ETV Bharat / city

ಎಂದಿನಂತೆ ಕಾಲೇಜುಗಳು ನಡೆಯುತ್ತವೆ, ಬದಲಾವಣೆ ಇಲ್ಲ: ಡಿಸಿಎಂ ಅಶ್ವತ್ಥ ನಾರಾಯಣ - Colleges take place as before

ಆನ್​​ಲೈನ್, ಆಫ್​ಲೈನ್ ತರಗತಿಗೆ ಹಾಜರಾಗುವುದು ವಿದ್ಯಾರ್ಥಿಗಳಿಗೆ ಬಿಟ್ಟ ವಿಚಾರ. ಮುಂದಿನ ವರ್ಷದ ತರಗತಿ ಆರಂಭಿಸೋ ಬಗ್ಗೆ ಚರ್ಚೆ ಮಾಡಲಾಗ್ತಿದೆ. ಮುಂದೆ ಯುಜಿಸಿ ಗೈಡ್​ಲೈನ್ಸ್ ನೋಡಿಕೊಂಡು ನಿರ್ಧಾರ‌ ಮಾಡುತ್ತೇವೆ. ಎಲ್ಲ ಪರೀಕ್ಷೆಗಳು ಆಫ್​ಲೈನ್ ನಲ್ಲೇ ನಡೆಯಲಿದೆ. ಈಗಿರೋ ಪರಿಸ್ಥಿತಿಯಲ್ಲಿ ಗೈಡ್‌ಲೈನ್ಸ್ ಪ್ರಕಾರವೇ ಎಲ್ಲವೂ ನಡೆಯಲಿದೆ ಎಂದು ತಿಳಿಸಿದರು.

ಅಶ್ವತ್ಥ ನಾರಾಯಣ
ಅಶ್ವತ್ಥ ನಾರಾಯಣ
author img

By

Published : Mar 22, 2021, 3:51 PM IST

ಬೆಂಗಳೂರು: ಕಾಲೇಜುಗಳು ಈಗ ಹೇಗೆ ನಡೆಯುತ್ತಿದೆ. ಅದೇ ರೀತಿಯಲ್ಲಿ ನಡೆಯುತ್ತವೆ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಡಿಸಿಎಂ ಅಶ್ವತ್ಥ ‌ನಾರಾಯಣ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ‌ಮಾತನಾಡಿದ ಅವರು, ಕೆಲ ಕಾಲೇಜ್​ಗಳಲ್ಲಿ ಕೋವಿಡ್ ಹೆಚ್ಚು ಬಂದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಮಧ್ಯಾಹ್ನದ ನಂತರ ಮೀಟಿಂಗ್ ಮಾಡುತ್ತಿದ್ದೇವೆ. ಕಡ್ಡಾಯ ಕ್ಲಾಸ್​ಗೆ ಬರಬೇಕು ಎಂದು ಇಲ್ಲ. ಆನ್​ಲೈನ್, ಆಫ್​ಲೈನ್ ಕ್ಲಾಸ್​ಗಳಿಗೆ ಅವಕಾಶ ಇದೆ. ಕಾಲೇಜಿ​ನಲ್ಲಿ ಮಾಸ್ಕ್ ಹಾಕುವುದು, ಸ್ಯಾನಿಟೈಸಿಂಗ್ ಬಳಕೆ ಕಡ್ಡಾಯವಾಗಿದೆ. ಸಂಸ್ಥೆಗಳು ಉತ್ತಮವಾಗಿ ನಿರ್ವಹಣೆ ಮಾಡುವ ಕೆಲಸ ಮಾಡಬೇಕು ಎಂದರು.

ನರ್ಸರಿಯಿಂದ 5ನೇ ತರಗತಿಯವರೆಗೂ ಯಾವುದೇ ತರಗತಿ ಪ್ರಾರಂಭವಾಗಿಲ್ಲ. 6ನೇ ತರಗತಿಯ ನಂತರದ ತರಗತಿಗಳು ಪ್ರಾರಂಭ ಆಗಿವೆ. ಜೊತೆಗೆ 10 ಮತ್ತು 12ನೇ ತರಗತಿಯ ಪರೀಕ್ಷೆಗಳು ಮಾಡೇ ಮಾಡುತ್ತೇವೆ. ಉಳಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡುವ ಬಗ್ಗೆ ಇಲಾಖೆ ಸಚಿವರು ನಿರ್ಧಾರ ಮಾಡುತ್ತಾರೆ ಎಂದರು.

ವಿಧಾನಸೌಧದಲ್ಲಿ ‌ಮಾತನಾಡಿದ ಡಿಸಿಎಂ ಅಶ್ವತ್ಥ್ ನಾರಾಯಣ್

ಕೋವಿಡ್ ಹೆಚ್ಚಾದ ಹಿನ್ನೆಲೆ ಹಾಸ್ಟೆಲ್‌ನಲ್ಲಿ ಸ್ಕ್ರೀನಿಂಗ್ ಮಾಡಲಾಗುವುದು. ಯಾರೇ ವಿದ್ಯಾಭ್ಯಾಸ ಮಾಡಲು ಬಂದಾಗ ನಿರ್ವಹಣೆ ಮಾಡಬೇಕು. ಈಗಾಗಲೇ ಒಂದು ವರ್ಷ ಕಳೆದಿದೆ. ಕೆಲ ವಿದ್ಯಾರ್ಥಿಗಳಿಗೆ ಆನ್‌ಲೈನ್ ಅರ್ಥ ಆಗಬಹುದು, ಇನ್ನು ಕೆಲವರಿಗೆ ಅರ್ಥ ಆಗದೇ ಇರಬಹುದು. ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವಂತಾಗಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.