ETV Bharat / city

ಲಾಕ್​ಡೌನ್ ಅವಧಿಯಲ್ಲಿ ಅನಗತ್ಯ ವಾಹನ ಸಂಚಾರ ಕಂಡರೆ ಕಠಿಣ ಕ್ರಮ : ಆಯುಕ್ತ ಕಮಲ್ ಪಂತ್ ಎಚ್ಚರಿಕೆ

author img

By

Published : May 21, 2021, 9:57 PM IST

ನಗರದಲ್ಲಿ ಓಡಾಡುವ ಪ್ರತಿ ವಾಹನ ತಪಾಸಣೆ ಮಾಡಿ ನಿಗಾ ವಹಿಸಲಿದ್ದೇವೆ. ಟ್ರಾಫಿಕ್ ಪೊಲೀಸರು ಹಾಗೂ‌ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು ಜಂಟಿ ಕಾರ್ಯಾಚರಣೆ ಮುಂದುವರಿಯಲಿದೆ.‌.

ಆಯುಕ್ತ ಕಮಲ್ ಪಂತ್
ಆಯುಕ್ತ ಕಮಲ್ ಪಂತ್

ಬೆಂಗಳೂರು : ಕೊರೊನಾ ನಿಯಂತ್ರಣಕ್ಕೆ ತರಲು ಜೂನ್ 7ರವರೆಗೆ ರಾಜ್ಯ ಸರ್ಕಾರ ಲಾಕ್​ಡೌನ್ ವಿಸ್ತರಿಸಿದೆ. ಈ ಅವಧಿಯಲ್ಲಿ ಅನಗತ್ಯ ವಾಹನ ಸಂಚಾರ ಕಂಡು ಬಂದರೆ‌‌ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಎಚ್ಚರಿಸಿದ್ದಾರೆ‌.

ಲಾಕ್​ಡೌನ್​ನಿಂದ ಕೊರೊನಾ ಇಳಿಕೆಯಾಗುತ್ತಿದೆ. ಸಂಪೂರ್ಣ ಕಡಿಮೆಗೊಳಿಸಲು ಜೂನ್ 7ರವರೆಗೆ ವಿಸ್ತರಿಸಲಾಗಿದೆ. ವಾಹನ ತಪಾಸಣೆ ಬಿಗಿಗೊಳಿಸಲು ಪೊಲೀಸರಿಗೆ ಸೂಚನೆ ನೀಡಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಇದರ ಬೆನ್ನಲೇ ಆಯುಕ್ತ ಕಮಲ್ ಪಂತ್ ಪ್ರತಿಕ್ರಿಯಿಸಿದ್ದು, ಲಾಕ್​ಡೌನ್​ ವಿಸ್ತರಣೆ ಹಿನ್ನೆಲೆ ವಿನಾಯಿತಿ ಅವಧಿ ಬಳಿಕ ನಗರದಲ್ಲಿ ಅನಗತ್ಯ ವಾಹನ ಸಂಚಾರ ಕಂಡು ಬಂದರೆ ಅಥವಾ ಕೋವಿಡ್ ನಿಯಮ ಉಲ್ಲಂಘಿಸಿದರೆ ಅಂತಹವರ ವಿರುದ್ಧ ನಿರ್ದ್ಯಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಓಡಾಡುವ ಪ್ರತಿ ವಾಹನ ತಪಾಸಣೆ ಮಾಡಿ ನಿಗಾ ವಹಿಸಲಿದ್ದೇವೆ. ಟ್ರಾಫಿಕ್ ಪೊಲೀಸರು ಹಾಗೂ‌ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರು ಜಂಟಿ ಕಾರ್ಯಾಚರಣೆ ಮುಂದುವರಿಯಲಿದೆ.‌

ಲಾಕ್​ಡೌನ್​ನಲ್ಲಿ ಟಫ್ ಆಗಿ ನಿಯಮ ಜಾರಿಗೆ ತರುವ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.