ETV Bharat / city

ಇಂದು ರಾತ್ರಿಯಿಂದಲೇ ಅಹೋರಾತ್ರಿ ಧರಣಿ: ಸಿದ್ದರಾಮಯ್ಯ ಘೋಷಣೆ - ಸಚಿವ ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಪ್ರತಿಭಟನೆ

ಇಂದಿನಿಂದಲೇ ಉಭಯ ಸದನಗಳಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ. ಸಚಿವ ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಪಮಾನಿಸಿದ್ದಾರೆ. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಿಯೇ ತೀರುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಿದ್ದರಾಮಯ್ಯ ಘೋಷಣೆ
ಸಿದ್ದರಾಮಯ್ಯ ಘೋಷಣೆ
author img

By

Published : Feb 17, 2022, 1:35 PM IST

Updated : Feb 17, 2022, 1:41 PM IST

ಬೆಂಗಳೂರು: ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಇಂದಿನಿಂದಲೇ ಉಭಯ ಸದನಗಳಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾವು ಧರಣಿ ಮುಂದುವರಿಸಿದ್ದೇವೆ. ಈಶ್ವರಪ್ಪರನ್ನು ಅಮಾನತು ಮಾಡುವಂತೆ ಒತ್ತಾಯಿಸಿದ್ದೇವೆ. ಅವರು ನಮ್ಮ ಸಂವಿಧಾನಕ್ಕೆ ಅಗೌರವ ತೋರಿದ್ದಾರೆ. ರಾಜ್ಯಪಾಲರು ಡಿಸ್ಮಿಸ್ ಮಾಡೋಕೆ ಹೇಳಬೇಕಿತ್ತು. ಸಿಎಂ ಕೂಡ ಮಾಡಬೇಕಿತ್ತು. ಇದರ ಅರ್ಥ ಆರ್​ಎಸ್​ಎಸ್ ಮೂಲಕ ಮಾಡಿಸಿದ್ದಾರೆ. ಈಶ್ವರಪ್ಪ ಮೂಲಕ ಹೇಳಿಸಿದ್ದಾರೆ. ರಾಷ್ಟ್ರಧ್ವಜ ನಮ್ಮ ಸ್ವಾತಂತ್ರ್ಯದ ಸಂಕೇತ. ಧ್ವಜ ಹಿಡಿದಾಗ ಹೋರಾಟದ ಕಿಚ್ಚು ಬರುತ್ತೆ. ಯಾರೇ ಧ್ವಜದ ಬಗ್ಗೆ ಅಪಮಾನ ಮಾಡಿದ್ರೂ ದೇಶದ್ರೋಹದ ಕೇಸ್ ದಾಖಲಿಸಬೇಕು. ಅವರ ಮೇಲೆ ಕೇಸ್ ದಾಖಲಿಸಿಲ್ಲ. ನಡ್ಡಾ ತ್ರಿವರ್ಣದ ಧ್ವಜದ ಮೇಲೆ ಕೇಸರಿ ಬಾವುಟ ಹಾಕಿದ್ದಾರೆ. ಬಿಜೆಪಿಯವರು ರಾಷ್ಟ್ರಧ್ವಜಕ್ಕೆ ಗೌರವ ಕೊಡ್ತಿಲ್ಲ ಎಂದು ದೂರಿದರು.

ಇಂದು ರಾತ್ರಿಯಿಂದಲೇ ಅಹೋರಾತ್ರಿ ಧರಣಿ: ಸಿದ್ದರಾಮಯ್ಯ ಘೋಷಣೆ

ಮಧ್ಯಪ್ರದೇಶದ ಕಚೇರಿಯಲ್ಲಿ ರಾಷ್ಟ್ರ ಧ್ವಜದ ಮೇಲೆ ಬಿಜೆಪಿ ಬಾವುಟವನ್ನು ಹಾರಿಸ್ತಾರೆ. ಹಾಗಾಗಿ ನಾವು ಪ್ರತಿಭಟನೆ ನಡೆಸಿದ್ದೇವೆ. ಈಶ್ವರಪ್ಪ ಮಾಡಿರೋದು ಅಕ್ಷಮ್ಯ ಅಪರಾಧ. ಯಾವಾಗಲೂ ರಾಷ್ಟ್ರ ಧ್ವಜ ಹಾರಾಡಬೇಕು. ಒಬ್ಬ ಸಚಿವರಾಗಿ ಈಶ್ವರಪ್ಪ ಹೇಳುವುದು ಅಪರಾಧ. ಬಿಜೆಪಿ ರಾಷ್ಟ್ರಧ್ವಜಕ್ಕೆ ಗೌರವ ಕೊಡಲ್ಲ. ಹೀಗಾಗಿಯೇ ಆಹೋರಾತ್ರಿ ಧರಣಿ ಮಾಡ್ತೇವೆ ಎಂದರು.

ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಹಗಲು, ರಾತ್ರಿ ಧರಣಿ ಮಾಡ್ತೇವೆ. ಅವರು ಏನಾದ್ರೂ ಮಾಡಿಕೊಳ್ಳಲಿ. ರಾಷ್ಟ್ರಧ್ವಜಕ್ಕೆ ಅವರು ಅಪಮಾನಿಸಿದ್ದಾರೆ. ತಾರ್ಕಿಕ ಅಂತ್ಯ ಕಾಣಿಸಿಯೇ ತೀರ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸ್ಟೆಮ್ ಸೆಲ್ ಕಸಿಯಿಂದ ಏಡ್ಸ್​ ರೋಗ ಗುಣ: ವಿಶ್ವದಲ್ಲಿ ಮಹಿಳೆಯ ಮೊದಲ ಪ್ರಯೋಗ ಯಶಸ್ವಿ

Last Updated : Feb 17, 2022, 1:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.