ETV Bharat / city

ಕೈ ನಾಯಕರ ರಾಜ್ಯ ಪ್ರವಾಸ: ರಾಜಧಾನಿಯಲ್ಲಿ ಕಾರ್ಯಕ್ರಮವಿಲ್ಲದೇ ಕಾಂಗ್ರೆಸ್ ಚಟುವಟಿಕೆ ನೀರಸ

ಕಳೆದ ಒಂದು ವಾರದಲ್ಲಿ ಕಾಂಗ್ರೆಸ್ ನಾಯಕರು ಬೆರಳೆಣಿಕೆಯಷ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ರಾಜ್ಯದ ರಾಜಧಾನಿಯಲ್ಲಿ ಕಾಂಗ್ರೆಸ್ ಚಟುವಟಿಕೆ ಕಡಿಮೆ ಆಗಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

Congress activity less in Bangalore
ಕಾಂಗ್ರೆಸ್ ಚಟುವಟಿಕೆ ನೀರಸ
author img

By

Published : Aug 2, 2021, 10:48 PM IST

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಾಯಕರು ಪ್ರವಾಸದಲ್ಲಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಚಟುವಟಿಕೆ ನೀರಸಗೊಂಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ ನಿರಂತರ ಹೋರಾಟ ನಡೆಸುವ ಮೂಲಕ ಕಳೆದ ತಿಂಗಳು ಸಾಕಷ್ಟು ಸುದ್ದಿಯಲ್ಲಿದ್ದ ಕಾಂಗ್ರೆಸ್ ಚಟುವಟಿಕೆ, ಕಳೆದ ಒಂದು ವಾರಗಳಿಂದ ನಗರ ಕೇಂದ್ರವನ್ನು ಬಿಟ್ಟು ರಾಜ್ಯದ ವಿವಿಧ ಭಾಗಗಳಿಗೆ ಕಾಂಗ್ರೆಸ್ ನಾಯಕರು ಪ್ರವಾಸ ಕೈಗೊಂಡ ಹಿನ್ನೆಲೆ ರಾಜಧಾನಿ ಚಟುವಟಿಕೆ ಇಲ್ಲದೆ ಬಿಕೋ ಎನ್ನುತ್ತಿದೆ.

ಒಂದು ಅಥವಾ ಎರಡು ದಿನಗಳ ಪ್ರವಾಸವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಮ್ಮಿಕೊಳ್ಳುತ್ತಿದ್ದು, ಬಹುತೇಕ ಕಾಂಗ್ರೆಸ್ ಚಟುವಟಿಕೆ ವಿವಿಧ ಜಿಲ್ಲೆಗಳಿಗೆ ಹಂಚಿಹೋಗಿದೆ. ರಾಜ್ಯ ನಾಯಕರ ಭೇಟಿಗೆ ನಗರಕ್ಕೆ ಆಗಮಿಸುತ್ತಿದ್ದ ಕಾರ್ಯಕರ್ತರ ಸಂಖ್ಯೆ ಕಡಿಮೆಯಾಗಿದೆ. ಪಕ್ಷದ ಮುಖಂಡರ ಸುದ್ದಿಗೋಷ್ಠಿ, ಪ್ರತಿಭಟನೆ ಕಾರ್ಯಕ್ರಮಗಳು ಹಾಗೂ ಸಭೆ ಸಹ ಗಣನೀಯವಾಗಿ ಇಳಿಕೆಯಾಗಿದೆ.

ಸಾಮಾನ್ಯವಾಗಿ ರಾಜ್ಯ ನಾಯಕರು ನಗರ ಕೇಂದ್ರದಲ್ಲಿ ಇಲ್ಲದ ಸಂದರ್ಭ ಇತರ ಪ್ರಮುಖ ನಾಯಕರು ಚಟುವಟಿಕೆಯಲ್ಲಿ ತೊಡಗುವುದು ವಾಡಿಕೆಯಾಗಿತ್ತು. 2 ಮತ್ತು 3ನೇ ಹಂತದ ನಾಯಕರು ನಗರದ ವಿವಿಧೆಡೆ ಸಮಾರಂಭದ ಸುದ್ದಿಗೋಷ್ಠಿ ಹಾಗೂ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುತ್ತಿದ್ದರು. ಆದರೆ, ಕಳೆದ ಒಂದು ವಾರದಲ್ಲಿ ಕಾಂಗ್ರೆಸ್ ನಾಯಕರು ಬೆರಳೆಣಿಕೆಯಷ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ರಾಜ್ಯದ ರಾಜಧಾನಿಯಲ್ಲಿ ಕಾಂಗ್ರೆಸ್ ಚಟುವಟಿಕೆ ಕಡಿಮೆ ಆಗಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

ಜವಾಬ್ದಾರಿ ನೀಡಿಕೆ:

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಿಂದಾಗಿ ನೆರೆ ಸಮಸ್ಯೆ ತಲೆದೋರಿದೆ. ಇದರ ಜೊತೆ ಜೊತೆಗೆ ರಾಜ್ಯದ ಕೆಲ ಜಿಲ್ಲೆಗಳು ಬರ ಪೀಡಿತವಾಗಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿವಿಧ ಸಮಿತಿಗಳನ್ನು ರಚಿಸುವ ಸಲುವಾಗಿ ಕಾರ್ಯ ಪ್ರವೃತ್ತರಾಗಿದ್ದು, ಆಯ್ಕೆಗೆ ತಮ್ಮನ್ನು ಪರಿಗಣಿಸಲಿ ಎಂಬ ಉದ್ದೇಶದಿಂದ ಹಲವು ನಾಯಕರು ತಮ್ಮ ವ್ಯಾಪ್ತಿಯಲ್ಲಿ ತೀವ್ರ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ, ಮಾಜಿ ಸಚಿವರಿಗೆ ಹಾಲಿ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿವಿಧ ಜವಾಬ್ದಾರಿಗಳನ್ನು ವಹಿಸಿದ್ದು, ಇದನ್ನ ನಿಭಾಯಿಸುವ ಸಲುವಾಗಿ ಪಕ್ಷದ ಕೆಲ ನಾಯಕರು ಬೇರೆಡೆ ತೆರಳಿದ್ದಾರೆ.

ಪ್ರದೇಶ ಕಾಂಗ್ರೆಸ್ ಸಮಿತಿ ವಿವಿಧ ಸಮಿತಿಗಳ ರಚನೆ ಹಾಗೂ ಯುವಕರಿಗೆ ಆದ್ಯತೆ ನೀಡಲು ಮುಂದಾಗಿರುವ ಹಿನ್ನೆಲೆ ಕೆಪಿಸಿಸಿ ಕಚೇರಿಯತ್ತ ಹಿರಿಯರು ಹಾಗೂ ವಿಸರ್ಜಿತ ಸಮಿತಿಗಳಲ್ಲಿ ಭೇಟಿ ನೀಡುತ್ತಿಲ್ಲ.

ಪ್ರಮುಖವಾಗಿ ಶಾಸಕರು ತಮ್ಮ ಕ್ಷೇತ್ರಗಳಿಗೆ ಸೀಮಿತವಾಗುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ನಾಯಕರು ಬೆಂಗಳೂರು ಕೇಂದ್ರ ಭಾಗದಲ್ಲಿ ಗೋಚರಿಸುತ್ತಿಲ್ಲ. ಈಗಾಗಲೇ ಕ್ಷೇತ್ರದಲ್ಲಿ ಸೋಲುಂಡಿರುವ ಸಚಿವರೂ ಆಗಿದ್ದ, ಹಲವು ಶಾಸಕರು ಹಾಗೂ ಮುಂಬರುವ ಚುನಾವಣೆಯಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆ ಹೊಂದಿರುವ ಮಾಜಿ ಶಾಸಕರು ಕ್ಷೇತ್ರ ಬಿಟ್ಟು ಆಚೆ ಬರುತ್ತಿಲ್ಲ.

ಅಧಿವೇಶನಕ್ಕೆ ಸಿದ್ಧತೆ:

ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನಂತರ ಬಸವರಾಜ್ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದು, ನೂತನ ಸಚಿವ ಸಂಪುಟ ರಚನೆ ಕಸರತ್ತಿನಲ್ಲಿ ತೊಡಗಿದ್ದಾರೆ. ಸಂಪುಟ ರಚನೆ ಬಳಿಕ ವಿಧಾನಮಂಡಲ ಅಧಿವೇಶನ ಕರೆಯುವ ಅನಿವಾರ್ಯತೆ ಇದೆ.

ಈಗಾಗಲೇ ಅಧಿವೇಶನ ವಿಳಂಬವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಅಧಿವೇಶನ ಕರೆದರೆ ಅಲ್ಲಿ ಪಾಲ್ಗೊಂಡು ಕ್ಷೇತ್ರದ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಬಹುತೇಕ ನಾಯಕರು ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸಿ ಮತದಾರರ ಸಮಸ್ಯೆ ಆಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಒಟ್ಟಾರೆ ವಿವಿಧ ಕಾರಣಗಳಿಂದ ಕಾಂಗ್ರೆಸ್ ನಾಯಕರು ರಾಜ್ಯ ರಾಜಧಾನಿ ಎಂದು ದೂರ ಉಳಿದಿದ್ದು ಕಾಂಗ್ರೆಸ್ ಪಕ್ಷದ ಚಟುವಟಿಕೆ ತೀರಾ ನೀರಸ ಎಂಬಂತೆ ಗೋಚರಿಸುತ್ತಿದೆ.

ಇದನ್ನೂ ಓದಿ: ಪ್ರವಾಹ ಹಾನಿ.. ವಿಧಾನಸಭೆಯಲ್ಲಿ ಸರ್ಕಾರ ತರಾಟೆ ತೆಗೆದುಕೊಳ್ಳುವೆ: ಸಿದ್ಧರಾಮಯ್ಯ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.