ETV Bharat / city

ಸಭೆಯಿಂದ ಹೊರಬಂದು ಕೆ ಎನ್ ರಾಜಣ್ಣ ಜತೆ ಸಿಎಂ ಯಡಿಯೂರಪ್ಪ ಚರ್ಚೆ.. ಕುತೂಹಲಕ್ಕೆ ಕಾರಣವಾದ ಬಿಎಸ್‌ವೈ ನಡೆ..

ಜಿಲ್ಲಾಧಿಕಾರಿ, ಸಿಇಒಗಳ ಜತೆಗಿನ ಸಭೆ ನಡೆಯುತ್ತಿರುವ ಸಂದರ್ಭದಲ್ಲೇ ಮಧ್ಯ ಹೊರ ಬಂದ ಸಿಎಂ ಯಡಿಯೂರಪ್ಪ ಕಾಂಗ್ರೆಸ್‌ನ ಮಾಜಿ ಶಾಸಕ ಕೆ ಎನ್ ರಾಜಣ್ಣ ಬಳಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕೆ.ಎನ್ ರಾಜಣ್ಣ ಜತೆ ಸಿಎಂ ಚರ್ಚೆ
author img

By

Published : Aug 2, 2019, 8:34 PM IST

ಬೆಂಗಳೂರು: ಜಿಲ್ಲಾಧಿಕಾರಿ, ಸಿಇಒಗಳ ಜತೆಗಿನ ಸಭೆ ನಡೆಸುತ್ತಿರುವಾಗಲೇ ಮಧ್ಯ ಹೊರ ಬಂದ ಸಿಎಂ ಯಡಿಯೂರಪ್ಪ, ಕಾಂಗ್ರೆಸ್‌ನ ಮಾಜಿ ಶಾಸಕ ಕೆ ಎನ್ ರಾಜಣ್ಣ ಬಳಿ ಚರ್ಚೆ ನಡೆಸಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಕೈ ಮುಖಂಡ ಕೆ ಎನ್ ರಾಜಣ್ಣ ಜತೆ ಸಿಎಂ ಬಿಎಸ್‌ವೈ ಚರ್ಚೆ.. ಯಾಕೆ, ಏನು ಎಂಬ ಕುತೂಹಲ

ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಜೊತೆ ಆಗಮಿಸಿದ ಕೆ ಎನ್‌ ರಾಜಣ್ಣ, ವಿಧಾನಸೌಧಕ್ಕೆ ದಿಢೀರ್ ಭೇಟಿ ನೀಡಿದರು. ಸಿಎಂ ಜತೆ ವಿಧಾ‌ನಸೌಧದ ಸಮ್ಮೇಳನ ಸಭಾಂಗಣದ ಹೊರಗಿನ ಕಾರಿಡಾರ್​ನಲ್ಲಿ ಸಮಾಲೋಚನೆ ನಡೆಸಿದರು. ಈ ವೇಳೆ ಬಿಎಸ್​ವೈಗೆ ಕೆಲವು ಮಾಹಿತಿಗಳನ್ನು ನೀಡಿದರು ಎನ್ನಲಾಗಿದೆ.

ಹೆಚ್​ಡಿಕೆ ಸರ್ಕಾರ ಇತ್ತೀಚಿಗೆ ತುಮಕೂರು ಡಿಸಿಸಿ‌ ಬ್ಯಾಂಕ್​ನ ಸೂಪರ್ ಸೀಡ್ ಮಾಡಿತ್ತು. ಈ ಸಂಬಂಧ ಬಿಎಸ್​ವೈ ಜೊತೆ ರಾಜಣ್ಣ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ‌. ಈ ವೇಳೆ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಲಾಂಬಿಕಾದೇವಿಯವರನ್ನು ಕರೆಯಿಸಿದ ಸಿಎಂ ಯಡಿಯೂರಪ್ಪ ಮಾಹಿತಿಯನ್ನು ಪಡೆದುಕೊಂಡರು.

Intro:GggBody:KN_BNG_06_CM_KNRAJANNAMEETING_SCRIPT_720195

ಸಭೆಯಿಂದ ಹೊರಬಂದ ಸಿಎಂರಿಂದ ಕೆ.ಎನ್.ರಾಜಣ್ಣ ಜತೆ ಚರ್ಚೆ; ಏನಿರಬಹುದು ಸಮಾಲೋಚನೆ!

ಬೆಂಗಳೂರು: ಜಿಲ್ಲಾಧಿಕಾರಿ, ಸಿಇಒಗಳ ಜತೆಗಿನ ಸಭೆಯ ಮಧ್ಯವೇ ಹೊರ ಬಂದ ಸಿಎಂ ಯಡಿಯೂರಪ್ಪ ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಬಳಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಯಿತು.

ವಿಧಾನಸೌಧಕ್ಕೆ ದಿಢೀರ್ ಭೇಟಿ ನೀಡಿದ ಕೆ.ಎನ್.ರಾಜಣ್ಣ, ಸಿಎಂ ಬಿಎಸ್ ವೈ ಜತೆ ವಿಧಾ‌ನಸೌಧ ಸಮ್ಮೇಳನ ಸಭಾಂಗಣದ ಹೊರಗಿನ ಕಾರಿಡಾರ್ ನಲ್ಲಿ ಸಮಾಲೋಚನೆ ನಡೆಸಿದರು. ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಜೊತೆ ಆಗಮಿಸಿದ ಕೆ.ಎನ್ .ರಾಜಣ್ಣ ಈ ವೇಳೆ ಬಿಎಸ್ ವೈ ಕಿವಿಯಲ್ಲಿ ಕೆಲ ಮಾಹಿತಿಗಳನ್ನು ನೀಡಿದರು.

ಹೆಚ್ ಡಿಕೆ ಸರ್ಕಾರ ಇತ್ತೀಚಿಗೆ ತುಮಕೂರು ಡಿಸಿಸಿ‌ ಬ್ಯಾಂಕ್ ನ್ನು ಸೂಪರ್ ಸೀಡ್ ಮಾಡಿತ್ತು. ಈ ಸಂಬಂಧ ಬಿಎಸ್ ವೈ ಜೊತೆ ರಾಜಣ್ಣ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ‌. ಈ ವೇಳೆ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಲಾಂಬಿಕಾದೇವಿಯವರನ್ನು ಕರೆಸಿ ಸಿಎಂ ಯಡಿಯೂರಪ್ಪ ಮಾಹಿತಿಯನ್ನು ಪಡೆದರು. ಬಳಿಕ ಸಿಎಂ ಅವರು, ನಾಗಲಾಂಬಿಕಾದೇವಿಗೆ ಕೆಲ ಸೂಚನೆಗಳನ್ನು ನೀಡುತ್ತಿರುವುದು ಕಂಡು ಬಂತು.

ಈ ಬಗ್ಗೆ ಕೆ.ಎನ್.ರಾಜಣ್ಣ ಮಾಧ್ಯಮದವರಿಗೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದರು.Conclusion:Hhh
ETV Bharat Logo

Copyright © 2024 Ushodaya Enterprises Pvt. Ltd., All Rights Reserved.