ದೊಡ್ಡಬಳ್ಳಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಕುಟುಂಬಸಮೇತರಾಗಿ ತಮ್ಮ ಒಡೆತನದ ಕಾರ್ಖಾನೆಗೆ ಭೇಟಿ ನೀಡಿ, ಆಯುಧ ಪೂಜೆಯಲ್ಲಿ ಪಾಲ್ಗೊಂಡರು.

ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿ ಇರುವ ಮ್ಯಾಗ್ನಾಟಿಕ್ ಹಾಗೂ ರೇಣುಕಾ ಇಂಡಸ್ಟ್ರೀಸ್ ಆಟೋಮೊಬೈಲ್ ಫ್ಯಾಕ್ಟರಿಗೆ ಕುಟುಂಬಸಮೇತ ತೆರಳಿ ಪೂಜೆ ಸಲ್ಲಿಸಿದ ಸಿಎಂ, ನಂತರ ಉದ್ಯೋಗಿಗಳ ಜೊತೆ ಕಾಲ ಕಳೆದು ಸಿಬ್ಬಂದಿಯ ಯೋಗಕ್ಷೇಮ ವಿಚಾರಿಸಿ ಬೋನಸ್ ನೀಡಿದರು.
