ETV Bharat / city

ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ಭ್ರಷ್ಟಾಚಾರ ಆರೋಪ: ಗೌರವ್ ಗುಪ್ತ ಸ್ಪಷ್ಟನೆ - BBMP Chief Commissioner gaurav gupta

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ವಿರುದ್ಧ ಭ್ರಷ್ಟಾಚಾರ ಆರೋಪದಡಿ ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್, ಎಸಿಬಿ ಹಾಗೂ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದ್ದಾರೆ.

complaint against BBMP Chief Commissioner
ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ದೂರು
author img

By

Published : Sep 29, 2021, 7:05 AM IST

ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಪಾಲಿಕೆಯ ಸಾವಿರಾರು ಮಂದಿ ಗುತ್ತಿಗೆದಾರರಿಗೆ ಜೇಷ್ಠತೆ ನಿಯಮದಂತೆ ಹಣ ಬಿಡುಗಡೆ ಮಾಡದೇ ಪಾಲಿಕೆಗೆ ಬರುತ್ತಿರುವ ಹಣವನ್ನು ನೇರವಾಗಿ ಸ್ಪೆಷಲ್ ರಿಲೀಸ್ ಅಥವಾ ಕಮಿಷನರ್​​ ಕೆಟಗೆರಿ ಹೆಸರಿನಲ್ಲಿ ಶೇ.06 ರಷ್ಟು ಕಮಿಷನ್ ಪಡೆದು ಹಣ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್, ಎಸಿಬಿ ಹಾಗೂ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದ್ದಾರೆ.

ಇದಕ್ಕೆ ಸ್ಪಷ್ಟನೆ ನೀಡಿರುವ ಮುಖ್ಯ ಆಯುಕ್ತರು, ಬಿಬಿಎಂಪಿಯಲ್ಲಿ ಆರು ತಿಂಗಳಲ್ಲಿ, ಎಪ್ರಿಲ್ -2021 ನಿಂದ ಈವರೆಗೂ 620.52 ಕೋಟಿ ರೂ.ಗಳನ್ನು ಸಾಮಾನ್ಯ ಜೇಷ್ಠತೆಗೆ ಅನುಗುಣವಾಗಿ ಬಿಡುಗಡೆ ಮಾಡಲಾಗಿದೆ. ಅಲ್ಲದೇ ದಸರಾ ಹಬ್ಬಕ್ಕೂ ಮೊದಲು ಇದೇ ವಾರದಲ್ಲಿ 289 ಕೋಟಿ ರೂ. ಸೇರಿ, ಒಟ್ಟು ಏಪ್ರಿಲ್ ನಿಂದ ಸೆಪ್ಟೆಂಬರ್ ಅಂತ್ಯದೊಳಗೆ 909.52 ಕೋಟಿ ರೂ.ಗಳನ್ನು ಸಾಮಾನ್ಯ ಜೇಷ್ಠತೆಗೆ ಅನುಗುಣವಾಗಿ ಬಿಡುಗಡೆ ಮಾಡಲಾಗುತ್ತದೆ.

complaint against BBMP Chief Commissioner
ಬಿಬಿಎಂಪಿ ಮುಖ್ಯ ಆಯುಕ್ತರ ವಿರುದ್ಧ ದೂರು

ಬಿಬಿಎಂಪಿ ವಿಶೇಷ ಪ್ರಕರಣಗಳಲ್ಲಿ ಆದ್ಯತೆ ಮೇರೆಗೆ ಬಿಲ್ ಪಾವತಿ‌ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆರೋಗ್ಯ, ಮದುವೆ, ಸಾವು, ಮತ್ತು ನಿರಂತರವಾಗಿ‌ ನಡೆಯುವ ಕೆಲವು ಮುಖ್ಯ ನಿರ್ವಹಣೆ ಕಾಮಗಾರಿಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಅಹವಾಲು ಪಡೆದು, ಪರಿಶೀಲಿಸಿ ಆದ್ಯತೆ ಮೇರೆಗೇ ಬಿಲ್ ಪಾವತಿಸಲಾಗಿದೆ.
ಅಲ್ಲದೇ ಕೋವಿಡ್ ಸಂದರ್ಭದಲ್ಲಿ ಚಿತಾಗಾರ, ಆಸ್ಪತ್ರೆ, ಇತರ ಈ ಸಂಬಂಧಿತ ಕಾಮಗಾರಿಗಳಿಗೆ ಆದ್ಯತೆ ಮೇರೆಗೆ ಬಿಲ್ ಪಾವತಿಸಿದ್ದು, ಎನ್.ಆರ್ ರಮೇಶ್ ನೀಡಿರುವ ದೂರು ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಆದರೆ, ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಒಬ್ಬನೇ ಗುತ್ತಿಗೆದಾರರಿಗೆ 15ಕ್ಕೂ ಹೆಚ್ಚು ಬಾರಿ ಹಣವನ್ನು ಬಿಡುಗಡೆ ಮಾಡಿರುವ ಉದಾಹರಣೆಗಳು ದಾಖಲೆಗಳ ಮೂಲಕ ಸಿಗುತ್ತವೆ ಎಂದು ರಮೇಶ್​​ ಆರೋಪಿಸಿದ್ದಾರೆ.

ಇದನ್ನೂ ಓದಿ: ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ: ಸಚಿವ ಶಿವರಾಮ ಹೆಬ್ಬಾರ್​

ಉದಾಹರಣೆಗೆ, ಎನ್.ಆರ್. ಸತೀಶ್ ಅಥವಾ ನಾಗಸಂದ್ರ ರಾಮ ರಾವ್ ಸತೀಶ್, ಎನ್. ಎಂ. ಕೃಷ್ಣಮೂರ್ತಿ, ಅರುಣಾ ಗೋಪಾಲ ರೆಡ್ಡಿ, ಸುಬ್ಬಯ್ಯ ಹೀಗೆ ಹಲವಾರು ಮಂದಿ ಹಿರಿತನವಿಲ್ಲದ ಗುತ್ತಿಗೆದಾರರಿಗೆ ನಿಯಮ ಬಾಹಿರವಾಗಿ ಜೇಷ್ಠತೆ ನಿಯಮಗಳನ್ನು ಗಾಳಿಗೆ ತೂರಿ ಸುಮಾರು 69 ಕೋಟಿ ರೂಪಾಯಿಗಳಷ್ಟು ಹಣವನ್ನು ಕೇವಲ ಕಳೆದ ಮೂರೂವರೆ ತಿಂಗಳ ಅವಧಿಯಲ್ಲಿ ಬಿಡುಗಡೆ ಮಾಡಿರುತ್ತಾರೆ.

ಈ ಮೂಲಕ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರವನ್ನು ಕಿಕ್ ಬ್ಯಾಕ್ ಪಡೆಯುವುದರ ಮೂಲಕ ಮಾಡಿರುವುದು ಅತ್ಯಂತ ಸ್ಪಷ್ಟವಾಗಿರುವ ಹಿನ್ನೆಲೆ, ಮುಖ್ಯ ಆಯುಕ್ತ ಗೌರವ್ ಗುಪ್ತರವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಮತ್ತು ಬಿಎಮ್​ಟಿಎಫ್ ಅಧೀಕ್ಷಕರ ಕಚೇರಿಯಲ್ಲಿ ಅಧಿಕಾರ ದುರುಪಯೋಗ, ವಂಚನೆ, ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.