ETV Bharat / city

ಏ.14ಕ್ಕೆ ಲಾಕ್​​​​ಡೌನ್ ಮುಗಿಯುವ ವಿಶ್ವಾಸ ಇದೆ: ಸಂಸದೆ ಶೋಭಾ ಕಾರಂದ್ಲಾಜೆ - Confidence that the lockdown ends at A14

ಆರೋಗ್ಯ ಇಲಾಖೆಯ ಮಾಹಿತಿ ಪಡೆಯಲಿರುವ ಪ್ರಧಾನಿ ಮೋದಿ ಅವರು ಸರ್ವ ಪಕ್ಷಗಳ ಸಭೆ ಕರೆದು ಚರ್ಚೆ ಮಾಡಲಿದ್ದಾರೆ. ನಂತರ ಲಾಕ್‌ಡೌನ್ ಮುಂದುವರೆಸುವ ಬಗ್ಗೆ ತೀರ್ಮಾನಿಸಲಿದ್ದಾರೆ ಎಂದು ಸಂಸದೆ ಹೇಳಿದರು.

ಸಂಸದೆ ಶೋಭಾ ಕಾರಂದ್ಲಾಜೆ
ಸಂಸದೆ ಶೋಭಾ ಕಾರಂದ್ಲಾಜೆ
author img

By

Published : Apr 9, 2020, 10:19 PM IST

ನೆಲಮಂಗಲ: ನಿರ್ಗತಿಕರು, ಕೂಲಿ ಕಾರ್ಮಿಕರಿಗೆ ಆಹಾರ ಧಾನ್ಯ ವಿತರಿಸಲು ನೆಲಮಂಗಲ ನಗರದ ಬಸವಣ್ಣದೇವರ ಮಠಕ್ಕೆ ಬಂದಿದ್ದ ಸಂಸದೆ ಶೋಭಾ ಕಾರಂದ್ಲಾಜೆ ಅವರು ಏಪ್ರಿಲ್ 14ರಂದು ಲಾಕ್​​​ಡೌನ್ ಮುಗಿಯುವ ವಿಶ್ವಾಸವಿದೆ ಎಂದರು.

ದೆಹಲಿ ನಿಜಾಮುದ್ಧೀನ್​​ ಪ್ರದೇಶದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಬಂದವರಿಂದಲೇ ಕೊರೊನಾ ವೈರಸ್ ಶೇ.40 ರಷ್ಟು ಹೆಚ್ಚಳ ಕಂಡಿದೆ. ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ವೈರಸ್ ಹರಡಲು ಸಾಧ್ಯವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದ ವಿವಿಧ ಭಾಗಗಳಿಂದಲೂ ಸಮಾವೇಶಕ್ಕೆ ಹೋಗಿದ್ದರು. ಅಲ್ಲಿಗೆ ಹೋಗಿ ಬಂದವರು ಸಾವಿರಾರು ಮಂದಿಗೆ ವೈರಸ್ ಹರಡಿಸಿದ್ದಾರೆ ಎನ್ನುವ ಮಾಹಿತಿ ಇದೆ. ಒಂದು ವೇಳೆ ಆ ಸಮಾವೇಶ ಜರುಗದೇ ಇದ್ದಿದ್ದರೇ ಏ.14ರ ಹೊತ್ತಿಗೆ ಭಾರತದಲ್ಲಿ ಸಂಪೂರ್ಣವಾಗಿ ಕೊರೊನಾ ಮಾಯವಾಗುತ್ತಿತ್ತು ಎಂದು ಹೇಳಿದರು.

ವಿವಿಧ ಯೋಜನೆಗಳ ಅನುದಾನವನ್ನು ಕೊರೊನಾ ಮುಕ್ತಿಗೆ ಬಳಸಿಕೊಳ್ಳಲಿ ಎನ್ನುವ ಡಿಕೆಶಿ ಹೇಳಿಕೆಯನ್ನ ಸ್ವಾಗತಿಸಿದ ಶೋಭಾ ಕರಂದ್ಲಾಜೆ, ಡಿ.ಕೆ.ಶಿವಕುಮಾರ್ ಹೇಳಿಕೆಗೆ ನಮ್ಮ ಸಹಮತವಿದೆ. ಅಭಿವೃದ್ಧಿ ಕಾರ್ಯಗಳನ್ನ ಎರಡು ವರ್ಷ ಆದಮೇಲೂ ಮಾಡಬಹುದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಜನರ ಪ್ರಾಣ ಉಳಿಸುವುದು ಮುಖ್ಯ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.