ETV Bharat / city

AKKA..'ಅಕ್ಕ' ಕನ್ನಡ ರಾಜ್ಯೋತ್ಸವಕ್ಕೆ ಸಿಎಂ ಚಾಲನೆ: ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಕರೆ - ಅಮೆರಿಕಾ ಕನ್ನಡ ಕೂಟಗಳ ಆಗರ

ಅಮೆರಿಕ ಕನ್ನಡ ಕೂಟಗಳ ಆಗರ(ಅಕ್ಕ)Association of Kannada Kootas of America(AKKA) ವತಿಯಿಂದ ಆಯೋಜಿಸಿದ್ದ 'ಕನ್ನಡ ರಾಜ್ಯೋತ್ಸವ ಸಂಭ್ರಮ 2021' ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ನಿವಾಸದಿಂದ ವರ್ಚುಯಲ್ ಆಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraja Bommai )ಪಾಲ್ಗೊಂಡರು.

CM Basavaraja Bommai inaugurate 'Akka' Kannada Rajyotsava
'ಅಕ್ಕ' ಕನ್ನಡ ರಾಜ್ಯೋತ್ಸವಕ್ಕೆ ಸಿಎಂ ಚಾಲನೆ
author img

By

Published : Nov 20, 2021, 11:46 AM IST

Updated : Nov 20, 2021, 11:58 AM IST

ಬೆಂಗಳೂರು: ರಾಜ್ಯದ ಔದ್ಯೋಗಿಕ ವಾತಾವರಣವನ್ನು ಅಮೆರಿಕಾದಲ್ಲಿರುವವರಿಗೆ ತಿಳಿಸಿ ಇಲ್ಲಿ ಬಂಡವಾಳ ಹೂಡಿಕೆಗೆ ಪ್ರಯತ್ನ ಮಾಡಿದಲ್ಲಿ ಅಗತ್ಯ ನೆರವು, ಸಹಕಾರ ನೀಡಲಾಗುತ್ತದೆ ಎಂದು 'ಅಮೆರಿಕ ಕನ್ನಡ ಕೂಟಗಳ ಆಗರ'ಕ್ಕೆ(Association of Kannada Kootas of America(AKKA) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraja Bommai ) ಕರೆ ನೀಡಿದ್ದಾರೆ.

'ಅಕ್ಕ' ಕನ್ನಡ ರಾಜ್ಯೋತ್ಸವಕ್ಕೆ ಸಿಎಂ ಚಾಲನೆ..

ಅಮೆರಿಕ ಕನ್ನಡ ಕೂಟಗಳ ಆಗರ(ಅಕ್ಕ) ವತಿಯಿಂದ ಆಯೋಜಿಸಿದ್ದ 'ಕನ್ನಡ ರಾಜ್ಯೋತ್ಸವ ಸಂಭ್ರಮ 2021' ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ನಿವಾಸದಿಂದ ವರ್ಚುಯಲ್ ಆಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡರು.

ನಂತರ ಅಕ್ಕ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಕನ್ನಡ ಅತ್ಯಂತ ಪುರಾತನವಾದ ಭಾಷೆ. ದೇಶದ ಮೂಲ ಭಾಷೆಗಳಲ್ಲಿ ಕನ್ನಡ ಅತ್ಯಂತ ಹಿರಿಯ ಭಾಷೆ, ಅತ್ಯಂತ ಪುರಾತನವಾದ ಭಾಷೆಯಾಗಿದೆ. ತಮಿಳಿಗಿಂತ ಮೊದಲು ಕನ್ನಡ ಇತ್ತು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಹಾಗಾಗಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ.

CM Basavaraja Bommai inaugurate 'Akka' Kannada Rajyotsava
'ಕನ್ನಡ ರಾಜ್ಯೋತ್ಸವ ಸಂಭ್ರಮ 2021' ಕಾರ್ಯಕ್ರಮದ ಉದ್ಘಾಟನಾ ಸಮಾರಂಭ

ನಮ್ಮ ಬರಹಗಾರರು, ಸಾಹಿತಿಗಳು ತಮ್ಮ ಬರವಣಿಗೆಯಿಂದ ಸಾಹಿತ್ಯದಿಂದ ಕನ್ನಡ ಭಾಷೆಯನ್ನು ಇಷ್ಟು ವರ್ಷಗಳ ಕಾಲ ಶ್ರೀಮಂತಗೊಳಿಸಿದ್ದಾರೆ. ಉತ್ಕೃಷ್ಟವಾದ ಲೇಖನ ಮತ್ತು ಸಾಹಿತ್ಯವನ್ನು ಕೊಡುವ ಮೂಲಕ ಕನ್ನಡದ ಪರಂಪರೆಯನ್ನು ಇಂದಿಗೂ ಕೂಡ ಅತ್ಯಂತ ಶ್ರೀಮಂತವಾಗಿ ಉಳಿಸಿಕೊಂಡು ಬಂದಿರುವುದನ್ನು ನಾವು ಮರೆಯುವಂತಿಲ್ಲ. ನಮ್ಮ ಮುಂದಿನ ಜನಾಂಗಕ್ಕೆ ಇದನ್ನು ತಿಳಿಸುವ ಕೆಲಸವನ್ನು ಮಾಡುವ ಕರ್ತವ್ಯ ನಮ್ಮದಾಗಿದೆ ಎಂದರು.

ಕನ್ನಡಿಗರಿಗೆ ಉದ್ಯೋಗ:
ಕರ್ನಾಟಕ ಸರ್ಕಾರ ಕನ್ನಡದ ಬಗ್ಗೆ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಕನ್ನಡವನ್ನು ನಾವು ಬೆಳೆಸಬೇಕು ಎನ್ನುವ ಕಾರಣಕ್ಕೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆಡಳಿತದಲ್ಲಿ ಕನ್ನಡ, ಇ- ಆಡಳಿತದಲ್ಲಿ ಕನ್ನಡ, ಎಲ್ಲ ಸಂದರ್ಭದಲ್ಲಿ ಕನ್ನಡ ಬಳಕೆ ಹಾಗೂ ಉದ್ಯೋಗದಲ್ಲಿ ಕನ್ನಡವನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಕೊಳ್ಳಲಿದ್ದೇವೆ.

ಹಲವಾರು ಬಾರಿ ಈ ಪ್ರಯತ್ನಗಳು ಸಫಲ ಕಂಡಿಲ್ಲ. ಹಾಗಾಗಿ ವಿಶೇಷ ಕಾರ್ಯಕ್ರಮವನ್ನು ರೂಪಿಸಬೇಕಿದೆ. ಬರುವ ದಿನಗಳಲ್ಲಿ ಎಲ್ಲಾ ಉದ್ಯಮಗಳಲ್ಲಿ ಕನ್ನಡಿಗರಿಗೆ ಅತಿ ಹೆಚ್ಚು ಉದ್ಯೋಗ ಕೊಡಬೇಕು ಎಂದು ನಾವು ಈಗಾಗಲೇ ತಿಳಿಸಿದ್ದೇವೆ. ಕಾನೂನಿನಲ್ಲಿಯೂ ಇದೆ. ಅದನ್ನು ಅಕ್ಷರಶಃ ಪಾಲಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಸಿಎಂ ಭರವಸೆ ನೀಡಿದರು.

ಬಡ ಕನ್ನಡಿಗನಿಗೆ ತರಬೇತಿ:
ಕಡು ಬಡವ ಕನ್ನಡಿಗನಿಗೆ ಆರ್ಥಿಕ ಸಬಲತೆ ಕೊಡುವ ಅವಶ್ಯಕತೆ ಇದೆ. ಇದನ್ನು ನಾವು ಮನಗಂಡಿದ್ದೇವೆ. ಅದನ್ನು ಮಾಡುವ ಕೆಲಸವನ್ನು ಮಾಡುತ್ತೇವೆ. ಅದಕ್ಕೆ ಪೂರಕವಾಗಿ ನಮಗೆ ಶಿಕ್ಷಣ ಕ್ಷೇತ್ರದ ಬೆಂಬಲ ಬೇಕು. ಕೌಶಲ್ಯ ತರಬೇತಿ ಬಹಳ ಅವಶ್ಯಕತೆ ಇದೆ. ಉನ್ನತ ಶಿಕ್ಷಣವನ್ನು ನಾವು ಕನ್ನಡದಲ್ಲಿ ಮಾಡಬೇಕು. ಇದಕ್ಕೆ ಹಲವಾರು ಸವಾಲುಗಳಿವೆ. ಈ ಸವಾಲುಗಳನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದರು.

ಕನ್ನಡಿಗರಿಗೆ ಅವಕಾಶ ಬೇಕು:
ಕನ್ನಡಿಗರಿಗೆ ಎಲ್ಲಾ ಅರ್ಹತೆ ಇದೆ, ಅವರಿಗೆ ಅವಕಾಶ ಬೇಕಿದೆ. ಅಮೆರಿಕಕ್ಕೆ ಹೋಗಿರುವವರು ನೂರಕ್ಕೆ ನೂರರಷ್ಟು ಎಲ್ಲರೂ ಅಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮವರು ವಿದೇಶಕ್ಕೆ ಹೋಗಿ ಅಲ್ಲಿನ ಪರಿಸರಕ್ಕೆ ಹೊಂದಿಕೊಂಡು ಅಲ್ಲಿ ಯಶಸ್ವಿಯಾಗಲು ಸಾಧ್ಯವಿದ್ದರೆ, ನಮ್ಮ ಕನ್ನಡನಾಡಿನಲ್ಲಿ ಆಗುವುದು ಕಷ್ಟವೇನಲ್ಲ. ಅದಕ್ಕೆ ಅವರಿಗೆ ಅವಕಾಶಗಳನ್ನು ಕಲ್ಪಿಸಬೇಕಿದೆ ಎಂದರು.

ಹೂಡಿಕೆದಾರರನ್ನು ಸೆಳೆಯಿರಿ:
ರಾಜ್ಯದ ಅಭಿವೃದ್ಧಿ ಬೆಳವಣಿಗೆಗೆ ನೀವು ಒಂದು ರೀತಿಯಲ್ಲಿ ಕನ್ನಡದ ರಾಯಭಾರಿಗಳಾಗಿದ್ದೀರಿ. ಕನ್ನಡನಾಡಿನಲ್ಲಿ ಉತ್ತಮವಾಗಿರುವ ಔದ್ಯೋಗಿಕ ವಾತಾವರಣವನ್ನು ಅವರಿಗೆ ತಿಳಿಸಿ. ಇಲ್ಲಿ ಬಂಡವಾಳ ಹೂಡಿಕೆಗೆ ತಾವು ಪ್ರಯತ್ನವನ್ನು ಮಾಡಬೇಕು. ಕರ್ನಾಟಕ ಸರ್ಕಾರ ತಮ್ಮ ಎಲ್ಲ ಪ್ರಯತ್ನಗಳಿಗೆ ಮತ್ತು ತಮ್ಮ ಎಲ್ಲ ಕಾರ್ಯಕ್ರಮಗಳಿಗೆ ಸಂಪೂರ್ಣ ಜತೆಗೆ ನಿಲ್ಲಲಿದೆ. ಜತೆಗೆ ಸಹಾಯ - ಸಹಕಾರವನ್ನು ನೀಡಲಿದೆ ಎಂದು ಭರವಸೆ ನೀಡಿದರು.

ಅಮೆರಿಕ ಸರ್ಕಾರದಲ್ಲಿ ಕನ್ನಡಿಗರಿಗೆ ಹುದ್ದೆ:
ಕನ್ನಡದ ಧ್ವಜವನ್ನು ಅಮೆರಿಕದಲ್ಲಿ ಎತ್ತಿಹಿಡಿದಿರುವುದು ಅದ್ಭುತವಾದ ಕೆಲಸ. ಅಲ್ಲಿಯೂ ಕನ್ನಡದ ಬಾವುಟ ನಿರಂತರವಾಗಿ ಹಾರಲಿ. ಅಲ್ಲಿಯ ಸರ್ಕಾರದಲ್ಲಿಯೂ ಕೂಡ ಕನ್ನಡಿಗರು ಪ್ರಮುಖ ಹುದ್ದೆಗಳನ್ನು ತೆಗೆದುಕೊಳ್ಳುವ ಪ್ರಯತ್ನ ಆಗಬೇಕು ಎಂದು ಸಲಹೆ ನೀಡಿದರು.

ನನ್ನ ಸರ್ಕಾರ ಕನ್ನಡಿಗರಿಂದ ಕನ್ನಡಿಗರಿಗಾಗಿ ಹುಟ್ಟಿದೆ:
ನನ್ನ ಸರ್ಕಾರ ಕನ್ನಡದಿಂದ ಹುಟ್ಟಿರುವ ಸರ್ಕಾರ. ಕನ್ನಡಕ್ಕಾಗಿ ಹುಟ್ಟಿರುವ ಸರ್ಕಾರ. ಕನ್ನಡ ಪರ ನನ್ನ ಸರ್ಕಾರ ನಿರಂತರವಾಗಿ ಇರಲಿದೆ. ಜಾಗತೀಕರಣ, ಉದಾರೀಕರಣದ, ಖಾಸಗೀಕರಣದ ಹಿನ್ನೆಲೆಯಲ್ಲಿ ಅಂತಃಕರಣವನ್ನು ಮರೆತಿದ್ದೇವೆ. ಆದರೆ, ಅಂತಹ ಅಂತಃಕರಣವನ್ನು ಈಗ ಅಕ್ಕ ಸಂಘಟನೆ ಮೂಲಕ ನೋಡುತ್ತಿದ್ದೇವೆ. ಈ ಅಂತಃಕರಣ ಸದಾಕಾಲ ಇರಲಿ ಎಂದು ಸಿಎಂ ಬೊಮ್ಮಾಯಿ ಹಾರೈಸಿದರು.

'ಅಕ್ಕ'ಗೆ ಅಭಿನಂದನೆ:
ಅಮೆರಿಕದಲ್ಲಿರುವ ಕನ್ನಡಿಗರ ಅಸ್ಮಿತೆ ಅಮೆರಿಕ ಕನ್ನಡ ಕೂಟಗಳ ಸಂಘವಾಗಿದೆ. ದೂರದ ಅಮೆರಿಕದಲ್ಲಿ ವಿವಿಧ ವೃತ್ತಿಯಲ್ಲಿ ಇರುವ ಕನ್ನಡಿಗರನ್ನು ಒಂದುಗೂಡಿಸಿ ಮತ್ತೊಮ್ಮೆ ಕನ್ನಡದ ಭಾವನೆಗಳಿಗೆ ಸ್ಪಂದನೆಯನ್ನು ಕೊಟ್ಟಿದ್ದಾರೆ.

ಆ ಭಾವನೆಗಳನ್ನು ಜೀವಂತವಾಗಿಡುವ ಪ್ರಯತ್ನ ಮಾಡಿದ್ದಾರೆ. 'ಅಕ್ಕ' ಮಾಡಿರುವ ಕೆಲಸದಿಂದ ಕನ್ನಡ ಬಹಳ ಹೆಮ್ಮೆಯಿಂದ ತಲೆಯೆತ್ತಿ ನಿಲ್ಲುವಂತಾಗಿದೆ. ಈ ಕನ್ನಡ ಕೂಟಗಳನ್ನು ಬೆಳೆಸಿದ ಎಲ್ಲರಿಗೂ ಕನ್ನಡನಾಡು ಮತ್ತು ಸರ್ಕಾರ ಹೆಮ್ಮೆಯಿಂದ ಅಭಿನಂದಿಸುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ: Jan Swaraj Yatra..ಜನಸ್ವರಾಜ್ ಯಾತ್ರೆ ಹೆಸರಲ್ಲಿ ಜಾತ್ರೆ ಮಾಡುವ ಸಮಯ ಇದಲ್ಲ: ಹೆಚ್​​ಡಿಕೆ ಕಿಡಿ

Last Updated : Nov 20, 2021, 11:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.