ETV Bharat / city

ಸೋಮವಾರದ ಪರಿಸ್ಥಿತಿ ಪರಿಶೀಲಿಸಿ ಪಿಯು ಕಾಲೇಜು ಆರಂಭಿಸಲು ತೀರ್ಮಾನ: ಸಿಎಂ ಬೊಮ್ಮಾಯಿ

ಪಿಯು ಕಾಲೇಜು ಆರಂಭಿಸುವ ವಿಚಾರವಾಗಿ, ಸೋಮವಾರದ ಪರಿಸ್ಥಿತಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತೇವೆ‌ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

cm basavaraja bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Feb 12, 2022, 12:50 PM IST

ಬೆಂಗಳೂರು: ಹಿಜಾಬ್​, ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರದ ಪರಿಸ್ಥಿತಿ ನೋಡಿಕೊಂಡು ಪಿಯುಸಿ ತರಗತಿ ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ‌ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ವಿಧಾನಸೌಧದ ಬಳಿ ಮಾತನಾಡಿದ ಅವರು, ಪಿಯು ಕಾಲೇಜು ಆರಂಭಿಸುವ ವಿಚಾರವಾಗಿ ಸಚಿವರು ಮಾಹಿತಿ ನೀಡಲಿದ್ದಾರೆ ಎಂದರು. ತಾಲೂಕು ಪಂಚಾಯತ್​ ಮತ್ತು ಜಿಲ್ಲಾ ಪಂಚಾಯತ್ ಮೀಸಲಾತಿ ಮರು ಪರೀಶಿಲನೆ ವಿಚಾರವಾಗಿ ಮಾತನಾಡಿ, ಸುಪ್ರೀಂಕೋರ್ಟ್ ಆದೇಶ ನೀಡಿದೆ‌. ಹೀಗಾಗಿ ಅಡ್ವೊಕೇಟ್​ ಜನರಲ್ ಜೊತೆ ಚರ್ಚೆ ಮಾಡಿ ಸಭೆ ಕರೆಯಲಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಒಂದೇ ವಿಮಾನದಲ್ಲಿ ಇಂದು ಬೆಳಗಾವಿಗೆ ಬರಲಿದ್ದಾರೆ ಸಿಎಂ ಬೊಮ್ಮಾಯಿ - ಡಿಕೆಶಿ

ಎರಡು ದಿನ ಶಿಗ್ಗಾಂವ ಪ್ರವಾಸಕ್ಕೆ ತೆರಳುತ್ತಿದ್ದೇನೆ. ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದೇನೆ. ಕೆಲ ಸ್ನೇಹಿತರನ್ನು ಭೇಟಿ ಮಾಡಬೇಕಾಗಿದೆ, ಹಾಗಾಗಿ ಇಂದು ಶಿಗ್ಗಾವಿಗೆ ಹೋಗುತ್ತಿದ್ದೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.