ETV Bharat / city

ಉ.ಕ ಭಾಗದ ಪಂಚಮಸಾಲಿ ಸಮುದಾಯಕ್ಕೆ ಸಿಎಂ ಸ್ಥಾನ ಕೊಡಬೇಕು; ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯ - ಉತ್ತರ ಕರ್ನಾಟಕ ಪಂಚಮಸಾಲಿ ಸಮುದಾಯಕ್ಕೆ ಸಿಎಂ ಸ್ಥಾನ

ಸಿಎಂ ಬದಲಾವಣೆ ಹಿನ್ನೆಲೆ ಮಠಾಧೀಶರು ಸಹ ಪರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಸಹ ಉತ್ತರ ಕರ್ನಾಟಕ ಭಾಗಕ್ಕೆ ಮುಖ್ಯಮಂತ್ರಿ ಸ್ಥಾನ ಬೇಡಿಕೆ ಇಟ್ಟಿದ್ದು, ಅವಶ್ಯಕತೆ ಇದ್ರೆ ಒರ್ವ ಶಾಸಕನ ಹೆಸರನ್ನು ಬಿಜೆಪಿ ಹೈಕಮಾಂಡ್​​ಗೆ ಸಲಹೆ ನೀಡಲಾಗುವುದು ಎಂದು ಹೇಳಿದ್ದಾರೆ.

cm-post-to-north-karnataka-panchmasaali-community-mla
ಬಸವಜಯ ಮೃತ್ಯುಂಜಯ ಸ್ವಾಮೀಜಿ
author img

By

Published : Jul 24, 2021, 5:15 PM IST

Updated : Jul 24, 2021, 5:26 PM IST

ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಲಿಂಗಾಯತ ಪಂಚಮಸಾಲಿ ಶಾಸಕರಿಗೇ ಸಿಎಂ ಸ್ಥಾನ ನೀಡಬೇಕು. ಅಗತ್ಯ ಬಿದ್ದರೆ ಪಕ್ಷದ ವರಿಷ್ಠರಿಗೆ ಒಬ್ಬರ ಹೆಸರನ್ನು ಸಲಹೆ ಮಾಡಲಾಗುವುದು ಎಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ ಸಿಎಂ ಸ್ಥಾನ ನೀಡುವಂತೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯ

ನಗರದ ಖಾಸಗಿ ಹೋಟೆಲ್​ನಲ್ಲಿಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ವತಿಯಿಂದ ಸಭೆ ನಡೆಸಿದರು. ಬಳಿಕ ಅವರು, ಸಭೆಯ ನಾಲ್ಕು ನಿರ್ಣಯಗಳ ಬಗ್ಗೆ ಸುದ್ದಿಗೋಷ್ಟಿ ನಡೆಸಿದರು. ಲಿಂಗಾಯತ ಪಂಚಮಸಾಲಿ ಸಮುದಾಯದ 17 ಶಾಸಕರಲ್ಲಿ ಮೂವರು ಸಿಎಂ ರೇಸ್​ನಲ್ಲಿ ಇದ್ದಾರೆ. ಉತ್ತರ ಕರ್ನಾಟಕ ಭಾಗದ ಲಿಂಗಾಯತ ಪಂಚಮಸಾಲಿ ಶಾಸಕರಿಗೇ ಸಿಎಂ ಸ್ಥಾನ ನೀಡಬೇಕು. ಬಸವನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ್, ಮುರುಗೇಶ್ ನಿರಾಣಿ ಮೂವರು ಮುಂಚೂಣಿಯಲ್ಲಿದ್ದಾರೆ. ಅಗತ್ಯ ಬಿದ್ದರೆ ಪಕ್ಷದ ವರಿಷ್ಠರಿಗೆ ಒಬ್ಬರ ಹೆಸರನ್ನು ಸಲಹೆ ಮಾಡಲಾಗುವುದು ಎಂದು ಸ್ವಾಮೀಜಿ ತಿಳಿಸಿದರು. ಅಲ್ಲದೆ ಲಿಂಗಾಯತ ಪಂಚಮಸಾಲಿ ಮೀಸಲಾತಿಗೆ ಸ್ಪಂದಿಸಿದ್ದರೆ ಸಿಎಂಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.

ಕಳಂಕಿತರಿಗೆ ಸಿಎಂ ಸ್ಥಾನ ನೀಡಬೇಡಿ

ಮಾಜಿ ಶಾಸಕ ವಿಜಯಾನಂದ ಕಾಶಪ್ಪ ಅವರು ಮಾತನಾಡಿ, ಸಿಡಿ ಕಳಂಕ ಮೊದಲಾದ ವಿವಾದ ಇರುವವರಿಗೆ ಸಿಎಂ ಸ್ಥಾನ ನೀಡಿ ಸಮಾಜದ ಹೆಸರು ಹಾಳು ಮಾಡುವ ಬದಲು, ಉತ್ತಮವಾದವರಿಗೇ ಸಿಎಂ ಖುರ್ಚಿ ನೀಡಬೇಕು ಎಂದು ಪರೋಕ್ಷವಾಗಿ ಮುರುಗೇಶ್ ನಿರಾಣಿ ಸಿಎಂ ಆಗುವುದು ಸೂಕ್ತ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಸಚ್ಛಾರಿತ್ರರಿಗೆ ಸಿಎಂ ಸ್ಥಾನ ನೀಡಲಿ ಎಂದು ಒತ್ತಾಯಿಸಿದರು.

ಈಗಾಗಲೇ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡಲಾಗಿತ್ತು. ಆದರೆ ಸೆ. 15 ರ ವರೆಗೆ ಸಿಎಂ ಯಡಿಯೂರಪ್ಪ ಅವರೇ ಗಡುವಿನ ಅವಧಿ ಕೇಳಿದ್ದರು. ನಂತರವೂ ಸಿಗದೆ ಹೋದರೆ ಹೋರಾಟದ ರೂಪುರೇಷೆ ಈಗಾಗಲೇ ಹಾಕಿಕೊಂಡಿದ್ದೇವೆ. ಈಗ ಮುಖ್ಯಮಂತ್ರಿಗಳೇ ಬದಲಾದರೂ, ಸರ್ಕಾರಕ್ಕೆ ಆ ಬದ್ಧತೆ ಬೇಕಾಗುತ್ತದೆ. ಸಿಎಂ ಬದಲಾವಣೆ ಆದರೆ ನಮ್ಮ ಸಮುದಾಯದವರಿಗೇ ಅವಕಾಶ ಕೊಡಬೇಕು ಎಂದು ಬಿಜೆಪಿ ವರಿಷ್ಠರನ್ನು ಒತ್ತಾಯಿಸುತ್ತೇವೆ ಎಂದರು.

ಇತರೆ ನಿರ್ಣಯಗಳು

ಅಖಿಲ ಭಾರತ ಲಿಂಗಾಯತ ಪಂಚಮಸಾಲಿಯವರಿಗೆ 2ಎ ಮೀಸಲಾತಿ‌ ನೀಡಬೇಕು. ಲಿಂಗಾಯತ ಒಳಪಂಗಡಗಳಿಗೆ ಕೇಂದ್ರ ಸರ್ಕಾರದ ಒಳಮೀಸಲಾತಿ ಕೊಡಬೇಕು. ಸೆಪ್ಟೆಂಬರ್ 15 ಕ್ಕೆ ಸಿಎಂ ಯಡಿಯೂರಪ್ಪ ಕೊಟ್ಟ ಅವಧಿ ಮುಗಿಯುತ್ತದೆ. ಅಂದಿನವರೆಗೂ ಬೇಡಿಕೆ ಈಡೇರದೆ ಹೋದರೆ ಅಕ್ಟೋಬರ್ 1 ರಿಂದ ಮತ್ತೆ ಫ್ರೀಡಂ ಪಾರ್ಕ್‌ನಲ್ಲಿ ಸತ್ಯಾಗ್ರಹ ನಡೆಸಲಾಗುತ್ತದೆ. ಆಗಸ್ಟ್ 1 ರಿಂದ ರಾಜ್ಯದ್ಯಾಂತ ಪ್ರತಿಜ್ಞಾ ಪಂಚಾಯತ್ ಮಾಡಲಿದ್ದೇವೆ. ರಾಜ್ಯಾದ್ಯಂತ ಇಷ್ಟಲಿಂಗ ಪೂಜೆ ಮಾಡಿ, ಸಮಾಜದ ಜನರಲ್ಲಿ ಜನಜಾಗೃತಿ ಮೂಡಿಸಲಿದ್ದೇವೆ ಎಂದರು.

ಮಲೈ ಮಹದೇಶ್ವರ ಬೆಟ್ಟ, ಮೈಸೂರು, ಹಾಸನ, ಮಂಡ್ಯ, ಬೀದರ್ ಜಿಲ್ಲೆಗಳಲ್ಲಿ ಪಂಚಮಸಾಲಿ ಗೌಡ ಲಿಂಗಾಯತ ಸಮಾಜದವರು ಹೆಚ್ಚು ಇದ್ದು, ಈ ಭಾಗದಲ್ಲಿ ಸಂಚಾರ ಮಾಡಿ ಸಂಘಟನೆ ಮಾಡುವುದಾಗಿ ಇದೇ ಸಂದರ್ಭದಲ್ಲಿ ವಿಜಯಾನಂದ ಕಾಶಪ್ಪನವರು ತಿಳಿಸಿದರು.

Last Updated : Jul 24, 2021, 5:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.