ETV Bharat / city

ಅಭಿವೃದ್ಧಿ ಪರ ಉದ್ದೇಶ ಹೊಂದಿರುವ ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ: ಅರವಿಂದ್ ಲಿಂಬಾವಳಿ - Congress mukhta mahedevapura

ಪಕ್ಷಕ್ಕೆ ಸೇರುವವರು ಯಾವುದೇ ಅಮಿಷಗಳಿಗೆ ಒಳಾಗಾಗಿ ಬಂದಿರುವುದಿಲ್ಲ. ಕಳೆದ ಒಂದು‌ ದಶಕದಲ್ಲಿ ಆಗಿರುವ ಅಭಿವೃದ್ಧಿ ನೋಡಿ ಬರುತ್ತಿದ್ದಾರೆ. ಯಾರೇ ಉತ್ತಮ ಅಭಿವೃದ್ಧಿ ಮನೋಭಾವ ಹೊಂದಿದ್ದವರು ಪಕ್ಷಕ್ಕೆ ಬಂದರೆ ಅವರಿಗೆ ಸ್ವಾಗತ ಕೋರಲಾಗುತ್ತೆ ಎಂದರು.

arvinda limbavali
arvinda limbavali
author img

By

Published : Oct 25, 2021, 3:51 AM IST

ಮಹದೇವಪುರ(ಬೆಂಗಳೂರು): ಮಹದೇವಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕು.ದೇಶದದಲ್ಲಿ ಕಾಂಗ್ರೆಸ್ ಮುಕ್ತ ಬಿಜೆಪಿ ನಿರ್ಮಾಣಕ್ಕಾಗಿ ಪಕ್ಷ ಪಣತೊಟ್ಟಿದೆ. ಮಂಡೂರು ಗ್ರಾಮ kUw ಕಾಂಗ್ರೆಸ್ ಮುಕ್ತ ಮಾಡಲು ಅದೇ ರೀತಿ ಪಂಚಾಯಿತಿಯನ್ನು ಮಾಡಬೇಕೆಂದು ಶಾಸಕ ಅರವಿಂದ ಲಿಂಬಾವಳಿ ಕಾರ್ಯಕರ್ತರಿಗೆ ಕರೆ ನೀಡಿದರು.

ಮಂಡೂರು ಗ್ರಾಮದಲ್ಲಿ ನಡೆದ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಂಡೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಮುಖಂಡ ಜನಾರ್ಧನಗೌಡ ಸೇರಿದಂತೆ ಇಪ್ಪತ್ತಕ್ಕೂ ಹೆ‍‍ಚ್ಚು ಬೆಂಬಲಿಗರಿಗೆ ಪಕ್ಷದ ಶಾಲು ಹಾಕಿ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

ಅರವಿಂದ್ ಲಿಂಬಾವಳಿ ಮಾತು

ನಂತರ ಮಾತನಾಡಿದ ಶಾಸಕ ಅರವಿಂದ ಲಿಂಬಾವಳಿ, ಪಕ್ಷಕ್ಕೆ ಸೇರುವವರು ಯಾವುದೇ ಅಮಿಷಗಳಿಗೆ ಒಳಾಗಾಗಿ ಬಂದಿರುವುದಿಲ್ಲ. ಕಳೆದ ಒಂದು‌ ದಶಕದಲ್ಲಿ ಆಗಿರುವ ಅಭಿವೃದ್ಧಿ ನೋಡಿ ಬರುತ್ತಿದ್ದಾರೆ. ಯಾರೇ ಉತ್ತಮ ಅಭಿವೃದ್ಧಿ ಮನೋಭಾವ ಹೊಂದಿದ್ದವರು ಪಕ್ಷಕ್ಕೆ ಬಂದರೆ ಅವರಿಗೆ ಸ್ವಾಗತ ಕೋರಲಾಗುತ್ತೆ ಎಂದರು. ಪಕ್ಷಕ್ಕೆ ಯಾರೇ ಬಂದರು ಹೊಸಬರು-ಹಳಬರು ಎಂಬ ಭೇದ-ಭಾವ ಇರುವುದಿಲ್ಲ. ಎಲ್ಲಾರೂ ಒಗ್ಗಟ್ಟಿನಿಂದ ಕೈ ಜೋಡಿಸಿ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದರು.

ಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ 36 ಕೋಟಿ ರೂ. ಅನುದಾನ ನೀಡಲಾಗಿದೆ.ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಕ್ಕದಲ್ಲಿ ಬಿಬಿಎಂಪಿ ಇರುವುದರಿಂದ ಅದಕ್ಕಿಂತ ಹೆಚ್ಚಿನ ರೀತಿಯಲ್ಲಿ ಗ್ರಾಮಾಂತರ ಅಭಿವೃದ್ಧಿ ಆಗಬೇಕು . ಪಂಚಾಯಿತಿಯಲ್ಲಿ ಎಲ್ಲಾ ಸಮುದಾಯಗಳಿಗೆ ಸಮುದಾಯ ಭವನಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಎಲ್ಲ ಪಂಚಾಯಿತಿಗಳು ಬಿಬಿಎಂಪಿ ರೀತಿಯಲ್ಲೇ ಅಭಿವೃದ್ಧಿ ಕಾಣಬೇಕು ಅದಕ್ಕಾಗಿ ಎಲ್ಲರೂ ಶ್ರಮಿಸುವುದಾಗಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.