ETV Bharat / city

ನೆರೆ ರಾಜ್ಯಗಳಿಗಿಂತ 10 ಪಟ್ಟು ಹೆಚ್ಚು ವಿದೇಶಿ ನೇರ ಹೂಡಿಕೆ: ಕರ್ನಾಟಕ ಬಿಟ್ಟು ಬನ್ನಿ ಎಂದ ರಾಜ್ಯಗಳಿಗೆ ಸಿಎಂ ಟಾಂಗ್ - Bommai tog Tong to other states

ನೆರೆ ರಾಜ್ಯಗಳಿಂದ ರಾಜ್ಯದ ಉದ್ಯಮಗಳಿಗೆ ಬರುತ್ತಿರುವ ಆಹ್ವಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದ್ದಾರೆ. ನೆರೆ ರಾಜ್ಯಗಳಿಗಿಂತ 10 ಪಟ್ಟು ಹೆಚ್ಚು ವಿದೇಶಿ ನೇರ ಹೂಡಿಕೆ ನಮ್ಮಲ್ಲಾಗಿದೆ‌ ಎಂದಿದ್ದಾರೆ.

CM Basavaraj Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By

Published : Apr 11, 2022, 10:20 AM IST

Updated : Apr 11, 2022, 10:31 AM IST

ಬೆಂಗಳೂರು: ಕಳೆದ ಮೂರು ತಿಂಗಳಿನಲ್ಲಿ ಶೇ.47ರಷ್ಟು ವಿದೇಶಿ ನೇರ ಬಂಡವಾಳ ಕರ್ನಾಟಕಕ್ಕೆ ಹರಿದು ಬಂದಿದೆ. ಆದರೆ ನೆರೆಹೊರೆಯ ರಾಜ್ಯಗಳಿಗೆ ಶೇ.4 ರವರೆಗೆ ಮಾತ್ರ ಎಫ್​ಡಿಐ(ವಿದೇಶಿ ನೇರ ಹೂಡಿಕೆ ) ಬಂದಿದೆ ಎಂದು ಹೂಡಿಕೆದಾರರನ್ನು ಕರ್ನಾಟಕ ಬಿಟ್ಟು ನಮ್ಮ ರಾಜ್ಯಗಳಿಗೆ ಬನ್ನಿ ಎಂದು ಆಹ್ವಾನ ನೀಡಿದವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಜಾನಪದ ಉತ್ಸವ-2022 ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಜಾನಪದ ಉತ್ಸವ-2022 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 3 ತ್ರೈಮಾಸಿಕದಲ್ಲಿ ಅತಿ ಹೆಚ್ಚು ಅಂದರೆ ಶೇ. 47 ರಷ್ಟು ವಿದೇಶಿ ನೇರ ಬಂಡವಾಳ ಕರ್ನಾಟಕಕ್ಕೆ ಹರಿದು ಬಂದಿದೆ. ಪಕ್ಕದ ರಾಜ್ಯಗಳಿಗೆ 1-2 ಅಥವಾ 4 ರಷ್ಟು ಬಂದಿದೆ. 10 ಪಟ್ಟು ಹೆಚ್ಚು ಹೂಡಿಕೆ ನಮ್ಮಲ್ಲಾಗಿದೆ‌. ವಿಶ್ವದ ಎಲ್ಲಾ ದೇಶಗಳು ಕರ್ನಾಟಕದೆಡೆಗೆ ಬರುತ್ತಿವೆ. ಬೆಂಗಳೂರು ನಗರಾಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.

ಬೆಂಗಳೂರು ನಿಜವಾದ ಅಂತಾರಾಷ್ಟ್ರೀಯ ನಗರವಾಗಿದೆ. ಸರ್ಕಾರ ನಗರಾಭಿವೃದ್ಧಿಗಾಗಿ 'ಅಮೃತ ನಗರೋತ್ಥಾನ'ದಡಿ ನೀಡಿರುವ ಅನುದಾನದಲ್ಲಿ ಎಲ್ಲಾ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತಿವೆ. ಬೆಂಗಳೂರು ಸುಂದರ ನಗರ, ಐಟಿ-ಬಿಟಿ ರಾಜಧಾನಿ ಮಾತ್ರವಲ್ಲ, ನಿಜವಾಗಿಯೂ ಆರ್ಥಿಕ ರಾಜಧಾನಿಯಾಗಿಯೂ ಹೊರಹೊಮ್ಮುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ: ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಜಾನಪದ ಉತ್ಸವ : ಸಿಎಂ ಬಸವರಾಜ ಬೊಮ್ಮಾಯಿ

Last Updated : Apr 11, 2022, 10:31 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.