ಬೆಂಗಳೂರು: ಏ. 20ರವರೆಗೆ ವಿಧಿಸಲಾಗಿರುವ ನಿಷೇಧಾಜ್ಞೆ ಕುರಿತು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ 144 ಸೆಕ್ಷನ್ ಇತಿಮಿತಿಗಳ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಕಮೀಷನರ್ ಕಮಲ್ ಪಂತ್ ಸಭೆ ನಡೆಸುತ್ತಿದ್ದಾರೆ.
ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿ ಸೆ.144 ಜಾರಿ ಸಾಧ್ಯವೇ ? ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳ ತೆರೆದು 144 ಜಾರಿಗೆ ತರೋದು ಕಷ್ಟವಾಗಿದೆ. ಈಗಾಗಲೇ ನೈಟ್ ಕರ್ಫ್ಯೂ ಕಠಿಣವಾಗಿ ಜಾರಿಗೆ ತರಲು ಸಾಧ್ಯವಾಗಿಲ್ಲ. ಎಲ್ಲದಕ್ಕೂ ಅವಕಾಶ ಮಾಡಿಕೊಟ್ಟು ನಿಷೇಧಾಜ್ಞೆ ತರುವುದು ಕಷ್ಟ ಎಂದು ಚರ್ಚೆ ನಡೆದಿದೆ.
ಸಂಪೂರ್ಣ ಚರ್ಚೆಯ ಬಳಿಕ ಸರ್ಕಾರಕ್ಕೆ 144 ಜಾರಿಯ ಬಗ್ಗೆ ಪೊಲೀಸ್ ಇಲಾಖೆ ವರದಿ ನೀಡಲಿದೆ. 144 ಸೆಕ್ಷನ್ ವಿಸ್ತರಣೆ ಬಗೆಗಿನ ಸಾಧಕ ಬಾಧಕಗಳ ಬಗ್ಗೆ ವರದಿ ನೀಡಲಿದ್ದು, ಬೇರೆ ಏನೆಲ್ಲ ಕ್ರಮ ತೆಗೆದುಕೊಳ್ಳಬಹುದು ಎಂಬುದರ ಕುರಿತು ಸರ್ಕಾರಕ್ಕೆ ಶಿಫಾರಸು ನೀಡಲಿದೆ.
ಇದನ್ನೂ ಓದಿ.. ರಾಜ್ಯದ 8 ನಗರಗಳಲ್ಲಿ ಕೊರೊನಾ ಕರ್ಫ್ಯೂ ಏ.20 ರವರೆಗೂ ವಿಸ್ತರಣೆ: ಸರ್ಕಾರದ ಪ್ರಮುಖ ನಿರ್ಣಯಗಳು ಹೀಗಿವೆ..