ETV Bharat / city

ಬಿಪಿನ್ ರಾವತ್ ಓರ್ವ ಶ್ರೇಷ್ಠ ನಾಯಕ: ಸಿಎಂ ಬೊಮ್ಮಾಯಿ - ಏರ್ ಫೋರ್ಸ್ ತನಿಖೆ

ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್​ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

cm-basavaraj-bommai
ಸಿಎಂ ಬಸವರಾಜ ಬೊಮ್ಮಾಯಿ
author img

By

Published : Dec 9, 2021, 12:31 PM IST

ಬೆಂಗಳೂರು: ಹೆಲಿಕಾಪ್ಟರ್ ದುರಂತದಲ್ಲಿ ಮೃತರಾದ ಬಿಪಿನ್ ರಾವತ್ ಓರ್ವ ಶ್ರೇಷ್ಠ ನಾಯಕ. ರಾವತ್ ನಿಧನದಿಂದ ದೇಶವೇ ದಿಗ್ಬ್ರಾಂತಿಗೆ ಒಳಗಾಗಿದೆ ಹಾಗೂ ದುಃಖದಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಇಂದು ಡಿಆರ್​ಡಿಓ ಹಾಗೂ ಡಿಎಫ್​ಆರ್​ಎಲ್ ವತಿಯಿಂದ ಆಯೋಜಿಸಿದ್ದ ಸಶಸ್ತ್ರ ಪಡೆಗಳಿಗೆ ಆಹಾರ ಮತ್ತು ಲಾಜಿಸ್ಟಿಕ್ಸ್ ನೆರವು ಕುರಿತ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ ನಂತರ ಸಿಎಂ ಮಾಧ್ಯಮಗಳ ಜೊತೆ ಮಾತನಾಡಿದರು.

ಈ ಘಟನೆ ಯಾಕೆ ಆಯ್ತು, ಹೇಗಾಯ್ತು ಅನ್ನೋದು ತುಂಬಾ ಮುಖ್ಯವಾಗುತ್ತದೆ. ಈಗಾಗಲೇ ಏರ್ ಫೋರ್ಸ್ ತನಿಖೆ ಆರಂಭಿಸಿದೆ ಎಂದರು.

ರಾವತ್ ಒಬ್ಬ ಶ್ರೇಷ್ಠ ನಾಯಕ. ಸೈನ್ಯವನ್ನು ‌ಮುಂಚೂಣಿಯಲ್ಲಿ ನಿಂತು ಅವರು ಮುನ್ನಡೆಸುತ್ತಿದ್ದರು. ಯುದ್ದಗಳಲ್ಲಿ ಹೊಸ ಹೊಸ ವಿಧಾನವನ್ನು ಅಳವಡಿಸಿಕೊಂಡು ಅನುಷ್ಠಾನ ಮಾಡಿದ್ದರು. ಭಾರತ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ಅತ್ಮನಿರ್ಭರ ಆಗಬೇಕು ಎಂಬ ಹಂಬಲ ಅವರಲ್ಲಿತ್ತು. ಅವರ ಕಾಲದಲ್ಲಿ ಶಸ್ತ್ರಾಸ್ತ್ರದಲ್ಲಿ ಭಾರತೀಕರಣವಾಯ್ತು ಎಂದು ಹೇಳಿದರು.

cm-basavaraj-bommai
ಡಿಆರ್​ಡಿಓ ಹಾಗೂ ಡಿಎಫ್​ಆರ್​ಎಲ್ ವಸ್ತು ಪ್ರದರ್ಶನ ಉದ್ಘಾಟಿಸಿದ ಸಿಎಂ

DRDO ಮತ್ತು ಡಿಫೆನ್ಸ್‌ ಬಯಲಾಜಿಕಲ್‌ ಲ್ಯಾಬ್ ಉತ್ತಮ ಕೆಲಸ ಕಾರ್ಯಗಳಲ್ಲಿ ಅವರ ಪ್ರೇರಣೆ ಇದೆ. ಭಾರತ ದೇಶದ ಸುರಕ್ಷತೆಯ ದೃಷ್ಟಿಯಲ್ಲಿ ಹಿಂದೆಂದೂ ತೆಗೆದುಕೊಳ್ಳಲಾಗದ ದಿಟ್ಟ ನಿಲುವುಗಳನ್ನು ರಾವತ್ ತಗೆದುಕೊಂಡಿದ್ದಾರೆ.

ಉತ್ತರ ಚೀನಾ ಗಡಿ ಭಾಗದಲ್ಲಿ ನಡೆದ ಸಂಘರ್ಷದ ಪರಿಸ್ಥಿತಿಯಲ್ಲಿ ಚೀನಾ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ರಾವತ್ ನಾಯಕತ್ವ ಯಶಸ್ವಿಯಾಗಿತ್ತು. ಅವರ ನಾಯಕತ್ವ ಇವತ್ತಿನ ದಿನಮಾನಗಳಲ್ಲಿ ತುಂಬಾ ಅವಶ್ಯಕತೆ ಇದೆ. ಅವರ ಸೇವೆಯನ್ನು ಗುರುತಿಸಿ ಮೂರು ಪಡೆಯ ನಾಯಕತ್ವವನ್ನು ಮೋದಿಯವರು ಅವರಿಗೆ ನೀಡಿದ್ದರು. ಇಂಥ ಮಹಾನ್ ವ್ಯಕ್ತಿಯನ್ನು ಇಡೀ ಸೇನೆ ಮಾತ್ರವಲ್ಲ ಭಾರತ ದೇಶವೇ ಕಳೆದುಕೊಂಡಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.