್ ಆಗ್ತಿರುತ್ತದೆ. ಮ್ಯೂಟೆಷನ್ ಆಗೋದ್ರಲ್ಲಿ ತಡೆಗಟ್ಟಲು ಆಗೋದಿಲ್ಲ. ಇದನ್ನ ತಡೆಗಟ್ಟಬೇಕು ಅಂದ್ರೆ ಎಲ್ಲರೂ ಲಸಿಕೆ ತಗೆದುಕೊಳ್ಳಬೇಕು. ಲಸಿಕೆ ತಗೆದುಕೊಳ್ಳುವ ಮೂಲಕ ಆದಷ್ಟು ತಡೆಗಟ್ಟಬಹುದು. ಒಬ್ಬರಿಂದ ಒಬ್ಬರಿಗೆ ಹರಿಡುವಿಕೆಯಿಂದ ಮ್ಯೂಟೆಷನ್ ಹೆಚ್ಚಾಗುತ್ತದೆ. ಪ್ರಕೃತಿಯಲ್ಲಿ ಕೋಟ್ಯಂತರ ವೈರಸ್ ಇದೆ ಅದ್ರಲ್ಲಿ ಇದೊಂದು. ಹೆಚ್ಚಿನ ಜನರಿಗೆ ಲಸಿಕೆ ಕೊಟ್ಟಿರೋದ್ರಿಂದ ನಮಗೆ ಅಷ್ಟೇನೂ ಅಂತಕ ಎದುರಾಗೋದಿಲ್ಲ, ಹಾಗಂತ ಮೈಮರೆಯಬಾರದು. ಮುಂಜಾಗ್ರತಾ ಕ್ರಮವಾಗಿ ಲಸಿಕೆ ಕೊಡಬೇಕು, ಜೊತೆಗೆ ಲಕ್ಷಣ ಕಂಡು ಬಂದಲ್ಲಿ ತಪಾಸಣೆ ಮಾಡಿಕೊಂಡು ಐಸೋಲೆಟ್ ಆಗಬೇಕು.

ನಗರದಲ್ಲಿ ಮತ್ತಷ್ಟು ನಿರ್ಬಂಧ ಹೇರುವ ವಿಚಾರವಾಗಿ ಮಾತನಾಡಿದ್ದು, ಈಗಾಗಲೇ ನಿರ್ಬಂಧಗಳ ಮೇಲೆ ನಿರ್ಬಂಧಗಳನ್ನ ಹಾಕಿಕೊಂಡು ಕೂತಿದ್ದೇವೆ. ನಿರ್ಬಂಧ ವೀಪರಿತವಾಗಿದೆ, ಇನ್ನಷ್ಟು ನಿರ್ಬಂಧ ಹಾಕಿದರೆ ಕಷ್ಟವಾಗುತ್ತೆ. ನಾನೇ ಸ್ವಾತ ದುಬೈ ಪ್ರವಾಸದ ವೇಳೆ ನಿರ್ಬಂಧಗಳನ್ನ ಅನುಭವಿಸಿದ್ದೇನೆ. ಅಲ್ಲಿದೆ, ಹೋಗಬೇಕಾದರೆ ಮತ್ತು ಬರಬೇಕಾದ್ರೆ ಆರ್​ಟಿಪಿಸಿಆರ್​​ ಟೆಸ್ಟ್​ಗಳನ್ನ ಮಾಡಿಸಿದ್ದೇನೆ. ಇದು ವೀಪರಿತವಾಗಿದೆ ಇದನ್ನೆಲ್ಲ ಸರಿಪಡಿಸಿಕೊಳ್ಳುವಂತಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ತಜ್ಞರ ಎಚ್ಚರಿಕೆ ಪ್ರಕಾರ ದೀಪಾವಳಿ ಹಬ್ಬವನ್ನೂ ಎಚ್ಚರದಿಂದ ಸಾಮಾಜಿಕ ಅಂತರದೊಂದಿಗೆ, ಮಾಸ್ಕ್ ಧರಿಸಿಯೇ ಆಚರಿಸಬೇಕು ಎಂದಿದ್ದಾರೆ. ಮೂರನೆ ಅಲೆ ಎರಡನೇ ಅಲೆಯಷ್ಟು ಪ್ರಭಾವ ಬೀರುವ ಸಾಧ್ಯತೆ ಇಲ್ಲ. ವೈರಸ್ ಕ್ಯಾರೆಕ್ಟರ್ ಚೇಂಜ್ ಮಾಡುತ್ತದೆ. ರೋಗಿ ಸತ್ತಾಗ ವೈರಸ್ ಸಾಯುತ್ತದೆ. ಹೊಸ ವೈರಸ್ ಹೇಗೆ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಶಾಲೆಗಳು ಆರಂಭವಾಗಿದ್ದು, ಶಾಲೆಯವರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ತಜ್ಞರ ಸಮಿತಿಯು ಕಾಲಕಾಲಕ್ಕೆ ನೀಡುವ ಸಲಹೆಯ ಆಧರಿಸಿ ಮುಂದುವರಿಯಲು ಬಿಬಿಎಂಪಿ ನಿರ್ಧರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.