ETV Bharat / city

ವೈದ್ಯರು, ಸಿಬ್ಬಂದಿಗೇ ಕೊರೊನಾ ಸಂಕಷ್ಟ.. ಕಾಡಲಿದೆಯಾ ವೈದ್ಯಕೀಯ ಸೌಲಭ್ಯ ಕೊರತೆ?

ಮೂರನೇ ಅಲೆಯಲ್ಲಿ ದೃಢಪಟ್ಟಿರುವ ಸೋಂಕಿತರಲ್ಲಿ ರೋಗದ ಲಕ್ಷಣಗಳು ಸೌಮ್ಯವಾಗಿರುವುದು ಕಂಡು ಬರ್ತಿದೆ. ಆದರೆ, ಸಕ್ರಿಯ ಕೇಸ್​ಗಳೇ ಲಕ್ಷ ಗಡಿ ದಾಟಿದೆ. ಜನವರಿ ತಿಂಗಳ ಅಂತ್ಯಕ್ಕೆ ಹಾಗೂ ಫೆಬ್ರವರಿಯ ಆರಂಭದಲ್ಲಿ ಇದು ದುಪ್ಪಟ್ಟಾಗುವ ಎಲ್ಲ ಲಕ್ಷಣಗಳಿವೆ. ಅದರಲ್ಲೂ ಕೋವಿಡ್​ ವಾರಿಯರ್ಸ್​ಗೆ ಸೋಂಕು ಹೆಚ್ಚು ತಗುಲುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

author img

By

Published : Jan 17, 2022, 7:35 PM IST

Updated : Jan 17, 2022, 8:25 PM IST

corona-attack
ಕೊರೊನಾ ಕಾಟ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕೋವಿಡ್ ಮೂರನೇ ಅಲೆ ಬಹುವೇಗವಾಗಿ ಹರಡುತ್ತಿದೆ. ಅದರಲ್ಲೂ ವೈದ್ಯರು, ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

ಮೂರನೇ ಅಲೆಯಲ್ಲಿ ದೃಢಪಟ್ಟಿರುವ ಸೋಂಕಿತರಲ್ಲಿ ರೋಗದ ಲಕ್ಷಣಗಳು ಸೌಮ್ಯವಾಗಿರುವುದು ಕಂಡು ಬರ್ತಿದೆ. ಆದರೆ, ಸಕ್ರಿಯ ಕೇಸ್​ಗಳೇ ಲಕ್ಷದ ಗಡಿದಾಟಿದೆ. ಜನವರಿ ತಿಂಗಳ ಅಂತ್ಯಕ್ಕೆ ಹಾಗೂ ಫೆಬ್ರವರಿಯ ಆರಂಭದಲ್ಲಿ ಇದು ದುಪ್ಪಟ್ಟಾಗುವ ಎಲ್ಲ ಲಕ್ಷಣಗಳಿವೆ. ಮುಂದಿನ ದಿನಗಳಲ್ಲಿ ವೈದ್ಯರು, ಸಹಾಯಕರು, ಇತರೆ ಸಿಬ್ಬಂದಿ ಅಲಭ್ಯತೆ ಶುರುವಾಗುವ ಆತಂಕ ಉಂಟಾಗಿದೆ.

ಸಣ್ಣಪುಟ್ಟ ರೋಗಗಳಿಗೆ ಆಸ್ಪತ್ರೆ ನಿರ್ಬಂಧ

ಈಗಾಗಲೇ ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಜನಸಂದಣಿ ಕಡಿಮೆ ಮಾಡಲು ಜೊತೆಗೆ ವೈದ್ಯರಿಗೆ ಸೋಂಕು ತಗುಲುವುದನ್ನ ತಪ್ಪಿಸಲು 2 ವಾರಗಳ ಕಾಲ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ಇಲ್ಲಿಯತನಕ ಸಕ್ರಿಯ ಕೇಸ್​ಗಳು 1,97,982 ರಷ್ಟು ಇದ್ದರೂ ಇದರಲ್ಲಿ 2356 ಸೋಂಕಿತರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಈ ಪೈಕಿ ಆಕ್ಸಿಜನ್, ಹೆಚ್​ಡಿಯುನಲ್ಲಿ 829, ಐಸಿಯುನಲ್ಲಿ 145 ಹಾಗೂ ಐಸಿಯು ವಿಥ್ ವೆಂಟಿಲೇಟರ್​ನಲ್ಲಿ 49, ಜನರಲ್ 1333 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಎಲ್ಲರೂ ಹೋಂ ಐಸೋಲೇಷನ್​ನಲ್ಲೇ ಗುಣಮುಖರಾಗುತ್ತಿದ್ದಾರೆ.

ಆದರೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಹದಗೆಟ್ಟರೆ ವೈದ್ಯರು, ವೈದ್ಯಕೀಯ ಸಿಬ್ಬಂದಿಯಲ್ಲೇ ಸೋಂಕು ಹೆಚ್ಚು ಹರಡಿದರೆ ಸಂಕಷ್ಟ ಎದುರಾಗುವುದು ಖಚಿತ. ಈಗಾಗಲೇ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ಇತರೆ ಸಹಾಯಕರಿಗೆ ಸೋಂಕು ಹರಡಿದೆ.

ವಿವಿಧ ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ಸೋಂಕು

ನಗರದ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಒಟ್ಟು 41ಮಂದಿ ವೈದ್ಯರು, ದಾದಿಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಗೆ ಪಾಸಿಟಿವ್ ದೃಢಪಟ್ಟಿದೆ‌. ಸದ್ಯ ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದು, ಅವರಲ್ಲಿ ಹೆಚ್ಚಿನವರು ಮನೆಯಲ್ಲೇ ಐಸೋಲೇಷನ್ ಆಗಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆ, ಸಿ ವಿ ರಾಮನ್​ನಗರ ಜನರಲ್ ಆಸ್ಪತ್ರೆ ಮತ್ತು ಬೌರಿಂಗ್ ಆಸ್ಪತ್ರೆಗಳಲ್ಲಿ ಇದೇ ರೀತಿಯ ಪರಿಸ್ಥಿತಿ ವರದಿಯಾಗಿದೆ. ಸಿ.ವಿ. ರಾಮನ್ ಆಸ್ಪತ್ರೆಯಲ್ಲಿ 50 ವೈದ್ಯರಲ್ಲಿ ನಾಲ್ವರು ವೈದ್ಯರಿಗೆ ಪಾಸಿಟಿವ್ ಬಂದಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ 200 ವೈದ್ಯರಲ್ಲಿ 11 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲೂ ಇದೇ ಪರಿಸ್ಥಿತಿ ಇದ್ದು, ಕಳೆದ ಅಲೆಗಳಿಗೆ ಹೋಲಿಸಿದರೆ, ಶೇ.10-15% ರಷ್ಟು ಕಡಿಮೆ ಪ್ರಮಾಣದ ಸಿಬ್ಬಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ‌.

ಸೋಂಕು ಉಲ್ಬಣವಾಗ್ತಿದ್ದರು ವೈದ್ಯರ ಹಾಗೂ ಸಿಬ್ಬಂದಿ ಕೊರತೆ ಉಂಟಾಗಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಇದರ ತೀವ್ರತೆ ಹೆಚ್ಚಾದರೆ ವೈದ್ಯಕೀy ಸಿಬ್ಬಂದಿ ಕೊರತೆಯು ಖಂಡಿತ ಎದುರಾಗಲಿದೆ. ಸದ್ಯ ಆರೋಗ್ಯ ಹಾಗೂ ಮೆಡಿಕಲ್ ಕಾಲೇಜುಗಳಲ್ಲಿ ಮೆಡಿಕಲ್ ಡಾಕ್ಟರ್ಸ್ ಸ್ಟಾಫ್​ ಸೇರಿ 82,543 ಸಿಬ್ಬಂದಿ ಇದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಲಾಕ್​​ಡೌನ್ ಇಲ್ಲ, ವೀಕೆಂಡ್ ಕರ್ಫ್ಯೂ ಸೇರಿ ಕಠಿಣ ನಿಯಮ ಸಡಿಲಿಕೆ ಬಗ್ಗೆ ಶುಕ್ರವಾರ ನಿರ್ಧಾರ

Last Updated : Jan 17, 2022, 8:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.