ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಸದನ ಸಭಾಂಗಣದ ನೆಲದಲ್ಲೇ ಹಾಸಿಗೆ ಹಾಸಿ ಮಲಗಿದರು.
ಧರಣಿನಿರತ ಕೈ ಶಾಸಕರಿಗೆ ಭೂಜನ ಹಾಗೂ ಹಾಸಿಗೆ ವ್ಯವಸ್ಥೆಯನ್ನು ವಿಧಾನಸಭೆ ಸಚಿವಾಲಯವೇ ಕಲ್ಪಿಸಿದೆ. ಹಾಸಿಗೆ, ದಿಂಬು, ಬೆಡ್ ಶೀಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸುಮಾರು 80 ಬೆಡ್ ಗಳನ್ನು ಪೂರೈಸಿಲಾಗಿದೆ. ಸದನದೊಳಗೆ ಆಸನದ ಮಧ್ಯೆ ಲಭ್ಯವಿರುವ ಜಾಗದಲ್ಲಿ ಹಾಸಿಗೆಗಳನ್ನು ಹಾಸಲಾಗಿದೆ. ಭೋಜನ ಸವಿದ ಕೈ ಶಾಸಕರು ಬಳಿಕ ವಿಧಾನಸಭೆ ಸಭಾಂಗಣದಲ್ಲೇ ಹಾಸಿಗೆ ಹಾಸಿ ಮಲಗಿದರು.
ಓದಿ: ಮಾರಕಾಸ್ತ್ರ ತೋರಿಸಿ ಫುಡ್ ಡಿಲೆವರಿ ಬಾಯ್ ಬೈಕ್ ಎಗರಿಸಿದ ಪುಡಿರೌಡಿಗಳು
ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕೈ ನಾಯಕರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪರ ಮನವೊಲಿಕೆಗೂ ಒಪ್ಪದ ಕಾಂಗ್ರೆಸ್ ಶಾಸಕರು ಧರಣಿ ಮುಂದುವರಿಸಿದ್ದಾರೆ.
ಭೋಜನದ ಬಳಿಕ ಕೆಲ ಕೈ ನಾಯಕರು ಕೆಲ ಜೋಕ್ ಕಟ್ ಮಾಡಿದರೆ, ಇನ್ನು ಕೆಲವರು ರಾಜಕೀಯ ವಿದ್ಯಾಮಾನಗಳು, ಹಳೆಯ ಘಟನೆಗಳನ್ನು ಮೆಲುಕು ಹಾಕುತ್ತಿದ್ದರು. ಇನ್ನು ಕೆಲವರು ಪ್ರತಿಫಕ್ಷ ನಾಯಕ ಸಿದ್ದರಾಮಯ್ಯ ಜೊತೆ ಪೊಟೋ ಕ್ಲಿಕ್ಕಿಸಿಕೊಳ್ಳುತ್ತಿರುವುದು ಕಂಡು ಬಂತು.