ETV Bharat / city

ಪರಿಷತ್ ಫೈಟ್​.. ಬಿಡುಗಡೆಯಾಗದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ.. ಆಕಾಂಕ್ಷಿಗಳಲ್ಲಿ ಹೆಚ್ಚಿದ ದುಗುಡ..

ವಿಧಾನ ಪರಿಷತ್ ಚುನಾವಣೆ(Legislative council election) ನಾಮಪತ್ರ ಸಲ್ಲಿಕೆಗೆ ಇನ್ನೆರಡು ದಿನಗಳು ಮಾತ್ರ ಬಾಕಿ ಇವೆ. ಆದರೆ, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ(congress candidates list) ಈವರೆಗೂ ಪ್ರಕಟವಾಗಿಲ್ಲ..

congress candidates list has not released
ಈವರೆಗೆ ಬಿಡುಗಡೆಯಾಗದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
author img

By

Published : Nov 21, 2021, 8:17 PM IST

ಬೆಂಗಳೂರು : ವಿಧಾನ ಪರಿಷತ್ ಚುನಾವಣೆ(Legislative council election) ನಾಮಪತ್ರ ಸಲ್ಲಿಕೆಗೆ ಇನ್ನೆರಡು ದಿನಗಳು ಮಾತ್ರ ಬಾಕಿ ಇವೆ. ಆದರೆ, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ(congress candidates list) ಈವರೆಗೂ ಪ್ರಕಟವಾಗಿಲ್ಲ.

ಬಿಜೆಪಿ ತಮ್ಮ 20 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿ ಎರಡು ದಿನ ಆಗಿದೆ. ಆದರೆ, ಕಾಂಗ್ರೆಸ್ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ನಿನ್ನೆ ರಾತ್ರಿಯೇ ಕಾಂಗ್ರೆಸ್​​ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈವರೆಗೂ ಪಟ್ಟಿ ಪ್ರಕಟವಾಗಿಲ್ಲ.

ಈ ಪಟ್ಟಿಗೆ ಸಹಿ ಹಾಕಿಸಿಕೊಂಡು ಬರಲು ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಪಸಾಗಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ, ಅಂತಿಮ ಪಟ್ಟಿ ಮಾತ್ರ ಹೈಕಮಾಂಡ್​ನಿಂದ ಹೊರ ಬೀಳುತ್ತಿಲ್ಲ.

ಆರೇಳು ಹಾಲಿ ಸದಸ್ಯರು ಸ್ಪರ್ಧಿಸುತ್ತಿಲ್ಲವಾದ್ದರಿಂದ ಅವರ ಬದಲಿಗೆ ಘೋಷಿತವಾಗುವ ಹೆಸರಿನ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಕುತೂಹಲ ಮನೆ ಮಾಡಿದೆ. ಅಲ್ಲದೇ ತಮ್ಮ ಮತದಾರರನ್ನು ಸಂಪರ್ಕಿಸಿ ಮನವಿ ಮಾಡಲು ಅಧಿಕೃತ ಪಟ್ಟಿ ಪ್ರಕಟವಾದ ನಂತರವೇ ಅವಕಾಶ ಒದಗಿ ಬರಲಿದೆ ಎಂದು ನಂಬಿರುವ ಆಕಾಂಕ್ಷಿಗಳಿಗೆ ಸಮಯ ಹೋದಂತೆ ಆತಂಕ, ದುಗುಡ ಶುರುವಾಗಿದೆ.

ವಿಳಂಬದ ಹಿಂದೆ ಪಟ್ಟಿ ಪರಿಷ್ಕರಣೆ ಕಾರಣ ಇರಬಹುದಾ ಎನ್ನುವ ಆತಂಕ ಅಭ್ಯರ್ಥಿಗಳಾಗುವ ಭರವಸೆ ಪಡೆದಿರುವ ಕಾಂಗ್ರೆಸ್ ನಾಯಕರನ್ನು ಕಾಡಲಾರಂಭಿಸಿದೆ. ಕಾಂಗ್ರೆಸ್ ಪಕ್ಷದಲ್ಲಿಯೂ ಬಣ ರಾಜಕಾರಣಕ್ಕೆ ಬರವಿಲ್ಲ. ಎರಡು ಪ್ರಮುಖ ಬಣಗಳ ಜತೆ ಇನ್ನಷ್ಟು ಉಪ ಬಣಗಳು ನಿರ್ಮಾಣಗೊಂಡಿವೆ. ಇದರಿಂದ ಯಾರ ಪ್ರಭಾವ ಎಷ್ಟು ಇದೆ ಎನ್ನುವುದನ್ನು ಅರಿಯಲಾಗದೇ ಹಲವು ಅಭ್ಯರ್ಥಿಗಳು ಗೊಂದಲಕ್ಕೆ ಒಳಗಾಗಿದ್ದಾರೆ.

ಡಿಕೆಶಿ ಹಿಡಿದುಕೊಂಡು ಹೋಗಿರುವ ಪಟ್ಟಿಗೆ ಹೈಕಮಾಂಡ್ ಸಮ್ಮತಿ ನೀಡಿದ್ದರೆ ನಿನ್ನೆಯೇ ಪಟ್ಟಿ ಹೊರ ಬೀಳಬೇಕಿತ್ತು. ಆದರೆ, ಈವರೆಗೂ ಪಟ್ಟಿ ಹೊರ ಬರದಿರುವುದನ್ನು ಗಮನಿಸಿ ಕೆಲವರು ಒತ್ತಡಕ್ಕೆ ಒಳಗಾಗಿದ್ದಾರೆ ಎಂಬ ಮಾಹಿತಿ ಇದೆ.

ಎಂ. ನಾರಾಯಣಸ್ವಾಮಿ, ಪ್ರತಾಪ್ ಚಂದ್ರಶೆಟ್ಟಿ, ಬಸವರಾಜ್ ಪಾಟೀಲ್ ಇಟಗಿ, ವಿಜಯ್ ಸಿಂಗ್, ರಘು ಆಚಾರ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಶ್ರೀನಿವಾಸ್ ಮಾನೆ ಹಾನಗಲ್ ಉಪಚುನಾವಣೆ ಗೆದ್ದು ವಿಧಾನಸಭೆ ಪ್ರವೇಶಿಸಿದ್ದಾರೆ.

ಇವರೆಲ್ಲರ ಜತೆ ಪ್ರತಿಪಕ್ಷ ನಾಯಕರಾಗಿರುವ ಎಸ್.ಆರ್. ಪಾಟೀಲ್, ಕೆ.ಸಿ. ಕೊಂಡಯ್ಯ ಸಹ ಸ್ಪರ್ಧೆಗಿಳಿಯುವ ಆಸಕ್ತಿ ತೋರುತ್ತಿಲ್ಲ ಎಂಬ ಮಾತಿದೆ. ಈ ಎಲ್ಲಾ ಸ್ಥಾನಗಳಿಗೆ ಬೇರೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಗುರುತಿಸಿ, ಹೈಕಮಾಂಡ್ ಸಮ್ಮತಿಗೆ ಪಟ್ಟಿ ಕಳಿಸಿದೆ.

ಈ ಬಾರಿಯ ಚುನಾವಣಾ ಪ್ರಚಾರಕ್ಕೂ ಹೆಚ್ಚು ಕಾಲಾವಕಾಶ ಇಲ್ಲ. ರಾಜ್ಯ ನಾಯಕರು ಅಭ್ಯರ್ಥಿಗಳ ಪರ ಕ್ಯಾಂಪೇನ್ ಮಾಡಲು ತೆರಳುತ್ತಿಲ್ಲ. ಅಭ್ಯರ್ಥಿಗಳಿಗೆ ಇವೆಲ್ಲ ದುಗುಡಗಳ ನಡುವೆ ಪಟ್ಟಿ ಪ್ರಕಟವಾಗದಿರುವುದು ಮತ್ತಷ್ಟು ಗೊಂದಲಕ್ಕೀಡು ಮಾಡಿದೆ.

ಇದನ್ನೂ ಓದಿ: ವಿಧಾನ ಪರಿಷತ್ ‌ಚುನಾವಣೆ ಬಳಿಕ ರಾಜ್ಯ ಪ್ರವಾಸ : ಮಾಜಿ ಸಿಎಂ ಬಿ ಎಸ್‌ ಯಡಿಯೂರಪ್ಪ ಘೋಷಣೆ

ವಿಧಾನ ಪರಿಷತ್ 25 ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 14ರಂದು ಫಲಿತಾಂಶ ಪ್ರಕಟವಾಗಿಲಿದೆ. ನವೆಂಬರ್ 23ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ನವೆಂಬರ್ 24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನವೆಂಬರ್ 26 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಡಿಸೆಂಬರ್ 10 ಶುಕ್ರವಾರ ಬೆಳಗ್ಗೆ 8 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.