ಬೆಂಗಳೂರು: ಹಿಜಾಬ್ ಧರಿಸಿಯೇ ವಿಧಾನಸೌಧದಲ್ಲಿ ಕೂರುತ್ತೇನೆ, ಯಾರಿಗೆ ತಾಕತ್ತಿದೆ ತಡೆಯಲಿ ಎಂದು ಸವಾಲು ಹಾಕಿದ್ದ ಕಾಂಗ್ರೆಸ್ ಶಾಸಕಿ ಖನೀಜ್ ಫಾತಿಮಾ ಅವರು ತಾವು ಹೇಳಿದಂತೆ ಇಂದು ವಿಧಾನಸೌಧಕ್ಕೆ ಹಿಜಾಬ್ ಧರಿಸಿ ಆಗಮಿಸಿದ್ದಾರೆ.
ಈ ಹಿಂದೆ ಕೂಡ ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ ಹಿಜಾಬ್ ಧರಿಸಿ ಬಂದು ಕಲಾಪದಲ್ಲಿ ಭಾಗಿಯಾಗುತ್ತಿದ್ದರು. ಆದರೆ ಇದೀಗ ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ ಚರ್ಚೆಯಲ್ಲಿದ್ದು, ಫಾತಿಮಾ ಅವರು ಹಿಜಾಬ್ಗೆ ಬೆಂಬಲಿಸಿ ಕಲಬುರಗಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳನ್ನು ಕರೆದುಕೊಂಡು ಫೆ.5ರಂದು ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ: ಹಿಜಾಬ್ ಧರಿಸಿಯೇ ವಿಧಾನಸೌಧದಲ್ಲಿ ಕೂರುತ್ತೇನೆ, ಯಾರಿಗೆ ತಾಕತ್ತಿದೆ ತಡೆಯಲಿ : ಕಾಂಗ್ರೆಸ್ ಶಾಸಕಿ
ಹಿಜಾಬ್ ನಮ್ಮ ಹಕ್ಕು, ಯಾವುದೇ ಕಾರಣಕ್ಕೂ ನಾವು ಬುರ್ಖಾ ಹಾಕಿಕೊಳ್ಳುವುದನ್ನು ಬಿಡುವುದಿಲ್ಲ. ಇದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ನಾನು ಸಹ ಅಸೆಂಬ್ಲಿಯಲ್ಲಿ ಹಿಜಾಬ್ ಧರಿಸಿಯೇ ಕುಳಿತುಕೊಳ್ಳುತ್ತೇನೆ. ಧೈರ್ಯ ಇದ್ದವರು ನನ್ನ ತಡೆಯಲಿ ಎಂದು ಸವಾಲೊಡ್ಡಿದ್ದರು. ಇದೀಗ ಅದೇ ರೀತಿ ಬಂದು ಗಮನ ಸೆಳೆದರು.