ETV Bharat / city

ರಾಜಸ್ಥಾನ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಖಂಡನೆ: ರಾಜ್ಯ ಕೈ ನಾಯಕರ ಗವರ್ನರ್​ ಭೇಟಿ ರದ್ದು - ಕಾಂಗ್ರೆಸ್​ ನಾಯಕರ ರಾಜ್ಯಪಾಲರ ಭೇಟಿ ರದ್ದು

ರಾಜಸ್ಥಾನ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ರಾಜಭವನ ಮುಂಭಾಗ ಪ್ರತಿಭಟನೆ ನಡೆಸಲು ಮುಂದಾಗಿ ಬಂಧನಕ್ಕೊಳಗಾಗಿದ್ದ ಕಾಂಗ್ರೆಸ್​ ನಾಯಕರು ರಾಜ್ಯಪಾಲರ ಭೇಟಿಗೆ ಮನವಿಮಾಡಿ ಸಮಯ ನಿಗದಿ ಪಡಿಸಿದ್ದರು. ಆದ್ರೆ ಸಮಯ ಮೀರಿದ ಕಾರಣ ಈ ಭೇಟಿ ರದ್ದಾಗಿದೆ.

congress-leaders-governor-meeting-cancel
ಕಾಂಗ್ರೆಸ್ ನಾಯಕರ ರಾಜ್ಯಪಾಲರ ಭೇಟಿ ರದ್ದು
author img

By

Published : Jul 27, 2020, 7:53 PM IST

Updated : Jul 27, 2020, 8:07 PM IST

ಬೆಂಗಳೂರು: ಬಿಜೆಪಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿ ಬಂಧನಕ್ಕೊಳಗಾಗಿದ್ದ ಕೈ ನಾಯಕರ ಬಿಡುಗಡೆ ವಿಳಂಬವಾದ ಕಾರಣ ಸಂಜೆ 4 ಗಂಟೆಗೆ ನಿಗದಿಯಾಗಿದ್ದ ರಾಜ್ಯಪಾಲರ ಬೇಟಿ ರದ್ದಾಗಿದೆ.

4 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಪೊಲೀಸರು ಬಿಡುಗಡೆ ಮಾಡುವುದು ವಿಳಂಬವಾದ ಹಿನ್ನೆಲೆ ಕೈ ನಾಯಕರು ರಾಜಭವನಕ್ಕೆ ಆಗಮಿಸಲು ಸಾಧ್ಯವಾಗಲಿಲ್ಲ. ನಿಗದಿತ ಸಮಯಕ್ಕೆ ಬರಲು ಸಾಧ್ಯವಾಗದ ಹಿನ್ನೆಲೆ ಕಾಂಗ್ರೆಸ್ ನಾಯಕರು ಭೇಟಿಯನ್ನು ರದ್ದುಪಡಿಸಿದ್ದಾರೆ.

ರಾಜಸ್ಥಾನ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಖಂಡನೆ

ಬಂಧನಕ್ಕೂ ಮುನ್ನ ಮಾತನಾಡಿದ ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವ ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ ನೀತಿ ಅನುಸರಿಸುತ್ತಿದೆ. ಈ ಷಡ್ಯಂತ್ರದಲ್ಲಿ ರಾಜಸ್ಥಾನದ ರಾಜ್ಯಪಾಲರೂ ಭಾಗಿಯಾಗಿದ್ದಾರೆ. ಸಚಿವ ಸಂಪುಟದ ತೀರ್ಮಾನದಂತೆ ನಡೆದುಕೊಳ್ಳುವುದು ರಾಜ್ಯಪಾಲರ ಕರ್ತವ್ಯ. ಆದರೆ, ಅವರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ರಕ್ಷಿಸಿ ಎಂದು ಕಾಂಗ್ರೆಸ್ ಪಕ್ಷ ಇಂದು ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದೆ. ನಾವು ಯಾವುದೇ ಹಿಂಸಾತ್ಮಕವಾದ ಹೋರಾಟ ಮಾಡುತ್ತಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲಿ ಶಾಂತಿಯುವಾಗಿ ಅನ್ಯಾಯ ಪ್ರತಿಭಟಿಸಲು ಸಂವಿಧಾನ ಹಕ್ಕು ಕೊಟ್ಟಿದೆ.

ಇದನ್ನು ಓಡಿ-ರಾಜಭವನಕ್ಕೆ ತೆರಳಲು ಯತ್ನಿಸಿದ ಕಾಂಗ್ರೆಸ್ ನಾಯಕರನ್ನ ಬಂಧಿಸಿದ ಪೊಲೀಸರು

ಸರ್ಕಾರ ಚುನಾಯಿಸುವವರು ಮತದಾರರು. ಆ ಪರಮಾಧಿಕಾರ ಜನರಿಗೆ ಇದೆಯೇ ಹೊರತು ರಾಷ್ಟ್ರಪತಿ, ರಾಜ್ಯಪಾಲರು, ಪ್ರಧಾನಿಯವರು ಸೇರಿದಂತೆ ಯಾರಿಗೂ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ. ಮೋದಿಯವರು ಪ್ರಧಾನಿಯಾದ ಬಳಿಕ ಸಂವಿಧಾನಕ್ಕೆ ಅಗೌರವ ತೋರುತ್ತಿರುವುದನ್ನು ನಾವು ಎಲ್ಲೆಡೆ ಕಾಣುತ್ತಿದ್ದೇವೆ. ಸಂವಿಧಾನದ ಚೌಕಟ್ಟಿನೊಳಗೆ ಸರ್ಕಾರಗಳು ನಡೆಯಬೇಕು. ಸಂವಿಧಾನ ಎಲ್ಲರಿಗೂ ಹಕ್ಕು ಮತ್ತು ಕರ್ತವ್ಯಗಳನ್ನು ಕೊಟ್ಟಿದೆ ಎಂದರು.

ಬಿಜೆಪಿಯವರು ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸಿ ನಮ್ಮ ಶಾಸಕರನ್ನು ಕುದುರೆ ವ್ಯಾಪಾರದ ಮೂಲಕ ಖರೀದಿ ಮಾಡಿ ಕೋಟ್ಯಂತರ ರೂ. ಖರ್ಚು ಮಾಡುತ್ತಾರೆ. ಕರ್ನಾಟಕದಲ್ಲಿಯೂ ಅದೇ ರೀತಿ ಆಯಿತು. ಯಡಿಯೂರಪ್ಪ ಅವರು ಜನರಿಂದ ಚುನಾಯಿತರಾದ ಮುಖ್ಯಮಂತ್ರಿ ಅಲ್ಲ. ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಖರೀದಿ ಮಾಡಿ, ಅವರಿಗೆ ಹಣದಾಸೆ ತೋರಿಸಿ ಸಿಎಂ ಆಗಿದ್ದಾರೆ.

ಇಡೀ ದೇಶದಲ್ಲಿ ಆಪರೇಷನ್ ಕಮಲ ಚಾಲ್ತಿಗೆ ಬಂದಿದ್ದರೆ ಅದು ಯಡಿಯೂರಪ್ಪ ಅವರಿಂದ. ಆಪರೇಷನ್ ಕಮಲ, ಆಪರೇಷನ್ ತೆನೆ ಹೊತ್ತ ಮಹಿಳೆ ಎಂಬುದೇ ಇರಲಿಲ್ಲ. 2008ರಲ್ಲಿ ಆಪರೇಷನ್ ಕಮಲ ಆರಂಭಿಸಿದ್ದೇ ಯಡಿಯೂರಪ್ಪ. ಇದೀಗ ಅದೇ ಆಪರೇಷನ್ ಮೂಲಕ ಅವರು ಮತ್ತೆ ಹಿಂಬಾಗಿಲಿನಿಂದ ಸರ್ಕಾರ ರಚನೆ ಮಾಡಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೊಲೆ, ಸಂವಿಧಾನಕ್ಕೆ ಅಗೌರವ, ಸಂವಿಧಾನಬದ್ಧ ಸಂಸ್ಥೆಗಳಿಗೆ ಅಗೌರವ ತೋರಿಸುವ ಪ್ರಧಾನಿಯವರಿಗೆ ಧಿಕ್ಕಾರ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಕಮಲ ವಿರುದ್ಧ ಡಿಕೆಶಿ ಆಕ್ರೋಶ

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ, ಭಾರತ ದೇಶ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರ. ಬಿಜೆಪಿ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದೆ. ಚುನಾಯಿತ ಸರ್ಕಾರಗಳನ್ನು ವಾಮ ಮಾರ್ಗಗಳ ಮ‌ೂಲಕ ಕೆಳಗೆ ಇಳಿಸುತ್ತಿದೆ. ಆಪರೇಷನ್ ಕಮಲ ಎಂಬ ಕೆಟ್ಟ ಪದ್ಧತಿಯನ್ನು ಮುಂದುವಸುತ್ತಿದೆ. ದೇಶದ ಬೇರೆ ಬೇರೆ ರಾಜ್ಯಗಳ ಕುದುರೆ ವ್ಯಾಪಾರ ಮುಂದುವರೆದಿದೆ. ಹೀಗಾಗಿ ಕಾಂಗ್ರೆಸ್ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು ಹೋರಾಟ ನಡೆಸುತ್ತಿದೆ ಎಂದು ಹೇಳಿದರು.

Last Updated : Jul 27, 2020, 8:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.