ಬೆಂಗಳೂರು : ಧೈರ್ಯವಾಗಿರಿ, ನಿಮ್ಮನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವ ಜವಾಬ್ದಾರಿ ನಮ್ಮದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಉತ್ತರಪ್ರದೇಶದ ಅಯೋಧ್ಯೆ ಬಳಿ ನಡೆದ ಅಪಘಾತದಲ್ಲಿ ಬದುಕಿ ಉಳಿದ ಗಾಯಾಳುಗಳೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಧೈರ್ಯ ತುಂಬಿದರು.
ಉತ್ತರಪ್ರದೇಶದ ಅಯೋಧ್ಯೆ ಬಳಿ ನಡೆದ ಅಪಘಾತದಲ್ಲಿ ಬದುಕಿ ಉಳಿದ ಗಾಯಾಳುಗಳೊಂದಿಗೆ ದೂರವಾಣಿ ಕರೆ ಮೂಲಕ ಸಿಎಂ ಮಾತುಕತೆ ನಡೆಸಿ ಅಪಘಾತದ ಮಾಹಿತಿ ಪಡೆದರು. ಸಂಪೂರ್ಣ ಗುಣಮುಖರಾಗುವವರೆಗೂ ಅಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗಿ ಬನ್ನಿ, ನಿಮ್ಮನ್ನು ಸುರಕ್ಷಿತವಾಗಿ ಕರೆತರುವ ಜವಾಬ್ದಾರಿ ನಮ್ಮದು. ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ, ಯಾವುದೇ ನೆರವು ಬೇಕಾದರೂ ಸರ್ಕಾರವನ್ನು ಸಂಪರ್ಕಿಸಿ. ರಾಜ್ಯದ ಅಧಿಕಾರಿಗಳ ತಂಡವನ್ನೂ ಸ್ಥಳಕ್ಕೆ ಕಳುಹಿಸಿಕೊಡುತ್ತೇವೆ ಎಂದು ಗಾಯಾಳುಗಳಿಗೆ ಸಿಎಂ ಅಭಯ ನೀಡಿದರು.
ಮೃತ ದೇಹಗಳನ್ನು ಕರೆತರಲು ಕ್ರಮಕೈಗೊಳ್ಳಲಾಗಿದೆ. ಅಲ್ಲಿನ ಸರ್ಕಾರದ ಮುಖ್ಯಕಾರ್ಯದರ್ಶಿ, ಜಿಲ್ಲಾಧಿಕಾರಿ ಜೊತೆ ಮಾತುಕತೆ ನಡೆಸಿದ್ದೇವೆ ಎಂದು ಧೈರ್ಯದ ಮಾತುಗಳನ್ನಾಡಿದರು.
ಇದನ್ನೂ ಓದಿ: ಯುಪಿಯಲ್ಲಿ ಅಪಘಾತ, ಬೀದರ್ನ 7 ಮಂದಿ ಸಾವು: ಸಂತ್ರಸ್ತರ ನೆರವಿಗೆ ಸಿಎಂ ಯೋಗಿ ಜೊತೆ ಬೊಮ್ಮಾಯಿ ಮಾತುಕತೆ